ಚೆನ್ನೈ, (ಮೇ.19): ತಮಿಳಿನ ಖ್ಯಾತ ನಟ, ರಾಜಕಾರಣಿ ವಿಜಯ್ ಕಾಂತ್ ತೀವ್ರ ಅನಾರೋಗ್ಯದಿಂದಾಗಿ ಇಂದು (ಬುಧವಾರ) ಆಸ್ಪತ್ರೆಗೆ ದಾಖಲಾಗಿದ್ದಾರೆ.

 ಉಸಿರಾಟದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ವಿಜಯ್ ಕಾಂತ್ ರನ್ನು ಬೆಳಗಿನ ಜಾವ 3 ಗಂಟೆಗೆ ಚೆನ್ನೈನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಬಗ್ಗೆ ಹೆಚ್ಚಿನ ಮಾಹಿತಿ ಬಂದಿಲ್ಲ. 

1,250 ಕೋಟಿ ರೂ ಪ್ಯಾಕೇಜ್ ಪರಿಹಾರ, ಎಬಿಡಿ ನಿರ್ಧಾರಕ್ಕೆ ಫ್ಯಾನ್ಸ್ ಬೇಸರ; ಮೇ.19ರ ಟಾಪ್ 10 ಸುದ್ದಿ!

ಕಳೆದ ಸೆಪ್ಟೆಂಬರ್ ನಲ್ಲಿ ವಿಜಯ್ ಕಾಂತ್‌ಗೆ ಕೊರೋನಾ ವೈರಸ್ ತಗುಲಿತ್ತು.ಇದಾದ ಬಳಿಕ ಅವರಿಗೆ ಪದೇ ಪದೇ ಆರೋಗ್ಯ ಕೈ ಕೊಡುತ್ತಲೇ ಇದೆ. 

ಸೆಪ್ಟೆಂಬರ್ 22 ರಂದು ಕೋವಿಡ್ -19 ಸೋಂಕಿಗೆ ತುತ್ತಾಗಿದ್ದ ವಿಜಯಕಾಂತ್ ನಂತರ ಅವರ ಪತ್ನಿ ಪ್ರೇಮಲತಾ ವಿಜಯಕಾಂತ್ ಕೂಡ ಕೋವಿಡ್ ಸೋಂಕಿನಿಂದ ಬಳಲಿದ್ದರು. ಇಬ್ಬರೂ ಅಕ್ಟೋಬರ್ 2ರಂದು ಚೇತರಿಕೆ ಹೊಂದಿ ಮನೆಗೆ ತೆರಳಿದ್ದರು.