ಕರ್ನಾಟಕದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವಿನೊಂದಿಗೆ ಸರ್ಕಾರ ರಚಿಸುವ ಕಸರತ್ತಿನಲ್ಲಿದ್ದರೆ, ಅತ್ತ ಪಂಜಾಬ್‌ನಲ್ಲಿ ಕಾಂಗ್ರೆಸ್ ನಾಯಕ ಕುಶಾಲದೀಪ್ ಸಿಂಗ್ ದಿಲಲೋನ್ ಅರೆಸ್ಟ್ ಆಗಿದ್ದಾರೆ.
ಚಂಡಿಘಡ(ಮೇ.16): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಐತಿಹಾಸಿಕ ಗೆಲುವು ಸಾಧಿಸಿದೆ. ಇದೀಗ ಸರ್ಕಾರ ರಚನೆ ಕಸರತ್ತು ಶುರುಮಾಡಿದೆ. ಆದರೆ ಪಂಜಾಬ್‌ನಲ್ಲಿ ಕಾಂಗ್ರೆಸ್ ಮತ್ತೊಂದು ಹಿನ್ನಡೆ ಎದುರಿಸಿದೆ. ಕಾಂಗ್ರೆಸ್ ಮಾಜಿ ಶಾಸಕ, ಕುಶಾಲದೀಪ್ ಸಿಂಗ್ ದಿಲ್ಲೋನ್ ಅರೆಸ್ಟ್ ಆಗಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಲುಕಿರುವ ಕುಶಾಲದೀಪ್ ಸಿಂಗ್ ದಿಲ್ಲೋನ ಅವರನ್ನು ಪಂಜಾಬ್ ವಿಜಿಲೆನ್ಸ್ ಬ್ಯೂರೋ ಪೊಲೀಸರು ಬಂಧಿಸಿದ್ದಾರೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ನಾಯಕತ್ವದ ಕಾಂಗ್ರೆಸ್ ಅಧಿಕಾರದಲ್ಲಿ ಸಿಎಂ ಸಲಹೆಗಾರರಾಗಿ ನೇಮಕೊಂಡಿದ್ದ ಕುಶಾಲದೀಪ್ ಇದೀಗ ಭಾರಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ.
ಕುಶಾಲದೀಪ್ ಸಿಂಗ್ ದಿಲ್ಲೋನ ಹಾಗೂ ಆಪ್ತರ ವಿರುದ್ಧ 2022ರಲ್ಲಿ ಅಕ್ರಮ ಆಸ್ತಿಗಳಿಕೆ ಪ್ರಕರಣ ದಾಖಲಾಗಿತ್ತು. ಈ ಕುರಿತು ಪಂಜಾಬ್ ವಿಜಿಲೆನ್ಸ್ ಬ್ಯೂರ್ ವಿಸ್ತೃತ ತನಿಖೆ ಕೈಗೊಂಡಿದೆ. ಈ ತನಿಖೆಯಲ್ಲಿ ಎಪ್ರಿಲ್ 1, 2027 ರಿಂದ ಮಾರ್ಚ್ 31, 2022ರ ವರೆಗೆ ಕುಶಾಲದೀಪ್ ಸಿಂಗ್ ದಿಲ್ಲೋನ ಅವರ ಆಸ್ತಿ ಕುರಿತು ಕೂಲಂಕೂಷವಾಗಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಭಾರಿ ಪ್ರಮಾಣದಲ್ಲಿ ಆಸ್ತಿ ಏರಿಕಯಾಗಿದ್ದು ಪತ್ತೆಯಾಗಿದೆ.
ದುಬೈ ಬಿಸಿನೆಸ್ ಬಿಟ್ಟು ಉಗ್ರನಾದ ಅಮೃತ್‌ಪಾಲ್ ಸಿಂಗ್: ಪಂಜಾಬ್ ಬದಲು ಅಸ್ಸಾಂ ಜೈಲಿಗೆ ಹಾಕಿದ್ದೇಕೆ!
ದಿಲ್ಲೋನ ಒಟ್ಟು ಆಸ್ತಿ ಹಾಗೂ ಆದಾಯಕ್ಕೆ ತಾಳೆಯಾಗಿಲ್ಲ. ಆದಾಯಕ್ಕಿಂತ ಮೀರಿ ಆಸ್ತಿ ಸಂಪಾದಿಸಿರುವುದು ಪತ್ತೆಯಾಗಿತ್ತು. ಕುಶಾಲದೀಪ್ ಸಿಂಗ್ ದಿಲ್ಲೋನ ಅವರ ಆದಾಯಕ್ಕಿಂತ ಶೇಕಡಾ 245ಕ್ಕಿಂತು ಆಸ್ತಿ ಸಂಪಾದಿಸಿದ್ದಾರೆ. ಹೀಗಾಗಿ ಭ್ರಷ್ಟಾಚಾರ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಇದೀಗ ಪಂಜಾಬ್ ವಿಜಿಲೆನ್ಸ್ ಬ್ಯೂರೋ ಪೊಲೀಸ್ ದಿಲ್ಲೋನ ಬಂಧಿಸಿದ್ದಾನೆ. ನಾಳೆ(ಮೇ.17) ದಿಲ್ಲೋನ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ.
ತನಿಖೆ ವೇಳೆ ಫರಿದಾಕೋಟ್ ಮಾಜಿ ಶಾಸಕನನ್ನು ಈಗಾಗಲೇ ವಿಜಿಲೆನ್ಸ್ ಬ್ಯೂರೋ ವಿಚಾರಣೆ ನಡೆಸಿತ್ತು. ಆದರೆ ಸಮಪರ್ಕ ಉತ್ತರ ಹಾಗೂ ದಾಖಲೆ ನೀಡಲು ದಿಲ್ಲೋನ ವಿಫಲರಾಗಿದ್ದರು. ಇದೀಗ ಬಂಧನಕ್ಕೊಳಗಾಗಿದ್ದಾರೆ. ಇತ್ತ ಕುಶಾಲದೀಪ್ ಸಿಂಗ್ ದಿಲ್ಲೋನ್, ಇದು ರಾಜಕೀಯ ಷಡ್ಯಂತ್ರ ಎಂದು ಆರೋಪಿಸಿದ್ದಾರೆ. ಆಮ್ ಆದ್ಮಿ ಪಾರ್ಟಿ ಸೇಡು ತೀರಿಸಿಕೊಳ್ಳುತ್ತಿದೆ. ಆಪ್ ಸರ್ಕಾರ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ.ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಮೇಲೆ ಆತ್ಮಾಹುತಿ ದಾಳಿಗೆ ಸಂಚು: ಬೆದರಿಕೆ ಪತ್ರ ಬರೆದಿದ್ದ ಆರೋಪಿ ಅರೆಸ್ಟ್
ಕ್ಯಾಪ್ಟನ್ ಆಮರಿಂದರ್ ಸಿಂಗ್ ಅವರ ಆಪ್ತರಾಗಿದ್ದ ಕುಶಾಲದೀಪ್ ಸಿಂಗ್ ದಿಲ್ಲೋನ, ಕಾಂಗ್ರೆಸ್ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸ್ಥಾನ ಹೊಂದಿದ್ದರು. ಬಳಿಕ ಅಮರಿಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿಸ್ಥಾನದಿಂದ ಕೆಳಗಿಳಿಸಿ ಚರಣಜಿತ್ ಸಿಂಗ್ ಚನಿ ಅವರಿಗೆ ನಾಯಕತ್ವ ನೀಡಲಾಗಿತ್ತು. ಇತ್ತ ಕ್ಯಾಪ್ಟನ್ ಅಮರಿಂದರ್ ಸಿಂಗ್ ಲೋಕ ಕಾಂಗ್ರೆಸ್ ಪಕ್ಷ ಸ್ಥಾಪಿಸಿ ಬಳಿಕ ಬಿಜೆಪಿ ಜೊತೆ ವಿಲೀನಗೊಳಿಸಿದರು. ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಿಜೆಪಿ ಸೇರಿಕೊಂಡರೂ, ಕುಶಾಲದೀಪ್ ಸಿಂಗ್ ದಿಲ್ಲೋನ ಕಾಂಗ್ರೆಸ್‌ನಲ್ಲೇ ಉಳಿದುಕೊಂಡರು.
