ಸಂಸತ್ ದಾಳಿಗೆ ಕೆರಳಿದ ಪ್ರತಿಪಕ್ಷ,ಲೋಕಸಭೆಯಿಂದ 14 ಸಂಸದರ ಅಮಾನತು!

ಸಂಸತ್ ಮೇಲೆ ದಾಳಿ ಮಾಡಿದ ಘಟನೆ ಖಂಡಿಸಿ ಪ್ರತಿಪಕ್ಷಗಳು ಸದನದಲ್ಲಿ ಭಾರಿ ಗದ್ದಲ ಸೃಷ್ಟಿಸಿದೆ. ಅಶಿಸ್ತು ನಡೆ, ನಿಯಮ ಉಲ್ಲಂಘಿಸಿದ ಪ್ರತಿಪಕ್ಷ ಸಂಸದರು ಬಾವಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಸ್ಪೀಕರ್ 14 ಸಂಸದರನ್ನು ಅಮಾನತು ಮಾಡಿದ್ದಾರೆ.

Disorderly conduct 14 Lok sabha MPs suspend by Speaker after Parliament attack protest ckm

ನವದೆಹಲಿ(ಡಿ.14) ದೇಶದ ರಾಜಕೀಯ ಇತಿಹಾಸದಲ್ಲಿ ಇಂದು ಗರಿಷ್ಠ ಸಂಸದರು, ಅಧಿಕಾರಿಗಳು ಅಮಾನತಾಗಿರು ದಿನವಾಗಿದೆ. ನಿನ್ನೆ ಸಂಸತ್ ಮೇಲೆ ನಡೆದ ದಾಳಿ ಖಂಡಿಸಿ ವಿಪಕ್ಷಗಳು ಭಾರಿ ಪ್ರತಿಭಟನೆ ನೆಸಿದೆ. ರಾಜ್ಯಸಭೆ ಬಳಿಕ ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿ ಅಶಿಸ್ತು ತೋರಿದ 14 ಸಂಸದರನ್ನು ಸ್ಪೀಕರ್ ಅಮಾನತು ಮಾಡಿದ್ದಾರೆ. ಲೋಕಸಭೆಯಲ್ಲಿ ನಡೆದ ಭಾರಿ ಭದ್ರತಾ ಲೋಪದ ಹೊಣೆಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಹೊಣೆಹೊತ್ತು ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಸಂಸದರು ಭಾರಿ ಗದ್ದಲ ನಡೆಸಿದ್ದಾರೆ. ಇದರ ಪರಿಣಾಮ 14 ಸಂಸದರನ್ನು ಅಮಾನತು ಮಾಡಿದ್ದಾರೆ.

ಕೇಂದ್ರ ಸರ್ಕಾರದ ತೋರಿದ ನಿರ್ಲಕ್ಷ್ಯ, ಭದ್ರತಾ ವೈಫಲ್ಯಕ್ಕೆ ಪ್ರತಿಪಕ್ಷಗಳು ಸ್ಪೀಕರ್ ಎಚ್ಚರಿಕೆ ಲೆಕ್ಕಿಸದೆ ಪ್ರತಿಭಟನೆ ನಡೆಸಿದ್ದಾರೆ. ಸದನದಲ್ಲಿ ಅಶಿಸ್ತು ತೋರಿದ ಕಾರಣಕ್ಕೆ ಸ್ಪೀಕರ್ ಒಂ ಬಿರ್ಲಾ 14 ಸಂಸದರನ್ನು ಅಮಾನತು ಮಾಡಿದ್ದರೆ. ಸಂಸದರಾದ ಟಿಎನ್ ಪ್ರತಾಪನ್, ಹಿಬಿ ಇಡನ್, ಎಸ್ ಜ್ಯೋತಿಮಣಿ, ರಮ್ಯಾ ಹರಿದಾಸ್, ಡೀನ್ ಕುರಿಯಾಕೋಸ್, ಬೆನ್ನಿ ಬೆಹನಾನ್, ವಿಕೆ ಶ್ರೀಕಂಠನ್, ಮೊಹಮ್ಮದ್ ಜಾವೇದ್, ಪಿಆರ್ ನಟರಾಜನ್, ಕನ್ನಿಮೊಳಿ ಕರುಣಾನಿಧಿ, ಕೆ ಸುಬ್ರಹ್ಮಮಣ್ಯಂ, ಎಸ್ ಆರ್ ಪ್ರತಿಭನ್, ಎಸ್  ವೆಂಕಟೇಶನ್ ಹಾಗೂ ಮಣಿಕಂ ಠಾಗೋರ್ ಅಮಾನತಾಗಿದ್ದಾರೆ. ಈ ಸಂಸದರನ್ನು ಸಂಪೂರ್ಣ ಚಳಿಗಾಲದ ಅಧಿವೇಶನದಿಂದ ಅಮಾನತು ಮಾಡಲಾಗಿದೆ. 

ಟಿಎಂಸಿಗೆ ಮತ್ತೊಂದು ಶಾಕ್, ರಾಜ್ಯಸಭೆಯಿಂದ ಸಂಸದ ಡರೇಕ್ ಒಬ್ರಿಯನ್ ಅಮಾನತು!

ಲೋಕಸಭೆಯಿಂದ 14 ಸಂಸದರು ಅಮಾನತ್ತಾಗಿದ್ದರೆ, ರಾಜ್ಯಸಭೆಯಲ್ಲಿ ಇಂದು ಬೆಳಗ್ಗೆ ಟಿಎಂಸಿ ಸಂಸದ ಡರೇಕ ಒಬ್ರಿಯಾನ್ ಅಮಾನತ್ತಾಗಿದ್ದರು. ಸಂಸತ್ ಮೇಲಿನ ದಾಳಿ ಚರ್ಚೆಗೆ ಅವಕಾಶ, ಹೊಣೆ ಹೊತ್ತು ರಾಜೀನಾಮೆ ಸೇರಿದಂತೆ ಹಲವು ಆಗ್ರಹ ಮುಂದಿಟ್ಟು ಪ್ರತಿಪಕ್ಷಗಳು ರಾಜ್ಯಸಬೆಯಲ್ಲಿ ಗದ್ದಲ ನಡೆಸಿತ್ತು. ಈ ವೇಳೆ ಟಿಎಂಸಿ ಸಂಸದ ಡರೇಕ್ ಒಬ್ರಿಯಾನ್ ಸದನದ ಭಾವಿಗಿಳಿದು ಭಾರಿ ಗದ್ದಲ ನಡೆಸಿದ್ದರು. ಸಭಾಪತಿ ಜಗದೀಪ್ ಧನ್ಕರ್ ಸೂಚನೆ ಹೊರತಾಗಿಯೂ ಶಿಸ್ತು ಉಲ್ಲಂಘಿಸಿದ ಡರೇಕ್ ಒಬ್ರಿಯಾನ್ ಅವರನ್ನು ಸಭಾಪತಿ ಅಮಾನತು ಮಾಡಿದ್ದರು.

ಪ್ರತಿಪಕ್ಷಗಳು ಇಂದು ಮಹತ್ವದ ಸಭೆ ನಡಸೆ ಹಲವು ಬೇಡಿಕೆ ಮುಂದಿಟ್ಟಿದೆ. ಪಾಸ್ ನೀಡಿ ಸಂಸತ್ ಭದ್ರತಾ ಲೋಪಕ್ಕೆ ಮುಖ್ಯ ಕಾರಣವಾಗಿರುವ ಸಂಸದ ಪ್ರತಾಪ್ ಸಿಂಹ ಅವರ ಸಂಸದ ಸ್ಥಾನ ರದ್ದು ಮಾಡುವಂತೆ ಆಗ್ರಹಿಸಿದ್ದಾರೆ. ಇದೇ ವೇಳೆ ಭದ್ರತಾ ವೈಫಲ್ಯದ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕು. ತನಿಖೆಯಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದು ಪ್ರತಿಪಕ್ಷಗಳು ಆಗ್ರಹಿಸಿತ್ತು.

ಸಂಸತ್‌ನಲ್ಲಿ ಭದ್ರತಾ ಲೋಪ: 8 ಲೋಕಸಭೆ ಸಿಬ್ಬಂದಿ ಅಮಾನತು, ಆರೋಪಿಗಳ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು

Latest Videos
Follow Us:
Download App:
  • android
  • ios