ರಾಜ್ಯದಲ್ಲಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಳವಾಗಿದ್ದು, ವೈದ್ಯರ ಕೊರತೆ ಎದುರಾಗಿದೆ. ಇದನ್ನು ನೀಗಿಸಲು ವೈದ್ಯಕೀಯ ಡಿಪ್ಲೊಮೋ ಕೋರ್ಸ್‌ಗಳನ್ನು ಆರಂಭಿಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲಹೆ ನೀಡಿದ್ದಾರೆ.
ಕೋಲ್ಕತಾ: ರಾಜ್ಯದಲ್ಲಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಳವಾಗಿದ್ದು, ವೈದ್ಯರ ಕೊರತೆ ಎದುರಾಗಿದೆ. ಇದನ್ನು ನೀಗಿಸಲು ವೈದ್ಯಕೀಯ ಡಿಪ್ಲೊಮೋ ಕೋರ್ಸ್‌ಗಳನ್ನು ಆರಂಭಿಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲಹೆ ನೀಡಿದ್ದಾರೆ. ಅಲ್ಲದೇ ನರ್ಸ್‌ಗಳಿಗೆ ‘ಅರೆ ವೈದ್ಯರು’ ಎಂದು ಪದೋನ್ನತಿ ಕೊಡಲು ಸಹ ಸೂಚಿಸಿದ್ದಾರೆ.
ಬುಧವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಮತಾ, ಡಿಪ್ಲೊಮೋ ಪದವಿ ಪಡೆದ ಬಳಿಕ ಈ ವೈದ್ಯರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಿಯೋಜಿಸಬಹುದು. ಡಿಪ್ಲೋಮಾ ಕೋರ್ಸ್‌ನ ಅವಧಿಯಲ್ಲಿ ಹಿರಿಯ ವೈದ್ಯರು ಇವರಿಗೆ ತರಬೇತಿ ನೀಡಬಹುದು. ಇದಕ್ಕಾಗಿ ಆಸ್ಪತ್ರೆಗಳಲ್ಲಿ ನಿರ್ಮಾಣ ಮಾಡಿರುವ ಸಭಾಂಗಣಗಳು ಅಥವಾ ಇತರ ಸರ್ಕಾರಿ ಸಭಾಂಗಣಗಳನ್ನು ಬಳಕೆ ಮಾಡಿಕೊಳ್ಳಬಹುದು. ಈಗಿರುವ ಶಿಕ್ಷಣ ನೀತಿಯ ಪ್ರಕಾರ ವೈದ್ಯರನ್ನು ತಯಾರು ಮಾಡಲು 5 ವರ್ಷಗಳ ಕಾಲಾವಕಾಶ ಬೇಕು. ಈ ಅವಧಿಯಲ್ಲಿ ಅವರ ಸೇವೆಯನ್ನು ಪಡೆದುಕೊಳ್ಳಲು ಕಿರಿಯ ವೈದ್ಯರಾಗಿ ಸೇವೆ ಸಲ್ಲಿಸಲು ಅವರಿಗೆ ಅವಕಾಶ ನೀಡಬೇಕು ಎಂದು ಅವರು ಹೇಳಿದರು.
The Kerala Story ಚಿತ್ರ ನಿಷೇಧ ಮಾಡಿದ ಪಶ್ಚಿಮ ಬಂಗಾಳ, ದೀದಿ ವಿರುದ್ಧ ಬೀದಿಗಿಳಿದ ಬಿಜೆಪಿ!
ಅಲ್ಲದೇ ನರ್ಸ್‌ಗಳಿಗೆ ಅರೆಕಾಲಿಕ ವೈದಯರು ಎಂದು ಬಡ್ತಿಯನ್ನು ನೀಡಬೇಕು. 15 ದಿನಗಳ ತರಬೇತಿಯ ಬಳಿಕ ನರ್ಸ್‌ಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಆದರೆ ಮಮತಾ ಅವರ ಈ ಸಲಹೆಗಳಿಗೆ ವಿರೋಧ ವ್ಯಕ್ತಪಡಿಸಿರುವ ಸರ್ಕಾರಿ ನೌಕರರು, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಟ್ರೆಡ್‌ಮಿಲ್‌ನಲ್ಲಿ ನಾಯಿಮರಿಯೊಂದಿಗೆ ದೀದೀ ವರ್ಕೌಟ್: ವೀಡಿಯೋ ವೈರಲ್
ರಾಜಕೀಯ ಚಟುವಟಿಕೆಯ ಕಾರಣಗಳಿಂದಾಗಿ ಸದಾ ಕಾಲ ಬ್ಯುಸಿಯಾಗಿರುವ ಪಶ್ಚಿಮ ಬಂಗಾಳ ಸಿಎಂ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಜಿಮ್‌ನಲ್ಲಿ ವರ್ಕ್‌ಔಟ್ ಮಾಡ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ನಾಯಿಮರಿಯನ್ನು ಹಿಡಿದುಕೊಂಡು ಮಮತಾ ಬ್ಯಾನರ್ಜಿ ಟ್ರೆಡ್‌ಮಿಲ್‌ನಲ್ಲಿ ನಡೆಯುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು, ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವತಃ ಮಮತಾ ಬ್ಯಾನರ್ಜಿ ಅವರು ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಕೆಲ ದಿನಗಳಲ್ಲಿ ನೀವು ಸ್ವಲ್ಪ ಹೆಚ್ಚು ಉತ್ತೇಜನ ಪಡೆಯಬೇಕಾಗುತ್ತದೆ ಎಂದು ಅವರು ಬರೆದುಕೊಂಡಿದ್ದು ನಾಯಿ ಮರಿಯ ಇಮೋಜಿಯನ್ನು ಹಾಕಿದ್ದಾರೆ, ವೀಡಿಯೋದಲ್ಲಿ ನಾಯಿಮರಿಯನ್ನು ಕೈಯಲ್ಲಿ ಹಿಡಿದುಕೊಂಡು ಟ್ರೆಡ್‌ಮಿಲ್‌ನಲ್ಲಿ ನಡೆಯುತ್ತಿರುವುದು ಕಾಣಿಸುತ್ತಿದೆ. ಆದರೆ ಈ ವಿಡಿಯೋಗೆ ಕಾಮೆಂಟ್‌ಗಳನ್ನು ಆಫ್ ಮಾಡಲಾಗಿದೆ. ಕಂದು ಬಣ್ಣದ ಪುಟ್ಟ ನಾಯಿ ಮರಿ ದೀದೀ ಮಮತಾ ಕೈಯಲ್ಲಿದೆ. ಮಮತಾ ಬ್ಯಾನರ್ಜಿಯವರು ಯಾವಾಗಲೂ ವ್ಯಾಯಾಮ ಹಾಗೂ ದೈಹಿಕ ಕಸರತ್ತಿನ ಬಗ್ಗೆ ಸದಾ ಮಾತನಾಡುತ್ತಿರುತ್ತಾರೆ ಹಾಗೂ ಸಲಹೆಗಳನ್ನು ನೀಡುತ್ತಿರುತ್ತಾರೆ. 2019ರಲ್ಲಿ ಅವರು ಡಾರ್ಜಿಲಿಂಗ್‌ಗೆ 10 ಕಿಲೋ ಮೀಟರ್‌ಗಳಷ್ಟು ದೂರ ಜಾಗಿಂಗ್ ಮಾಡಿ ವ್ಯಾಯಾಮಯ ಹಾಗೂ ದೈಹಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದರು.
ನಾನು ಅಮಿತ್ ಶಾ ಗೆ ಕರೆ ಮಾಡಿರುವುದು ಸಾಬೀತಾದ್ರೆ ರಾಜೀನಾಮೆ ಕೊಡ್ತೇನೆ ಎಂದು ದೀದಿ ಹೇಳಿದ್ಯಾಕೆ?
68 ವರ್ಷದ ಮಮತಾ ಬ್ಯಾನರ್ಜಿ ರಾಜಕೀಯದಲ್ಲೇ ಸುಮಾರು 5 ದಶಕಗಳನ್ನು ಕಳೆದಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಾಲಿನ ಬದ್ಧವೈರಿ ಎನಿಸಿದ್ದಾರೆ. ಇತ್ತೀಚೆಗೆ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಕರ್ನಾಟಕ ವಿಧಾನಸಭೆ ಚುನಾವಣೆಯ (Karnataka Assembly polls) ಫಲಿತಾಂಶದೊಂದಿಗೆ ಬಿಜೆಪಿಯ ಅವಸಾನ ಆರಂಭವಾದರೆ ತನಗೆ ಖುಷಿಯಾಗುವುದಾಗಿ ಅವರು ಹೇಳಿದ್ದರು. ಕರ್ನಾಟಕದಲ್ಲಿ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ.10 ರಂದು ಚುನಾವಣೆ ನಡೆದಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ.
ಶ್ರೇಷ್ಠತೆಗಾಗಿ ಭಾರತ ಬದಲಾವಣೆಗೆ ಅರ್ಹವಾಗಿದೆ. ಇಲ್ಲಿ ಜನರ ಶಕ್ತಿಗಿಂತ ದೊಡ್ಡ ಶಕ್ತಿ ಇಲ್ಲ, ಸುಳ್ಳು ಭರವಸೆ ನೀಡುವ ರಾಜಕೀಯದ ವಿರುದ್ಧ ಎಲ್ಲರೂ ಒಂದಾಗಬೇಕು ಎಂದು ನಾನು ಒತ್ತಾಯಿಸುತ್ತೇನೆ. ಎಲ್ಲಾ ವಿರೋಧ ಪಕ್ಷಗಳು ಜೊತೆಯಾದರೆ ಬಿಜೆಪಿ ಈ ಯುದ್ಧದಲ್ಲಿ ಸೋಲುತ್ತದೆ ಮತ್ತು ಒಡೆದು ಆಳುವ ಶಕ್ತಿಯ ವಿರುದ್ಧದ ಯುದ್ಧದಲ್ಲಿ ಭಾರತ ಗೆಲ್ಲುತ್ತದೆ ಎಂದು ಮಮತಾ ಬ್ಯಾನರ್ಜಿ (Mamata Benerjee) ಇತ್ತೀಚೆಗೆ ಟ್ವಿಟ್ ಮಾಡಿದ್ದರು.
