ಭಾರತ ಜಿಂದಾಬಾದ್, ಭಾರತೀಯ ನೌಕಾಪಡೆಯಿಂದ ನಮ್ಮ ಜೀವ ಉಳಿಯಿತು. ನಮ್ಮ ಹಡುಗು ಉಳಿಯಿತು ಎಂದು 23 ಪಾಕಿಸ್ತಾನಿ ಸಿಬ್ಬಂದಿಗಳು ಹೇಳಿದ್ದಾರೆ. ಇದೀಗ ಪಾಕಿಸ್ತಾನ ಸಿಬ್ಬಂದಿಗಳು ಭಾರತ ಜಿಂದಾಬಾದ್ ಘೋಷಣೆ ಕೂಗುತ್ತಿರುವ ವಿಡಿಯೋ ವೈರಲ್ ಆಗಿದೆ.  

ನವದೆಹಲಿ(ಮಾ.30) ಭಾರತೀಯ ನೌಕಾಸೇನೆಯ ಕ್ಷಿಪ್ರ ಕಾರ್ಯಾಚರಣೆಯಿಂದ ಅರಬ್ಬಿ ಸಮುದ್ರದಲ್ಲಿ ಸೋಮಾಲಿಯಾ ಕಡಲ್ಗಳ್ಳರಿಂದ ಪಾಕಿಸ್ತಾನದ ಮೀನುಗಾರರನ್ನು ಹಾಗೂ ಹಡಗನ್ನು ರಕ್ಷಿಸಲಾಗಿದೆ. ಭಾರತೀಯ ನೌಕಾಪಡೆಯ ಸಾಹಸದಿಂದ ಬದುಕಿದ ಪಾಕಿಸ್ತಾನದ 23 ಮೀನುಗಾರರು ಭಾರತ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ಇದೇ ವೇಳೆ ಭಾರತೀಯ ನೌಕಾಪಡೆಗೆ ಧನ್ಯವಾದ ಹೇಳಿದ್ದಾರೆ. 12 ಗಂಟೆಗೆ ಸುದೀರ್ಘ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆ ಸೊಮಾಲಿಯಾ ಕಡಲ್ಗಳ್ಳರಿಂದ ಪಾಕಿಸ್ತಾನದ 23 ಸಿಬ್ಬಂದಿಗಳನ್ನು ರಕ್ಷಿಸಿದೆ. 

ಭಾರತೀಯ ವಾಯುಪಡೆ ಸಮುದ್ರದಲ್ಲ ಹದ್ದಿನ ಕಣ್ಣಿಟ್ಟಿದೆ. ಕಡಲ್ಗಳ್ಳರ ಆಕ್ರಮಣ ದಾಳಿಯನ್ನು ಸತತವಾಗಿ ಹಿಮ್ಮೆಟ್ಟಿಸುತ್ತಿದೆ. ವಿವಿಧ ದೇಶಗಳ ಸರಕು ಹಡಗು, ಮೀನುಗಾರರ ಹಡುಗು ಸೇರಿದಂತೆ ಹಲವು ಹಡುಗಳನ್ನು ರಕ್ಷಿಸಿ, ಸಿಬ್ಬಂದಿಗಳನ್ನು ರಕ್ಷಿಸುತ್ತಿರುವ ಭಾರತೀಯ ನೌಕಾಪಡೆಗೆ ವಿಶ್ವದೆಲ್ಲೆಡೆಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗೆ ಅರಬ್ಬಿ ಸಮುದ್ರದಲ್ಲಿ ತೀವ್ರ ಕಟ್ಟೆಚ್ಚರವಹಿಸಿದ್ದ ಭಾರತೀಯ ನೌಕಾಪಡೆಯ ಐಎನ್‌ಎಸ್ ಸುಮೇಧಾ ಹಾಗೂ ಕ್ಷಿಪಣಿ ಯುದ್ಧನೌಕೆ ಐಎನ್‌ಎಸ್ ತ್ರಿಶೂಲ್ ಜಂಟಿ ಕಾರ್ಯಾಚರಣೆ ನಡೆಸಿದೆ.

ಸೋಮಾಲಿಯಾ ಕಡಲ್ಗಳ್ಳರಿಂದ 23 ಪಾಕಿಸ್ತಾನಿ ಮೀನುಗಾರರನ್ನು ರಕ್ಷಿಸಿದ ಭಾರತೀಯ ನೌಕಾಸೇನೆ!

ಮಾರ್ಚ್ 29ರ ಮುಂಜಾನೆ ಸೊಮಾಲಿಯಾ ಕಡಲ್ಗಳ್ಳರು ಪಾಕಿಸ್ತಾನದ ಎಫ್‌ಇ ಅಲ್-ಕಂಬಾರ್ ಹಡಗಿನ ಮೇಲೆ ಆಕ್ರಮಣ ಮಾಡಿರುವ ಮಾಹಿತಿ ಪಡೆದ ಭಾರತದ ನೌಕಾಪಡೆ ನೇರವಾಗಿ ರಕ್ಷಣೆಗೆ ಧಾವಿಸಿತ್ತು. ಪಾಕಿಸ್ತಾನದ ಈ ಹಡಗು 23 ಪಾಕಿಸ್ತಾನ ಸಿಬ್ಬಂದಿಗಳನ್ನು ಒಳಗೊಂಡಿತ್ತು. ಐಎನ್‌ಎಸ್ ಸುಮೇಧಾ ಹಾಗೂ ಐಎನ್‌ಎಸ್ ತ್ರಿಶೂಲ್ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿತ್ತು. ಯಾವುದೇ ರಕ್ಷಪಾತವಿಲ್ಲದೆ ಸೊಮಾಲಿಯಾ ಕಡಲ್ಗಳ್ಳರನ್ನು ಭಾರತೀಯ ನೌಕಾಪಡೆ ಶರಣಾಗುವಂತೆ ಮಾಡಿದೆ.

Scroll to load tweet…

ಪಾಕಿಸ್ತಾನಿ ಸಿಬ್ಬಂದಿಗಳನ್ನು ರಕ್ಷಿಸಿದ ಬಳಿಕ ಭಾರತದ ನೌಕಾಪಡೆ ಕಾರ್ಯಾಚರಣೆ ಹಾಗೂ ನೆರವಿನ ಹಸ್ತಚಾಚಿ ರಕ್ಷಣೆ ಮಾಡಿರುವುದಕ್ಕೆ ಧನ್ಯವಾದ ಹೇಳಿದ್ದಾರೆ. ಇದೇ ವೇಳೆ ಭಾರತ ಜಿಂದಾಬ್ ಘೋಷಣೆ ಕೂಗಿದ್ದಾರೆ. 

ಹೈಜಾಕ್ ಆದ ಹಡಗಿನ ನೆರವಿಗೆ ಹೋದ ಚಾಪರ್ ಮೇಲೆ ಗುಂಡು ಹಾರಿಸಿದ ಕಡಲ್ಗಳ್ಳರು: ಹೆಡೆಮುರಿ ಕಟ್ಟಿದ ಭಾರತೀಯ ನೇವಿ

ಸಮುದ್ರದಲ್ಲಿ ಭಾರತೀಯ ನೌಕಾಪಡೆ ನಿರಂತರ ಹೋರಾಟ ನಡೆಸುತ್ತಿದೆ. ಸೊಮಾಲಿಯಾ ಕಡಲ್ಗಳ್ಳರ ಆಕ್ರಮಣ ಹೆಚ್ಚಾಗುತ್ತಿದೆ. ಪ್ರತಿ ಸಂದರ್ಭದಲ್ಲೂ ಭಾರತೀಯ ನೌಕಾಪಡೆ ತಕ್ಕ ತಿರುಗೇಟು ನೀಡುತ್ತಿದೆ. ಮಾ.15ರಂದು ರುಯೆನ್‌ ಹಡಗನ್ನು ಆಕ್ರಮಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಮೊದಲಿಗೆ ನಾವು ಕಡಲ್ಗಳ್ಳರಿಗೆ ಶರಣಾಗುವಂತೆ ತಿಳಿಸಿದಾಗ ಅವರು ನಮ್ಮತ್ತ ಗುಂಡು ಹಾರಿಸಿದರು. ಬಳಿಕ ಅಂತಾರಾಷ್ಟ್ರೀಯ ಕಾನೂನಿನಂತೆ ಆತ್ಮರಕ್ಷಣೆಯ ಪ್ರತೀಕವಾಗಿ ನಾವೂ ಅವರತ್ತ ದಾಳಿ ಮಾಡಬೇಕಾಯಿತು’ ಎಂದು ಸೇನೇ ಹೇಳಿತ್ತು.