ಸೋಶಿಯಲ್‌ ಮೀಡಿಯಾದಲ್ಲಿ ಕ್ಲಿಪ್‌ ವೈರಲ್‌ ಆಗುವವರೆಗೂ ನನ್ನ ಜೊತೆ ನಿಂತಿದ್ದ ವ್ಯಕ್ತಿ ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್ ಅನ್ನೋದೇ ನನಗೆ ಗೊತ್ತಿರಲಿಲ್ಲ ಎಂದು ಡಾಲಿ ಚಾಯ್‌ವಾಲಾ ಹೇಳಿದ್ದಾರೆ. 

ನವದೆಹಲಿ (ಫೆ.29): ಬಿಲ್‌ ಗೇಟ್ಸ್‌ಗೆ ಬೀದಿ ಬದಿಯಲ್ಲಿ ಟೀ ಮಾಡಿಕೊಡುವ ವಿಡಿಯೋ ಮೂಲಕ ಡಾಲಿ ಚಾಯ್‌ವಾಲ್‌ ಮತ್ತೊಮ್ಮೆ ರಾತ್ರೋರಾತ್ರಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದಾರೆ. ಬಿಲ್‌ ಗೇಟ್ಸ್‌ ಜೊತೆಗಿನ ವೈರಲ್‌ ವಿಡಿಯೋ ಬಗ್ಗೆ ಮಾತನಾಡಿರುವ ಡಾಲಿ ಚಾಯ್‌ವಾಲ್‌, ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ವ್ಯಾಪಕವಾಗಿ ಚರ್ಚೆ ಆಗುವವರೆಗೂ ತಮ್ಮೊಂದಿಗೆ ಇದ್ದಿದ್ದು ಮೈಕ್ರೋಸಾಫ್ಟ್‌ನ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ಅನ್ನೋದೇ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಡಾಲಿ ಚಾಯ್‌ವಾಲಾ, ಬಿಲ್ ಗೇಟ್ಸ್ ಅವರು ಟೀ ಸ್ಟಾಲ್‌ಗೆ ಭೇಟಿ ನೀಡಿದಾಗ, 'ಬಿಲ್ ಗೇಟ್ಸ್ ಚಾಯ್ ಪೆ ಚರ್ಚಾ' ವಿಡಿಯೋಗಾಗಿ ಅವರು ಪಡೆದ ಜಾಗತಿಕ ಮನ್ನಣೆಯನ್ನು ಕಂಡು ತಮಗೆ ಅಚ್ಚರಿಯಾಗಿದ್ದಾಗಿ ತಿಳಿಸಿದ್ದಾರೆ. ವಿಡಿಯೋ ವೈರಲ್ ಆಗುವವರೆಗೂ ನಾನು ಟೀ ನೀಡಿ ವ್ಯಕ್ತಿಯ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರತಿದಿನ ಟೀ ಮಾಡೋದು ನನ್ನ ಕೆಲಸ. ಅದರಂತೆ ನಾನು ನನ್ನ ಸ್ಟಾಲ್‌ನಲ್ಲಿ ಇದ್ದೆ. ಆದರೆ, ಈ ವೇಳೆ ನಾನು ಭೇಟಿ ಮಾಡಿದ ವ್ಯಕ್ತಿ ವಿಶ್ವದ ಪ್ರಮುಖ ವ್ಯಕ್ತಿ ಎನ್ನುವುದು ತಿಳಿದಿರಲಿಲ್ಲ. ನನಗೆ ಅವರ ಬಗ್ಗೆ ಜ್ಞಾನವೇ ಇಲ್ಲ ಎಂದು ಹೇಳಿದ್ದಾರೆ.

ಆರಂಭದಲ್ಲಿ ಅವರ ಟೀ ಸ್ಟಾಲ್‌ ಇರುವ ನಾಗ್ಪರದಲ್ಲಿಯೇ ಇದರ ಚಿತ್ರೀಕರಣವಾಗಿದೆ ಎಂದು ಭಾವಿಸಲಾಗಿತ್ತು. ಆದರೆ, ಈ ವಿಡಿಯೋವನ್ನು ಹೈದರಾಬಾದ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ಡಾಲಿ ತಿಳಿಸಿದ್ದಾರೆ. ಅವರ ಸಿಗ್ನೇಚರ್ ಶೈಲಿಯಲ್ಲಿ ಚಹಾ ತಯಾರಿಸಲು ಅವರನ್ನು ಹೈದರಾಬಾದ್‌ಗೆ ಆಹ್ವಾನಿಸಲಾಯಿತು ಆದರೆ ಬಿಲ್ ಗೇಟ್ಸ್ ಬಗ್ಗೆ ಅವರಿಗೆ ತಿಳಿಸಿರಲಿಲ್ಲ.

ಈಗ ಇಂಟರ್‌ನೆಟ್‌ ಸೆನ್ಸೇಷನ್‌ ಆಗಿರುವ ಡಾಲಿ ಚಾಯ್‌ವಾಲಾ, ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಒಂದು ದಿನ ಚಹಾ ನೀಡುವುದು ನನ್ನ ಮಹದಾಸೆ ಎಂದು ಹೇಳಿದ್ದಾರೆ. ಫೆಬ್ರವರಿ 28 ರಂದು ಬಿಡುಗಡೆಯಾದ ವಿಡಿಯೋದಲ್ಲಿ ಬಿಲ್‌ ಗೇಟ್ಸ್‌, 'ಒನ್‌ ಚಾಯ್‌, ಪ್ಲೀಸ್‌' ಎಂದು ಡಾಲಿ ಚಾಯ್‌ವಾಲಾಗೆ ಮನವಿ ಮಾಡುವುದರೊಂದಿಗೆ ಆರಂಭವಾಗುತ್ತದೆ. ತಮ್ಮ ಬಂಡಿಯಲ್ಲಿಯೇ ಚಹಾವನ್ನು ತಯಾರಿಸುವ ಚಹಾ ಮಾರಾಟಗಾರನ ವಿಶಿಷ್ಟ ವಿಧಾನವೇ ಇಲ್ಲಿ ಪ್ರಮುಖ ಅಂಶವಾಗಿದೆ. ಭಾರತದಲ್ಲಿ ಪ್ರಸಿದ್ಧವಾಗಿರುವ ಚಹಾವನ್ನು ಮಾಡುವ ಬಗ್ಗೆ ವಿಶಿಷ್ಠ ನೋಟವನ್ನು ಇದು ನೀಡಿದೆ. ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ತಕ್ಷಣ, ಅದು ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಇನ್ನು ಸಾಕಷ್ಟು ಜನರು ಈ ವಿಡಿಯೋಗೆ ಕಾಮೆಂಟ್‌ ಮಾಡಿದ್ದು, ಇಂಥದ್ದೊಂದು ಸಹಯೋಗವನ್ನು ನಾನು ಕನಸು ಮನಸಿನಲ್ಲೂ ಎಣಿಸಿರಲಿಲ್ಲ ಎಂದಿದ್ದಾರೆ.

ಬೀದಿ ಬದಿ ಚಾಯ್ ಕುಡಿದ ಬಿಲ್ ಗೇಟ್ಸ್; ಜಗತ್ತಿನ ಶ್ರೀಮಂತ ವ್ಯಕ್ತಿಯ ಸರಳತೆಗೆ ನೆಟಿಜನ್ಸ್ ಫಿದಾ

ತಮ್ಮ ಇನ್ಸ್‌ಟಾಗ್ರಾಮ್‌ ಬರೋದಲ್ಲಿ ಮಹಾರಾಷ್ಟ್ರದ ನಾಗ್ಪುರ ಮೂಲದ ಫೇಮಸ್‌ ಟೀ ಸೆಲ್ಲರ್‌ ಎಂದು ಬರೆದುಕೊಂಡಿರುವ ಡಾಲಿ ಚಾಯ್‌ವಾಲಾಗೆ 10 ಸಾವಿರಕ್ಕೂ ಅಧಿಕ ಫಾಲೋವರ್‌ಗಳಿದ್ದಾರೆ. ತಮ್ಮ ಸ್ಟೈಲ್‌ನ ಕಾರಣಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಈತನನ್ನು ಭಾರತದ ಜಾಕ್‌ ಸ್ಪಾರೋ ಅಂತಲೂ ಕರೆಯುತ್ತಾರೆ.

50 ಪೈಸೆಗೊಂದು ಲೋಟ ಕಾಫಿ ಮಾರುತ್ತಿದ್ದ ಈಕೆ ಇಂದು 100 ಕೋಟಿ ರೂ.ಗಳ ಒಡತಿ

View post on Instagram