Asianet Suvarna News Asianet Suvarna News

ವೀರ ಕ್ಯಾ. ವಿಕ್ರಂ ಬಾತ್ರಾ ಅವರ ಮನಮುಟ್ಟುವ ಪ್ರೇಮ ಕಥೆ

  • ಕ್ಯಾ. ವಿಕ್ರಂ ಬಾತ್ರಾ ಅವರ ಮಧುರ ಪ್ರೇಮ ಕಥೆ
  • ಬಾತ್ರಾ ಹುತಾತ್ಮರಾದಾಗ ಮದುವೆಯೇ ಬೇಡ ಎಂದಿದ್ದ ಗೆಳತಿ
  • ಯೋಧ-ಯುದ್ಧ-ಪ್ರೇಮ...! ವಿಕ್ರಂ ಬಾತ್ರಾ ಅವರ ಪ್ರೇಮ ಕಥೆ ಇದು
Did you know Captain Vikram Batras first love refused to marry after his martyrdom Take a look at their immortal love story dpl
Author
Bangalore, First Published Jul 26, 2021, 7:33 PM IST

ನವದೆಹಲಿ(ಜು.26): ಕಾರ್ಗಿಲ್ ಯುದ್ಧದ ವೀರ ಹುತಾತ್ಮ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಶೌರ್ಯ ಮತ್ತು ದೇಶಭಕ್ತಿ ಇಂದಿಗೂ ಭಾರತೀಯರಿಗೆ ಸ್ಫೂರ್ತಿ ನೀಡುತ್ತದೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ತೋರಿಸಿದ ಶೌರ್ಯ ಶ್ಲಾಘನೀಯ. ರಣರಂಗದಲ್ಲಿ ವೀರರಾಗಿದ್ದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಮಧುರ ಪ್ರೀತಿಯ ಕಥೆ ಅಪೂರ್ಣವಾದರೂ ಇಂದಿಗೂ ಹಸಿರಾಗಿದೆ.

ಪಂಜಾಬ್ ಯುನಿವರ್ಸಿಟಿಯಲ್ಲಿ ಮೊದಲ ಭೇಟಿ:

ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರು ಪಂಜಾಬ್ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ ಎಂ.ಎ ಮಾಡುತ್ತಿದ್ದಾಗ ಪ್ರೀತಿಯಾಯಿತು. ಅವರು  ಮೊದಲು ಸ್ನೇಹಿತರಾಗಿ ನಂತರ ಅವರ ಸಂಬಂಧವು ಪ್ರೀತಿಯಾಗಿ ಮುಂದುವರಿಯಿತು. ಇಬ್ಬರೂ ಮದುವೆಯಾಗಿ ಪರಸ್ಪರ ಬದುಕುವ ನಿರ್ಧಾರ ಮಾಡಿಯಾಗಿತ್ತು.

ಕಾರ್ಗಿಲ್ ಯುದ್ಧದ ನಂತರ ನಡೆಯಬೇಕಿತ್ತು ಮದುವೆ

ಅವರು ತಮ್ಮ ವಿಶೇಷ ಗೆಳತಿಯ ಬಗ್ಗೆ ನಮಗೆ ತಿಳಿಸಿದ್ದ. ಮದುವೆಗೆ ಹುಡುಗಿ ಹುಡುಕುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಕ್ಯಾಪ್ಟನ್ ವಿಕ್ರಮ್ ಬಾತ್ರಾ ಕಾರ್ಗಿಲ್ ಯುದ್ಧದಿಂದ ಹಿಂದಿರುಗಿದಾಗ ಅವರು ಮದುವೆಯಾಗಬೇಕೆಂದು ಕುಟುಂಬ ನಿರ್ಧರಿಸಿತ್ತು ಎನ್ನುತ್ತಾರೆ ವಿಕ್ರಮ್ ಬಾತ್ರಾ ಅವರ ತಂದೆ ಜಿ.ಎಲ್.ಬತ್ರಾ.

'ಪ್ರೇಮಕಥೆ' ಅಪೂರ್ಣ

ದುರದೃಷ್ಟವಶಾತ್ ಈ ಪ್ರೇಮಕಥೆ ಪೂರ್ಣವಾಗಲಿಲ್ಲ. ಕ್ಯಾಪ್ಟನ್ ವಿಕ್ರಮ್ ಬಾತ್ರಾ ಕಾರ್ಗಿಲ್ ಯುದ್ಧದ ಸಮಯದಲ್ಲಿ ಹುತಾತ್ಮರಾದಾಗ 25 ವರ್ಷ. ಅವರ ಪೋಷಕರು ಮಗನ ಮದುವೆಗೆ ತಯಾರಿ ನಡೆಸುತ್ತಿರುವಾಗ ತ್ರಿವರ್ಣ ಹೊದಿಸಿದ ವಿಕ್ರಂ ದೇಹ ಮನೆಗೆ ಬಂದಿತ್ತು. ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಹುತಾತ್ಮರಾದ ನಂತರ ಅವರ ಗೆಳತಿ ಪಾಲಂಪೂರ್ಗೆ ಅಂತಿಮ ವಿದಾಯ ಹೇಳಲು ಬಂದರು. ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಪೋಷಕರು ಮೊದಲ ಬಾರಿಗೆ ಭಾವೀ ಸೊಸೆಯನ್ನು ಭೇಟಿಯಾದದ್ದು ಇಲ್ಲಿಯೇ. ಬೇರೆ ಯಾರನ್ನೂ ಮದುವೆಯಾಗುವುದಿಲ್ಲ ಎಂದು ಆಕೆ ತಿಳಿಸಿದಾದ ಎಲ್ಲರೂ ಗದರಿದ್ದರು. ಕೇವಲ ಇಪ್ಪತ್ತೆರಡು ವರ್ಷದ ಹುಡುಗಿ ತನ್ನ ಇಡೀ ಜೀವನವನ್ನು ಏಕಾಂಗಿಯಾಗಿ ಕಳೆಯುವುದು ಸುಲಭದ ನಿರ್ಧಾರವಲ್ಲ ಎಂಬುದೇ ಎಲ್ಲರ ಅಭಿಪ್ರಾಯವಾಗಿತ್ತು.

ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ತಂದೆ ಜಿಎಲ್ ಬಾತ್ರಾ ಅವರು ಈ ಬಂಧವನ್ನು ನಿಜವಾದ ಪ್ರೀತಿ ಎಂದು ಬಣ್ಣಿಸುತ್ತಾರೆ. ಅಂತಹ ಪ್ರೇಮಿಗಳ ಉದಾಹರಣೆ ಇಂದಿನ ಕಾಲದಲ್ಲಿ ಕಂಡುಬರುವುದಿಲ್ಲ. ಇಂದಿನವರೆಗೂ ಆ ಹುಡುಗಿ ಮದುವೆಯಾಗಿಲ್ಲ, ವಿಕ್ರಮ್ ಬಾತ್ರಾ ಅವರ ನೆನಪುಗಳೊಂದಿಗೆ ಅವಳು ಈಗ ತನ್ನ ಇಡೀ ಜೀವನವನ್ನು ಕಳೆಯಬೇಕೆಂದು ನಿರ್ಧರಿಸಿದ್ದಾಳೆ ಎಂದು ಹೇಳಿದ್ದಾರೆ.

ಆಶ್ಚರ್ಯಕರ ಸಂಗತಿಯೆಂದರೆ, ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಪೋಷಕರು ಸ್ವತಃ ಹುಡುಗಿಯನ್ನು ಸಾಕಷ್ಟು ಮನವೊಲಿಸಿದ್ದರು. ಮದುವೆಯಾಗುವಂತೆ ಒತ್ತಾಯಿಸಿದರು. ಆದರೆ ಅವಳು ತನ್ನ ಪ್ರತಿಜ್ಞೆಗೆ ಬದ್ಧಳಾಗಿದ್ದಳು. ಬೇರೆಯವರನ್ನು ಮದುವೆಯಾಗಲು ಸಾಧ್ಯವಿಲ್ಲ, ಅವಳ ಇಡೀ ಜೀವನವು ಈಗ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ನೆನಪುಗಳಿಗೆ ಸಮರ್ಪಿಸಲಾಗಿದೆ ಎಂದಿದ್ದಳು ಆಕೆ.

ಸೋಮವಾರ (ಜುಲೈ 26), ಕಾರ್ಗಿಲ್ ಯುದ್ಧ ನಡೆದು 22 ವರ್ಷಗಳು ಮುಗಿದವು. ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರು ಹುತಾತ್ಮರಾದ ನಂತರ ಇಂದಿಗೂ ಅವರ ನೆನಪು ಅಜರಾಮರ. ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಪ್ರೇಮಕಥೆಯು ಪೂರ್ಣವಾಗದಿರಬಹುದು ಆದರೆ ಅವರ ಪ್ರೀತಿ, ಸಮರ್ಪಣೆ ಮತ್ತು ತ್ಯಾಗದ ಪ್ರತಿಜ್ಞೆ ಅವರ ಪ್ರೇಮಕಥೆಯನ್ನು ಶಾಶ್ವತವಾಗಿ ಅಮರರನ್ನಾಗಿ ಮಾಡಿತು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸುವ ಉತ್ಸಾಹ ಹೊಂದಿರುವ ಯುವಕರು ಯಾವಾಗಲೂ ಕಾರ್ಗಿಲ್ ಯುದ್ಧದಲ್ಲಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಶೌರ್ಯ ಮತ್ತು ನಿಜವಾದ ಪ್ರೀತಿಯ ಪ್ರೇಮಕಥೆಯಿಂದ ಪ್ರೇರಿತರಾಗುತ್ತಾರೆ.

Follow Us:
Download App:
  • android
  • ios