Asianet Suvarna News Asianet Suvarna News

ಪೇಟಾ ಕೊಟ್ಟ ಪ್ರಶಸ್ತಿ ಜೊತೆ ಜೊತೆಗೆ ವೈರಲ್ ಆಯ್ತು ದಿಯಾ ಮಿರ್ಜಾರ ಮಾಂಸದೂಟ

ಇತ್ತೀಚೆಗಷ್ಟೇ ಬಾಲಿವುಡ್ ನಟಿ ದಿಯಾ ಮಿರ್ಜಾರಿಗೆ ಪೇಟಾ ಇಂಡಿಯಾವೂ ತನ್ನ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿಯ ಜೊತೆ ಜೊತೆಗೆ ಈಗ ದಿಯಾ ಮಿರ್ಜಾ ಮಾಂಸದಡುಗೆ ಮಾಡುತ್ತಿರುವ ಫೋಟೋವೊಂದನ್ನು ನೆಟ್ಟಿಗರು ವೈರಲ್ ಮಾಡಿದ್ದು, ಇದು ಈಗ ಇಂಟರ್‌ನೆಟ್‌ನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

Dia Mirza old photo goes viral after PETA India announce her Person Of The Year in which she Cooking Meat akb
Author
First Published Dec 31, 2023, 6:55 PM IST

ಇತ್ತೀಚೆಗಷ್ಟೇ ಬಾಲಿವುಡ್ ನಟಿ ದಿಯಾ ಮಿರ್ಜಾರಿಗೆ ಪೇಟಾ ಇಂಡಿಯಾವೂ ತನ್ನ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿಯ ಜೊತೆ ಜೊತೆಗೆ ಈಗ ದಿಯಾ ಮಿರ್ಜಾ ಮಾಂಸದಡುಗೆ ಮಾಡುತ್ತಿರುವ ಫೋಟೋವೊಂದನ್ನು ನೆಟ್ಟಿಗರು ವೈರಲ್ ಮಾಡಿದ್ದು, ಇದು ಈಗ ಇಂಟರ್‌ನೆಟ್‌ನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಪೇಟಾ ಇಂಡಿಯಾವೂ ಭಾರತದಲ್ಲಿ ಪ್ರಾಣಿಗಳ ಹಕ್ಕುಗಳಿಗಾಗಿ ಹೋರಾಡುವ ಸಂಸ್ಥೆಯಾಗಿದೆ.  ಈ ಫೋಟೋ ವೈರಲ್ ಆಗುತ್ತಿದ್ದಂತೆ ಈಗ ದಿಯಾ ಮಿರ್ಜಾ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. 

ದಿಯಾ ಮಿರ್ಜಾ ಅವರು ನಟನೆ ಮಾತ್ರವಲ್ಲದೇ ಪರಿಸರದ ಉಳಿವಿಗೆ ಜಾಗೃತಿ ಮೂಡಿಸುವ ವಿಚಾರದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಪರಿಸರದ ವಿರುದ್ಧ ಜನ ತೋರುವ ಕ್ರೌರ್ಯದ ಬಗ್ಗೆಯೂ ಅವರು ಹಲವು ಬಾರಿ ಧ್ವನಿ ಎತ್ತಿದ್ದಾರೆ. ಇದು ಅವರಿಗೆ ತುಂಬಾ ಪ್ರಸಿದ್ಧಿಯನ್ನು ತಂದು ಕೊಟ್ಟಿತ್ತು. ಈ ವಿಚಾರದಲ್ಲಿ ಒಂದು ದೃಢ ನಿಲುವನ್ನು ತೆಗೆದುಕೊಂಡಿರುವ ನಟಿ ದಿಯಾ ಜಾಗತಿಕ ಮಟ್ಟದಲ್ಲಿ ತನ್ನ ಅಭಿಮಾನಿಗಳಲ್ಲಿ ಈ ಬಗ್ಗೆ ಧ್ವನಿ ಎತ್ತುವಂತೆ ಜಾಗೃತಿ ಮೂಡಿಸಿದ್ದಾರೆ.  ವೈಭವ್ ರೇಕಿ ಜೊತೆ  ಪರಿಸರ ಸ್ನೇಹಿಯಾಗಿ ಮದುವೆಯಾಗುವುದರಿಂದ ಹಿಡಿದು  ಕಾಡಿನಲ್ಲಿ ಹೆಚ್ಚಿನ ಸಮಯ ಕಳೆಯುವವರೆಗೆ ಹಾಗೂ ಮಗನಿಗೆ ನಿರಂತರ ಪರಿಸರದ ಉಳಿವಿನ ಬಗ್ಗೆ ತಿಳಿ ಹೇಳುವ ಕಾರಣದಿಂದ ದಿಯಾ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಇದೇ ಕಾರಣದಿಂದ ಈಗ ಪೇಟಾ ಇಂಡಿಯಾವೂ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಿದೆ.

ಮಾಧವನ್​ ಜತೆ ನಟಿಸಿರುವುದನ್ನು ನೆನಪಿಸಿಕೊಂಡ್ರೆ 20 ವರ್ಷವಾದ್ರೂ ಭಯವಾಗ್ತಿದೆ: ದಿಯಾ

ಈ ವಿಚಾರವನ್ನು ಸ್ವತಃ ಪೇಟಾ ಇಂಡಿಯಾ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಈ ವಿಚಾರ ವೈರಲ್ ಆಗುತ್ತಿದ್ದಂತೆ ಜನ, ನಟಿ ದಿಯಾ ಮಿರ್ಜಾ ಮಾಂಸದೂಟದ ಅಡುಗೆ ಮಾಡುತ್ತಿರುವ ಫೋಟೋವೊಂದನ್ನು ಈ ಪ್ರಶಸ್ತಿ ಫೋಟೋದ ಜೊತೆ ಕೊಲಾಜ್ ಮಾಡಿ ವೈರಲ್ ಮಾಡಿದ್ದಾರೆ. ಇದನ್ನು ನೋಡಿದ, ಪ್ರಾಣಿಪ್ರಿಯರು ದಿಯಾ ಮಿರ್ಜಾ ಹಾಗೂ ಪೇಟಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಆದರೂ ದಿಯಾ ಮಿರ್ಜಾ ಅವರು ತಾನು ಹುಟ್ಟುತ್ತಲೇ ಸಸ್ಯಹಾರಿ ಆಗಿರಲಿಲ್ಲ, ಆದರೆ ವಯಸ್ಸು ಪ್ರಬುದ್ಧತೆ ಬೆಳೆದ ನಂತರ ತುಂಬು ಹೃದಯದಿಂದ ನಾನು ಮಾಂಸಾಹಾರವನ್ನು ಬಿಟ್ಟು ಸಸ್ಯಾಹಾರಿಯಾಗಿ ಬದಲಾದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ತಾನು ತನ್ನ ಕುಟುಂಬಕ್ಕಾಗಿ ಕೆಲವೊಮ್ಮೆ ಮಾಂಸಾಹಾರದ ಅಡುಗೆಯನ್ನು ಮಾಡುತ್ತೇನೆ. ಆದರೆ ಯಾವತ್ತೂ ಮಾಂಸಾಹಾರವನ್ನು ತಿಂದಿಲ್ಲ ಎಂದು ಹೇಳಿಕೊಂಡಿದ್ದರು. ದಿಯಾ ಮಿರ್ಜಾ ಅವರು ಇತ್ತೀಚೆಗೆ ತನ್ನ ಮಗ ಅವ್ಯಾನ್ ಅವರ ಹುಟ್ಟುಹಬ್ಬವನ್ನು ಕೂಡ ಗಾರ್ಡನ್‌ ಒಂದರಲ್ಲಿ ಪರಿಸರ ಸ್ನೇಹಿಯಾಗಿ ಆಯೋಜಿಸಿದ್ದರು.

Dia Mirza: ನಟಿ ಸ್ನಾನ ಮಾಡುತ್ತಿರುವ ವಿಡಿಯೋ ಲೀಕ್; ರೂಮಲ್ಲಿರುವ ಕ್ಯಾಮೆರಾದಿಂದ ಪಾರಾಗುವುದು ಹೀಗೆ

Follow Us:
Download App:
  • android
  • ios