ನವದೆಹಲಿ(ಸೆ. 08)  ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಕಾರ್ಮಿಕರು ವಾಪಾಸಾಗಲು ಗುಜರಾತ್, ಕರ್ನಾಟಕ, ಮಹಾರಾಷ್ಟ್ರದಂತಹ ರಾಜ್ಯಗಳಿಗೆ ಶ್ರಮಿಕ್ ವಿಶೇಷ ರೈಲು ವ್ಯವಸ್ಥೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

ಲಾಕ್ ಡೌನ್ ನಂತರ ಕಾರ್ಮಿಕರು ತಮ್ಮ ತಮ್ಮ ಊರಿನಲ್ಲಿ ಬಂಧಿಯಾಗಿದ್ದು ಅವರು ಜೀವನ ಕಟ್ಟಿಕೊಳ್ಳಲು ಮಹಾನಗರಗಳಿಗೆ ಮತ್ತೆ ವಾಪಾಸಾಗಲೇಬೇಕಿದೆ.  ಕೇಂದ್ರ ಸರ್ಕಾರ ಶ್ರಮಿಕ್ ಟ್ರೇನ್ ಗಳನ್ನು ಸಂಚಾರ ಮಾಡಿಸುತ್ತಿದ್ದು ಅದರ ಸಂಖ್ಯೆ ಹೆಚ್ಚಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಮಂಗಳವಾರ ಕರ್ನಾಟಕದ ಕೊರೋನಾ ಲೆಕ್ಕ

ಕರ್ನಾಟಕ, ಗುಜರಾತ್, ಓರಿಸ್ಸಾದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.  ಮಹಾನಗರಕ್ಕೆ ವಾಪಸ್ ಬರಲು ಸಾಧ್ಯವಾಗದೆ ಹೊಸ ಸಮಸ್ಯೆಗೆ ಸಿಲುಕಿಕೊಂಡಿದ್ದು ಅವರನ್ನು ಪಾರು ಮಾಡಬೇಕಿದೆ ಎಂದು ಕೋರಿದ್ದಾರೆ.

ಒಂದು ಕಡೆ ಪ್ರಧಾನ್ ಪತ್ರ ಬರೆದಿದ್ದರೆ ಓರಿಸ್ಸಾದಿಂದ ವಾಪಾಸಾಗುತ್ತಿದ್ದ ಎಂಟು ಜನ ಕಾರ್ಮಿಕರು ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರಿದ್ದ ಬಸ್ ಅಪಘಾತಕ್ಕೆ ಗುರಿಯಾಗಿ ಇಪ್ಪತ್ತು ಜನ ಗಂಭೀರ ಗಾಯಗೊಂಡಿದ್ದರು.

ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ, ದೆಹಲಿ, ಹರಿಯಾಣದಲ್ಲಿ ಲಾಕ್ ಡೌನ್ ಘೋಷಣೆ ಮಾಡಿದಾಗ  926,000 ಕಾರ್ಮಿಕರು ತಮ್ಮ ಊರಿಗೆ ಹಿಂದಿರುಗಿದ್ದರು ಇದರಲ್ಲಿ 358,000 ಕಾರ್ಮಿಕರು 256 ಶ್ರಮಿಕ್ ರೈಲಿನಲ್ಲಿ ವಾಪಸ್ ಆಗಿದ್ದಾರೆ .  ಇನ್ನುಳಿದವರು ಬರಬೇಕಾಗಿದೆ.