ನವದೆಹಲಿ(ಡಿ.26): ಹಳೆಯ ಅಂಬಾಸಿಡರ್‌ ಕಾರಿನ ಹಿಂಭಾಗವನ್ನು ಬಳಸಿ ವಿಶೇಷವಾಗಿ ವಿನ್ಯಾಸಗೊಳಿಸಿದ ಧರ್ಮಸ್ಥಳದ ಎತ್ತಿನ ಗಾಡಿ ಕಾರಿನ ವಿಡಿಯೋವೊಂದು ಭಾರೀ ವೈರಲ್‌ ಆಗಿದೆ.

ಸದಾ ಒಂದಿಲ್ಲೊಂದು ಕುತೂಹಲಕರ ಸಂಗತಿಗಳನ್ನು ಟ್ವೀಟ್‌ ಮಾಡುವ ಮಹೀಂದ್ರಾ ಗ್ರೂಪ್‌ ಮುಖ್ಯಸ್ಥ ಆನಂದ್‌ ಮಹೀಂದ್ರಾ ಅವರು ಇದೀಗ ಧರ್ಮಸ್ಥಳದ ಎತ್ತಿನ ಬಂಡಿ ಕಾರಿನ ವಿಡಿಯೋವನ್ನು ಟ್ವೀಟ್‌ ಮಾಡಿ ಕುತೂಹಲ ಕೆರಳಿಸಿದ್ದಾರೆ.

ದೇಶದ ಮೊದಲ ಹಾಟ್‌ ಏರ್‌ ಬಲೂನ್‌ ಸಫಾರಿ

ಎತ್ತಿನ ಗಾಡಿ ಕಾರಿನ ವಿಡಿಯೋವೊಂದನ್ನು ಟ್ವೀಟ್‌ ಮಾಡಿರುವ ಆನಂದ್‌ ಮಹೀಂದ್ರಾ, ವಿಶ್ವದ ಅತಿ ದೊಡ್ಡ ಎಲೆಕ್ಟ್ರಿಕ್‌ ಕಾರು ತಯಾರಿಕಾ ಸಂಸ್ಥೆ ಟೆಸ್ಲಾ ಹಾಗೂ ಎಲೋನ್‌ ಮಾಸ್ಕ್‌ಗೆ ಕೂಡ ಇದಕ್ಕಿಂತ ಕಡಿಮೆ ವೆಚ್ಚದಲ್ಲಿ ನವೀಕರಿಸಬಹುದಾದ ಇಂಧನದ ಕಾರನ್ನು ತಯಾರಿಸಲು ಸಾಧ್ಯವಿದೆ ಎಂದು ನನಗೆ ಅನಿಸುವುದಿಲ್ಲ ಎಂದು ಸವಾಲು ಹಾಕಿದ್ದರು. ಈ ವಿಡಿಯೋಗೆ 31 ಸಾವಿರಕ್ಕೂ ಹೆಚ್ಚು ಲೈಕ್‌ ಬಂದಿದ್ದು, 4800ಕ್ಕೂ ಅಧಿಕ ರೀಟ್ವೀಟ್‌ ಮಾಡಲಾಗಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಪರಿಕಲ್ಪನೆಯಲ್ಲಿ ಮೂಡಿದ ಬಂದ ಎತ್ತಿನ ಗಾಡಿ ಕಾರು ಇದಾಗಿದೆ. ಉಜಿರೆ ಎಸ್‌ಡಿಎಂ ಪಾಲಿಟೆಕ್ನಿಕ್‌ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಳೆಯ ಅಂಬಾಸಿಡರ್‌ ಕಾರಿನ ಹಿಂಭಾಗವನ್ನು ಬಳಸಿಕೊಂಡು ಎರಡು ಎತ್ತುಗಳ ಮೂಲಕ ಎಳೆಯಬಹುದಾದ ಎತ್ತಿನ ಗಾಡಿ ಕಾರನ್ನು ತಯಾರಿಸಿದ್ದಾರೆ.