ಇಸ್ರೇಲ್ ಮೇಲೆ ಉಗ್ರ ದಾಳಿಯಿಂದ ಭಾರತ ಅಲರ್ಟ್, ಗ್ಲೈಡರ್ಸ್ ಹಾರಾಟಕ್ಕೆ ಕಠಿಣ ನಿಯಮ ಜಾರಿ!
ಇಸ್ರೇಲ್ ಮೇಲೆ ಹಮಾಸ್ ಉಗ್ರರು ಎಲ್ಲಾ ಮಾರ್ಗಗಳ ಮೂಲಕ ಭೀಕರ ದಾಳಿ ನಡೆಸಿದ್ದರು. ಈ ಪೈಕಿ ಹ್ಯಾಂಗ್ ಗ್ಲೈಡರ್ಸ್ ಬಳಿ ಆಕಾಶದಿಂದ ಹಾರಿ ಬಂದು ಇಸ್ರೇಲ್ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿಯಿಂದ ಎಚ್ಚೆತ್ತಕೊಂಡಿರುವ ಭಾರತ, ಇದೀಗ ಹ್ಯಾಂಗ್ ಗ್ಲೈಡರ್ಸ್ ಹಾರಾಟಕ್ಕೆ ಕಠಿಣ ನಿಯಮ ಜಾರಿ ಮಾಡಿದೆ.

ನವದೆಹಲಿ(ಅ.18) ಇಸ್ರೇಲ್ ಮೇಲೆ ಹಮಾಸ್ ಉಗ್ರರು ಅಕ್ಟೋಬರ್ 7 ರಂದು ಭೀಕರ ದಾಳಿ ನಡೆಸಿ ಮಾರಣಹೋಮ ನಡೆಸಿದ್ದರು. ವಾಯು ವಾರ್ಗ, ಜಲಮಾರ್ಗ ಹಾಗೂ ಭೂ ಮಾರ್ಗದ ಮೂಲಕ ಉಗ್ರರು ದಾಳಿ ನಡೆಸಿ ಮಕ್ಕಳು, ಹೆಣ್ಣುಮಕ್ಕಳು, ಇಸ್ರೇಲ್ ನಾಗರೀಕರ ಮೇಲೆ ದಾಳಿ ನಡೆಸಿದ್ದರು. ಈ ಪೈಕಿ ಹಮಾಸ್ ಉಗ್ರರು ಹ್ಯಾಂಗ್ ಗ್ಲೈಡರ್ಸ್ ಮೂಲಕ ಆಕಾಶದಿಂದ ಹಾರಿ ಬಂದು ಇಸ್ರೇಲ್ ಒಳ ನುಗ್ಗಿದ್ದರು. ಭೀಕರ ದಾಳಿಗೆ 1,300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಈ ಗ್ಲೈಡರ್ಸ್ ಬಳಸಿ ಇಸ್ರೇಲ್ ಮೇಲಿನ ದಾಳಿ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಈ ದಾಳಿಯಿಂದ ಭಾರತ ಎಚ್ಚೆತ್ತುಕೊಂಡಿದೆ. ಭಾರತದಲ್ಲಿ ಗ್ಲೈಡರ್ಸ್ ಹಾರಾಟಕ್ಕೆ ಕಠಿಣ ನಿಯಮವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ(DGCA) ಜಾರಿ ಮಾಡಿದೆ.
ಸುರಕ್ಷತೆ ಕಾರಣಕ್ಕೆ ಗ್ಲೈಡರ್ಸ್ ಹಾರಾಟಕ್ಕೆ ನಿಯಮ ಜಾರಿ ಮಾಡಿದೆ. ಹೊಸ ನಿಯಮದ ಪ್ರಕಾರ DGCA ಅನುಮತಿ ಇಲ್ಲದೆ ಯಾರೂ ಕೂಡ ಹ್ಯಾಂಗ್ ಗ್ಲೈಡರ್ಸ್ ಹಾರಿಸುವಂತಿಲ್ಲ. ಹ್ಯಾಂಗ್ ಗ್ಲೈಡರ್ಸ್ ಭಾರತದ ಆಕಾಶದಲ್ಲಿ ಹಾರಾಟ ನಡೆಸಲು DGCA ಅನುಮೋದಿಸಿದ ಪರೀಕ್ಷಕರು, ಅಥವಾ ಎಕ್ಸಾಮಿನರ್ ಅನುಮತಿ ಪಡೆದಿರಬೇಕು. ಇದನ್ನು ಹೊರತು ಇನ್ಯಾರು ಕೂಡ ಗ್ಲೈಡರ್ಸ್ ಹಾರಿಸಲು ಅನುಮತಿ ಇರುವುದಿಲ್ಲ. ಅನುತಿ ಇಲ್ಲದ ಹ್ಯಾಂಗ್ ಗ್ಲೈಡರ್ಸ್ ಹಾರಾಟ ನಡೆಸಿದರೆ ಅದನ್ನು ಹೊಡೆದುರುಳಿಸುವುದು ಅಥವಾ ವಶಕ್ಕೆ ಪಡೆಯಲಾಗುತ್ತದೆ. ಇದು ದೇಶದ ಭದ್ರತೆ ದೃಷ್ಟಿಯಿಂದ ತೆಗೆದುಕೊಂಡಿರುವ ಮಹತ್ವದ ನಿರ್ಧಾರವಾಗಿದೆ.
ಗಾಜಾ ಆಸ್ಪತ್ರೆ ಮೇಲೆ ದಾಳಿಯಿಂದ ಭುಗಿಲೆದ್ದ ವಿವಾದ, ಅರಬ್ ಜೊತೆ ಬೈಡೆನ್ ಮಾತುಕತೆ ರದ್ದು!
Oct 18, 2
ಇದೇ ವೇಳೆ ಗ್ಲೈಡರ್ಸ್ ಮಾರಾಟಕ್ಕೂ ಕೆಲ ನಿಯಮ ಜಾರಿಗೊಳಿಸಿದೆ. ಅನುಮತಿ, ಪರವಾನಗಿ ಪಡೆದ ವ್ಯಕ್ತಿ ತನ್ನ ಖಾಸಗಿ ಗ್ಲೈಡರ್ಸ್‌ನ್ನು ಮಾರಾಟ ಮಾಡುವ ಮೊದಲು DGCA ಅನುಮತಿ ಪಡೆಯಬೇಕು. ಗ್ಲೈಡರ್ಸ್ ಅನುಮತಿ ಪತ್ರವನ್ನು DGCAಗೆ ಸಲ್ಲಿಕೆ ಮಾಡಬೇಕು. ಇನ್ನು ಗ್ಲೈಡರ್ಸ್ ಖರೀದಿಸುವ ವ್ಯಕ್ತಿ ಕೇಂದ್ರ ಗೃಹ ಸಚಿವಾಲಯದಿಂದ ಕ್ಲಿಯರೆನ್ಸ್ ಪ್ರಮಾಣ ಪತ್ರ ಪಡೆದಿರಬೇಕು. ಕೇಂದ್ರ ಗೃಹ ಸಚಿವಾಲಯ, ಖರಿದಿಸುವ ವ್ಯಕ್ತಿ ಅಥಾವಾ ಸಂಸ್ಥೆಯ ಹಿನ್ನಲೆಯನ್ನು ಪರಿಶೀಲನೆ ನಡೆಸಲಿದೆ.
ಇದರ ಜೊತೆಗೆ ಗ್ಲೈಡರ್ಸ್ ಸುರಕ್ಷತೆಗೂ ಕಠಿಣ ಕ್ರಮ ಜಾರಿಗೊಳಿಸಲಾಗಿದೆ. ಹ್ಯಾಂಗ್ ಗ್ಲೈಡರ್ಸ್ ಹಾರಾಟಕ್ಕೆ ಎಲ್ಲರಿಗೂ DGCA ಅನುಮತಿ ನೀಡುವುದಿಲ್ಲ. ಹ್ಯಾಂಗ್ ಗ್ಲೈಡರ್ಸ್‌ನಲ್ಲಿ ಕನಿಷ್ಟ 50 ಗಂಟೆ ಹಾರಾಟ,ಡ್ಯುಯೆಲ್ ಎಂಜಿನ್‌ನಲ್ಲಿ ಕನಿಷ್ಟ 10 ಗಂಟೆ ಹಾರಾಟದ ಅನುಭವ ಹೊಂದಿರಬೇಕು. ಈ ವ್ಯಕ್ತಿಗಳು DGCAಯಿಂದ ಪರವಾನಗಿ ಪಡೆಯಬೇಕು.
ಇನ್ನೂ ಹೆಣ ಬೀಳೋದಿದೆ, ಎಲ್ಲ ಒಟ್ಟಿಗೆ ಹೂಳ್ತೀವಿ.. ಇಸ್ರೇಲ್ ಮಹಿಳಾ ಯೋಧೆಯ ಕಿಡಿನುಡಿ
ವಾಣಿಜ್ಯ ವಿಮಾನ ಪೈಲೆಟ್ ಕನಿಷ್ಠ 25 ಗಂಟೆ ಹಾರಾಟದ ಅನುಭವ ಹೊಂದಿರಬೇಕು, ಇನ್ನು 50 ಗಂಟೆ ವಿಮಾನಯಾನ ಹಾರಾಟ ಅನುಭವ ಹೊಂದಿದ ಪೈಲೆಟ್ ಕೂಡ ಗ್ಲೈಡರ್ಸ್ ಹಾರಾಟಕ್ಕೆ ಅರ್ಹರಾಗಿದ್ದರೆ.