ನಾಯಿಯೊಂದು ಹನುಮಾನ್ ಚಾಲೀಸ ಕೇಳಿ ಭಕ್ತಿ ತೋರುವ ವಿಡಿಯೋ ವೈರಲ್ ಆಗಿದೆ. ಸಿನಿಮಾ ಹಾಡಿಗೆ ಸುಮ್ಮನಿದ್ದ ನಾಯಿ, ಹನುಮಾನ್ ಚಾಲೀಸ ಕೇಳಿ ಪ್ರತಿಕ್ರಿಯಿಸಿದೆ.

ಪ್ರಾಣಿಗಳು ಕೂಡ ದೇವರ ಮೇಲಿನ ಭಕ್ತಿ ತೋರಿಸುವುವಂತಹ ಹಲವು ದೃಶ್ಯಗಳು ಈ ಹಿಂದೆಯೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಶ್ವಾನವೊಂದು ದಿನವೂ ಸಾಯಿಬಾಬಾ ಮಂದಿರಕ್ಕೆ ಬಂದು ಮಂಗಳಾರತಿ ಸಮಯದಲ್ಲಿ ದೇಗುಲದಲ್ಲಿ ಉಪಸ್ಥಿತಿ ಇರುವಂತಹ ವೀಡಿಯೋ, ಹಾಗೂ ಶನಿ ಸಿಂಗ್ನಾಪುರ ದೇಗುಲದಲ್ಲಿ ಬೆಕ್ಕೊಂದು ಶನಿ ಮಹಾತ್ಮನ ಪ್ರತಿಮೆಗೆ ಸುತ್ತು ಬರುತ್ತಿರುವಂತಹ ದೃಶ್ಯಗಳು ಈ ಹಿಂದೆ ವೈರಲ್ ಆಗಿದ್ದವು. ಇದಕ್ಕೆ ಜನರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಜೊತೆಗೆ ಪ್ರಾಣಿಗಳಿಗೂ ದೇವರೆಂದರೆ ಭಕ್ತಿ ಭಾವವಿದೆ ಎಂಬುದನ್ನು ಸಾಬೀತುಪಡಿಸಿತ್ತು. ಅದೇ ರೀತಿ ಈಗ ನಾಯಿಯೊಂದರ ದೈವಿಕ ಭಕ್ತಿಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ಶ್ವಾನದ ದೈವಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ಸ್ಟಾಗ್ರಾಮ್‌ನಲ್ಲಿ ದೀ ಬಂಜಾರಾ ಬಾಯ್ಸ್ ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ ರಾಗ್ನಾರ್ ಎಂಬ ಹೆಸರಿನ ಜರ್ಮನ್ ಶೆಪರ್ಡ್‌ ನಾಯಿ ಸಿನಿಮಾ ಹಾಡಿಗೆ ಸುಮ್ಮನೆ ಕಣ್ಣು ಮುಚ್ಚಿ ಮಲಗಿದೆ. ಆದರೆ ಅದರ ಮಾಲೀಕ ಕೆಲ ಹೊತ್ತಿನಲ್ಲಿ ಸಿನಿಮಾ ಹಾಡಿನ ಬದಲು ಹನುಮಾನ್ ಚಾಲೀಸವನ್ನು ಟಿವಿಯಲ್ಲಿ ಪ್ಲೇ ಮಾಡುತ್ತಾರೆ. ಕೂಡಲೇ ಈ ರಾಗ್ನಾರ್‌ ಫುಲ್ ಆಕ್ಟಿವ್ ಆಗಿದ್ದು, ಕೂಡಲೇ ಕೂಗಲು ಶುರು ಮಾಡುತ್ತದೆ. ಶ್ರೀಗುರುಚರಣ ಸರೋಜ ನಿಜಮನ ಮುಕುರು ಸುಧಾರಿ ಎಂದು ಹಾಡು ಆರಂಭವಾಗುತ್ತಿದ್ದಂತೆ ಮಲಗಿದ್ದಲ್ಲಿಂದ ಎದ್ದ ರಾಗ್ನಾರ್ ಹೋ ಎಂದು ಬೊಬ್ಬೆ ಹೊಡೆಯುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಈ ವೀಡಿಯೋ ನೋಡಿದ ಅನೇಕರು ರಾಗ್ನಾರ್ ಹನುಮಾನ್‌ನ ದೈವ ಭಕ್ತ ಎಂದು ಕಾಮೆಂಟ್ ಮಾಡಿದ್ದಾರೆ.

ಪ್ರತಿದಿನ ಹನುಮಾನ್‌ ಚಾಲೀಸಾ ಪಠಣದಿಂದ ಆಗುವ ಪ್ರಯೋಜನಗಳು!

ರಾಗ್ನಾರ್ ಸಿನಿಮಾ ಹಾಡಿಗೆ ಹಾಗೂ ಹನುಮಾನ್ ಚಾಲೀಸಾಗೆ ಹೇಗೆ ಪ್ರತಿಕ್ರಿಯಿಸುತ್ತಾನೆ ನೋಡಿ ಎಂದು ವೀಡಿಯೋ ಪೋಸ್ಟ್ ಮಾಡಿದವರು ಬರೆದುಕೊಂಡಿದ್ದಾರೆ. ಈ ಶ್ವಾನ ಹನುಮಾನ್ ಚಾಲೀಸವನ್ನು ಹಾಡಲು ಪ್ರಯತ್ನ ಮಾಡುತ್ತಿದ್ದಾನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ಮೇಲೆ ನನ್ನ ಕಣ್ಣಲ್ಲಿ ನೀರು ಬಂತು, ಜೈ ಶ್ರೀರಾಮ್, ಜೈ ಭಜರಂಗ್ ಬಲಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋದಲ್ಲಿ ಶ್ವಾನದ ಭಕ್ತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ವೀಡಿಯೋ ನೋಡಿ ನಿಮಗೇನನಿಸಿತು ಕಾಮೆಂಟ್ ಮಾಡಿ.

ರಾತ್ರಿ ನಾಯಿಗಳು ಅಳೋದು ನಿಜಾನಾ? ಯಾರಾದ್ರೂ ಸಾಯ್ತಾರಾ?

ಶ್ವಾನದ ಪ್ರತಿಕ್ರಿಯೆಯ ವೀಡಿಯೋ ಇಲ್ಲಿದೆ ನೋಡಿ

View post on Instagram