ಮುಂಬೈಯಲ್ಲಿ ನಡೆಯುವ ಶೇ. 3 ರಷ್ಟು ವಿಚ್ಛೇದನಗಳಿಗೆ ನಗರದ ಟ್ರಾಫಿಕ್‌ ಕಾರಣವಾಗಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಪತ್ನಿ ಅಮೃತಾ ಫಡ್ನವೀಸ್‌ ಶನಿವಾರ ಹೇಳಿದ್ದಾರೆ.

ಮುಂಬೈ (ಫೆ.06): ಮುಂಬೈಯಲ್ಲಿ ನಡೆಯುವ ಶೇ. 3 ರಷ್ಟು ವಿಚ್ಛೇದನಗಳಿಗೆ (Divorce) ನಗರದ ಟ್ರಾಫಿಕ್‌ (Traffic) ಕಾರಣವಾಗಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ (Devendra Fadnavis) ಪತ್ನಿ ಅಮೃತಾ ಫಡ್ನವೀಸ್‌ (Amruta Fadnavis) ಶನಿವಾರ ಹೇಳಿದ್ದಾರೆ. ಮುಂಬೈ ರಸ್ತೆಗಳ ಪರಿಸ್ಥಿತಿ ಹಾಗೂ ಟ್ರಾಫಿಕ್‌ನ ಬಗ್ಗೆ ಪತ್ರಕರ್ತರೊಡನೆ ಮಾತನಾಡಿದ ಅಮೃತಾ, ‘ಮುಂಬೈಯ ಟ್ರಾಫಿಕ್‌ ಕಾರಣದಿಂದಾಗಿ ಜನರಿಗೆ ಕುಟುಂಬದೊಡನೆ ಸರಿಯಾಗಿ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಇದು ಶೇ. 3 ರಷ್ಟು ವಿಚ್ಛೇದನಗಳಿಗೆ ಕಾರಣವಾಗಿದೆ. 

ಇದನ್ನು ಫಡ್ನವೀಸ್‌ ಪತ್ನಿಯಾಗಿ ಅಲ್ಲ, ಒಬ್ಬ ಸಾಮಾನ್ಯ ಮಹಿಳೆಯಾಗಿ ಹೇಳುತ್ತಿದ್ದೇನೆ. ಟ್ರಾಫಿಕ್‌, ಪಾಟ್‌ ಹೋಲ್‌ಗಳಿಂದ ಭಾರೀ ಸಮಸ್ಯೆ ಎದುರಿಸಿದ್ದೇನೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿರುವ ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ (Priyanka Chaturvedi), ‘ದಿನದ ‘ಅತ್ಯುತ್ತಮ ತರ್ಕ(ಹೀನ) ಪ್ರಶಸ್ತಿ’ಯನ್ನು ಈ ಮಹಿಳೆಗೆ ನೀಡಬೇಕು. ಬೆಂಗಳೂರು (Bengaluru) ನಿವಾಸಿಗಳು ಇದನ್ನು ಓದದಿರಿ, ಇದು ನಿಮ್ಮ ಮದುವೆಗಳಿಗೂ ಮಾರಕವಾಗಬಹುದು’ ಎಂದು ವ್ಯಂಗ್ಯವಾಡಿದ್ದಾರೆ.

ಡ್ರಗ್‌ ಪೆಡ್ಲರ್‌ ಜೊತೆ ಮಾಜಿ ಸಿಎಂ ಫಡ್ನಾವಿಸ್ ಪತ್ನಿಗೆ ನಂಟು : ‘ಬಾಂಬ್‌’

ಮನಿಕಾ ಮಗೆ ಹಿತೆ ಹಿಂದಿ ವರ್ಶನ್ ಹಾಡಿದ ಮಾಜಿ ಸಿಎಂ ಫಡ್ನವಿಸ್ ಪತ್ನಿ: ಮನಿಕಾ ಮಗೆ ಹಿತೆ ಹಾಡು ಕೇಳದವರ ಸಂಖ್ಯೆ ಕಡಿಮೆ. ಶ್ರೀಲಂಕಾದ ಸಿಂಹಳಿ ಭಾಷೆಯಲ್ಲಿರುವ ಈ ಹಾಡು ಬಹುತೇಕ ಭಾರತೀಯರಿಗೆ ಕಂಠಪಾಠ. ಅಷ್ಟರ ಮಟ್ಟಿಗೆ ಲಂಕಾ ಹಾಡು ಭಾರತದಲ್ಲಿ ಮೋಡಿ ಮಾಡಿದೆ. ಈ ಹಾಡು ಭಾರತದ ಹಲವು ಭಾಷೆಗಳಲ್ಲಿ ಹೊರಬಂದಿದೆ. ಇದೀಗ ಹಿಂದಿ ವರ್ಶನ್ ಮನಿಕ ಮಗೆ ಹಿತೆ (manike mage hithe) ಹಾಡನ್ನು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಫಡ್ನವಿಸ್ ಪತ್ನಿ ಅಮೃತ ಫಡ್ನವಿಸ್ ಹಾಡಿದ್ದಾರೆ. 

ಸಣ್ಣ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದಾರೆ. ಇದು ಭಾರಿ ವೈರಲ್ ಆಗಿದೆ. ವೃತ್ತಿಯಲ್ಲಿ ಬ್ಯಾಂಕಿಂಗ್ (Bank) ಉದ್ಯೋಗಿಯಾಗಿರುವ ಅಮೃತ ಫಡ್ನವಿಸ್, ಗಾಯಕಿಯೂ (Singer) ಹೌದು. ಇನ್ನು ಕೇಳಬೇಕೆ. ಅತ್ಯಂತ ಸುಂದರ ಹಾಡನ್ನು ಹಿಂದಿಯಲ್ಲಿ ಹಾಡಿದ್ದಾರೆ. ಪ್ರೋಫೆಶನಲ್ ಸಿಂಗರ್‌ ಹಾಗೂ ನಟಿಯರನ್ನೇ ಮೀರಿಸುವ ಪರ್ಫಾಮೆನ್ಸ್ ನೀಡಿದ್ದಾರೆ. ದೇವೇಂದ್ರ ಫಡ್ನವಿಸ್ ಪತ್ನಿ ಅಮೃತ ಫಡ್ನಿವಿಸ್ ಹಾಡಿದ ಹಿಂದಿ ವರ್ಶನ್ ಮನಿಕ ಮಗೆ ಹಿತೆ ಹಾಡು ಇದೀಗ ಸಾಮಾಜಿತ ಜಾಲತಾಣಧಲ್ಲಿ ಭಾರಿ ಸದ್ದು ಮಾಡುತ್ತಿದೆ.

ಅಮೃತ ಫಡ್ನವಿಸ್ ನವೆಂಬರ್ 19 ರಂದು ಇನ್‌ಸ್ಟಾಗ್ರಾಂ ಮೂಲಕ ಈ ಹಾಡಿನ ತುಣುಕನ್ನು ಪೋಸ್ಟ್ ಮಾಡಿದ್ದಾರೆ. ಕ್ಷಣಾರ್ಧದಲ್ಲಿ ಈ ಹಾಡು ವೈರಲ್ ಆಗಿದೆ. ಲೈಕ್ಸ್ ಕಮೆಂಟ್‌ಗಳಿಂದ ತುಂಬಿ ಹೋಗಿದೆ. ಹಿಂದಿ ವರ್ಶನ್ ಹಾಡಿರುವುದು ಮಾತ್ರವಲ್ಲ, ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಮೃತ, ಸದ್ಯ ರಾಜಕೀಯ ಒತ್ತಡ ಬಿಸಿ ಬಿಸಿ ವಾತಾವರಣವವನ್ನು ಈ ಹಾಡನ್ನು ಕೇಳುತ್ತಾ ತಣ್ಣಗಾಗಿಸಿ ಎಂದು ದೇವೇಂದ್ರ ಫಡ್ನವಿಸ್ ಪತ್ನಿ ಬರೆದುಕೊಂಡಿದ್ದಾರೆ.

'ದೇವೇಂದ್ರ'ನ ಹಿಂದಿನ ಶಕ್ತಿಯೇ ಈ 'ಅಮೃತಾ'!

1.51 ನಿಮಿಷಗಳ ಹಾಡಿನ ತುಣುಕು ಭಾರಿ ಸದ್ದು ಮಾಡುತ್ತಿದೆ. ಅತ್ಯುತ್ತಮ ಗಾಯನ ಹಾಗೂ ಡ್ಯಾನ್ಸ್ ಮೂಲಕ ಮೂಲ ಹಾಡಿಗೆ ಯಾವುದೇ ಚ್ಯುತಿ ಬರದ ರೀತಿ ಹಾಡಿದ್ದಾರೆ. ಇನ್ನು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪತ್ನಿ ಗಾಯಕಿ ಅನ್ನೋದು ಈ ಮೂಲಕ ಎಲ್ಲರಿಗೂ ತಿಳಿದಿದೆ. ಮನಿಕ ಮಗೆ ಹಿತೆ ಹಿಂದಿ ವರ್ಶನ ಸಂಪೂರ್ಣ ಹಾಡನ್ನು ಬಿಡುಗಡೆ ಮಾಡುವಂತೆ ಹಲವುರು ಮನವಿ ಮಾಡಿದ್ದಾರೆ. ಅಮೃತಾ ಫಡ್ನಿವಿಸ್ ಮತ್ತಷ್ಟು ಆಲ್ಬಮ್ ಹಾಡುಗಳನ್ನು ಹಾಡಬೇಕು ಎಂದು ಹಲವು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.