Asianet Suvarna News Asianet Suvarna News

ಬಿಹಾರ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಬಿಗ್ ಶಾಕ್!

ಬಿಹಾರ ಚುನಾವಣೆ, ಬಿಜೆಪಿಗೆ ಶಾಕ್| ಮಹಾರಾಷ್ಟ್ರ ಮಾಜಿ ಸಿಎಂ ಗೆ ಪಾಸಿಟಿವ್| ದೇವೇಂದ್ರ ಫಡ್ನವಿಸ್ ಗೆ ಪಾಸಿಟಿವ್| ಬಿಹಾರದ ಚುನಾವಣೆ ಉಸ್ತುವಾರಿ ಹೊತ್ತಿರುವ ಫಡ್ನವಿಸ್| ಆಸ್ಪತ್ರೆಗೆ ದಾಖಲಾಗಿರುವ ಫಡ್ನವಿಸ್

Devendra Fadnavis Bihar BJP in charge tests positive for coronavirus pod
Author
Bangalore, First Published Oct 24, 2020, 2:49 PM IST

ಮುಂಬೈ(ಅ.24): ಒಂದೆಡೆ ಕೊರೋನಾ ಅಟ್ಟಹಾಸ ದೇಶಾದ್ಯಂತ ಜನರನ್ನು ಕಂಗೆಡಿಸಿದೆ. ಹೀಗಿರುವಾಗಲೇ ಬಿಹಾರ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಬಿಜೆಪಿ ಹಾಗೂ ನಿತೀಶ್ ಕುಮಾರ್ ಈ ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ರೀತಿಯ ಯತ್ನ ನಡೆಸುತ್ತಿದೆ. ಹೀಗಿರುವಾಗಲೇ ಇತ್ತ ಯುಪಿಎ ಕೂಡಾ ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ರೀತಿಯ ಕಸರತ್ತು ನಡೆಸುತ್ತಿದೆ. ಆದರೀಗ ಈ ಎಲ್ಲಾ ಪೈಪೋಟಿಯ ನಡುವೆ ಬಿಜೆಪಿಗೆ ಬಹುದೊಡ್ಡ ಆಘಾತಕಾರಿ ಸುದ್ದಿ ಬಂದೆರಗಿದೆ.

ಹೌದು ಬಿಹಾರದಲ್ಲಿ ಚುನಾವಣೆ ಎದುರಿಸುತ್ತಿರುವ ಬಿಜೆಪಿ ಇದರ ಉಸ್ತುವಾರಿಯನ್ನು ದೇವೇಂದ್ರ ಫಡ್ನವಿಸ್‌ಗೆ ವಹಿಸಿತ್ತು. ಹೀಗಿರುವಾಗಲೇ ಈಗ ಮಹಾಮಾರಾಷ್ಟ್ರ ಮಾಜಿ ಸಿಎಂ ಫಡ್ನವೀಸ್‌ಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚುನಾವಣೆಯ ಹೊಸ್ತಿಲಲ್ಲಿ ಬಿಹಾರ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದ ಫಡ್ನವೀಸ್‌ಗೆ ಕೊರೋನಾ ತಗುಲಿರುವುದು ಪಕ್ಷಕ್ಕೆ ಬಹುದೊಡ್ಡ ಆಘಾತ ನೀಡಿದೆ. 

Follow Us:
Download App:
  • android
  • ios