ವಧುವಿನ ಕಾಲಿಗೆ ಬಿದ್ದ ವರ ಹೂ ಹಾರ ಹಾಕಿ ಕಾಲಿಗೆ ಬಿದ್ದ ಮಧುಮಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಭಾರತೀಯ ಮದುವೆಗಳು ಸದಾ ಕಾಲ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತವೆ. ಮದುವೆಯಲ್ಲಿ ವರನ ಕಾಲಿಗೆ ವಧು ಬೀಳುವುದು ಸಾಮಾನ್ಯ ಸಂಪ್ರದಾಯವಾಗಿದೆ. ಆದರೆ ಇಲ್ಲೊಂದು ಕಡೆ ಮದುವೆಯಲ್ಲಿ ಹೂ ಹಾರ ಬದಲಾಯಿಸಿದ ನಂತರ ವಧು ವರ ಇಬ್ಬರು ಪರಸ್ಪರರ ಕಾಲಿಗೆ ಬಿದ್ದಿದ್ದಾರೆ. ಆದರೆ ವರ ತನ್ನ ಕಾಲಿಗೆ ಬೀಳುತ್ತಿದ್ದಂತೆ ವಧು ಕೂಡಲೇ ಬೇರೆಡೆ ತಿರುಗಿಕೊಂಡಿದ್ದಾಳೆ. ಆದರೆ ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹಾಸ್ಯಮಯವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಕಪ್ತಾನ್ ಹಿಂದೂಸ್ತಾನ್ ಹೆಸರಿನ ಖಾತೆ ಹೊಂದಿರುವವರು ಪೋಸ್ಟ್ ಮಾಡಿದ್ದು, 6 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ ವಧು ಹಾಗೂ ವರ ಇಬ್ಬರು ಹೂವಿನ ಮಾಲೆಯನ್ನು ಪರಸ್ಪರ ಒಬ್ಬರ ಕೊರಳಿಗೆ ಒಬ್ಬರು ಹಾಕುತ್ತಾರೆ. ಮೊದಲಿಗೆ ವರನ ಕೊರಳಿಗೆ ಹಾರ ಹಾಕುವ ವಧು ನಂತರ ಆತನ ಕಾಲಿಗೆ ಬೀಳುತ್ತಾಳೆ. ನಂತರ ವರ ವಧುವಿನ ಕೊರಳಿಗೆ ಹಾರ ಹಾಕಿದ್ದು, ನಂತರ ಆತನು ವಧುವಿನ ಕಾಲಿಗೆ ಬೀಳುತ್ತಾನೆ.
ವರನ ಈ ನಡೆಯನ್ನು ಅನೇಕರು ಶ್ಲಾಘಿಸಿದ್ದಾರೆ. ಒಬ್ಬರು ಇದು ಒಳ್ಳೆಯ ಕೆಲಸ ಎಂದು ಕಾಮೆಂಟ್ ಮಾಡಿದ್ದಾರೆ. ಈತ ಉದ್ದೇಶಪೂರ್ವಕವಾಗಿ ಇದನ್ನು ಮಾಡಿದ್ದರೆ ಇದು ಒಳ್ಳೆಯದೇ ಆದರೆ ಈತ ಸಂಪ್ರದಾಯ ಎಂಬಂತೆ ಈ ಕಾರ್ಯ ಮಾಡಿದಂತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇತ್ತೀಚೆಗೆ ಮದುವೆಯಲ್ಲಿ ಹಳೆ ಸಂಪ್ರದಾಯಗಳನ್ನು ಮುರಿದು ಹೊಸತನ ಮೆರೆಯುವುದು ಸಾಮಾನ್ಯ ಎನಿಸಿ ಬಿಟ್ಟಿದೆ. ಮದುವೆ ಕಾಗದಗಳಿಂದ ಹಿಡಿದು ಅಲಂಕಾರ ಸಂಪ್ರದಾಯಗಳಲ್ಲಿಯೂ ಜನ ಇಂದು ಹೊಸತನ ಮೆರೆಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬೆಂಗಾಲಿ ಸಮುದಾಯವೊಂದು ಮದುವೆಯ ಊಟದ ಮೆನುವನ್ನು ಅಡಿಕೋಲಿನಲ್ಲಿ ಬರೆಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಮದುವೆಯ ಆಹಾರ ಮೆನು ಅಡಿಕೋಲಿನಲ್ಲಿ ಪ್ರಿಂಟ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಮದುವೆ ಎಂದ ಮೇಲೆ ಅಲ್ಲಿರುವ ತಮಾಷೆ ಫನ್‌ಗಳಿಗೆ ಲೆಕ್ಕವೇ ಇರುವುದಿಲ್ಲ. ಮದುವೆಯೊಂದಲ್ಲಿ ಹೂ ಹಾರ ಹಾಕಲು ವರ ಮುಂದಾದಾಗ ವಧು ದೇಹದಲ್ಲಿ ಮೂಳೆಯೇ ಇಲ್ಲವೇನೋ ಎಂಬುವಷ್ಟು ಹಿಂಭಾಗಕ್ಕೆ ಬಾಗಿ ವರನನ್ನು ಕಾಡಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳ ಹಿಂದೆ ವೈರಲ್ ಆಗಿದ್ದು, ವಧುವಿನ ತುಂಟ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
Vijayapura: ಮೂಗ ಯುವತಿ, ಯುವಕನಿಗೆ ಕೂಡಿ ಬಂದ ಕಂಕಣ ಭಾಗ್ಯ..!
ವಿಡಿಯೋದಲ್ಲಿ ಕಾಣಿಸುವಂತೆ ವರ ಶೆರ್ವಾನಿ ತೊಟ್ಟಿದ್ದು, ವಧು ಸುಂದರವಾದ ಲೆಹಂಗಾ ತೊಟ್ಟಿದ್ದಾಳೆ. ಇಬ್ಬರ ಮುಖದಲ್ಲೂ ಕಳೆ ಕಟ್ಟಿದ ನಗುವಿದ್ದು, ವರ ವಧುವಿನ ಕೊರಳಿಗೆ ಹೂ ಹಾರ ಹಾಕಲು ಯತ್ನಿಸಿದಾಗ ವಧು ಮೊದಲಿಗೆ ಸ್ವಲ್ಪ ಹಿಂಭಾಗಕ್ಕೆ ಬಾಗುತ್ತಾಳೆ. ಈ ವೇಳೆ ವರ ಇನ್ನು ಸ್ವಲ್ಪ ಬಾಗಿದ್ದು, ಈ ವೇಳೆ ವಧು ಆತನಿಗೆ ಹೂ ಹಾರ ಹಾಕಲು ಕೊರಳು ಸಿಗದಷ್ಟು ಹಿಂಭಾಗಕ್ಕೆ, ಕಮಾನಿನಂತೆ ಬಾಗುತ್ತಾಳೆ. ಕೊನೆಗೂ ವರ ವಧುವಿನ ಕೊರಳಿಗೆ ಹೂ ಹಾರ ಹಾಕಿಯೇ ಬಿಡುತ್ತಾನೆ. ಅಲ್ಲದೇ ಮತ್ತೆ ನೇರವಾಗಿ ನಿಲ್ಲಲು ಆಕೆ ವರನ ಕೈಯನ್ನು ಹಿಡಿಯುತ್ತಾಳೆ.
ಡಾನ್ಸ್ ಮಾಡಿದ್ದಕ್ಕೆ ಸಿಟ್ಟಿಗೆದ್ದು ಹೊಡೆದ ವರ: ಅದೇ ಮಂಟಪದಲ್ಲೇ ಸೋದರ ಸಂಬಂಧಿಯ ವಿವಾಹವಾದ ವಧು