Vijayapura: ಮೂಗ ಯುವತಿ, ಯುವಕನಿಗೆ ಕೂಡಿ ಬಂದ ಕಂಕಣ ಭಾಗ್ಯ..!

*  ಇತರರಿಗೆ ಮಾದರಿಯಾದ ವಿಜಯಪುರದ ಸ್ವಪ್ನಾ, ಹುಬ್ಬಳ್ಳಿಯ ವಿನಾಯಕ ಜೋಡಿ ಮದುವೆ
*  ಅಕ್ಕಿ ಕಾಲೋನಿಯಲ್ಲಿ ಮೂಗ ವಧು- ವರರ ವಿವಾಹ ಸಂಭ್ರಮವೋ ಸಂಭ್ರಮ
*  ಸತಿಪತಿಗಳಾಗಿ ಹೊಸ ಜೀವನದ ಗೂಡು ಕಟ್ಟಿಕೊಂಡ ಮೂಗ ಹಕ್ಕಿಗಳು
 

Dumb Woman Young Man Marriage Held at Vijayapura grg

ರುದ್ರಪ್ಪ ಆಸಂಗಿ

ವಿಜಯಪುರ(ಫೆ.22):  ಹಣೆಯಕ್ಕಿ ಕೂಡಿದರೆ ಹಡೆದವ್ವ ಬೇಕಿಲ್ಲ ಎಂಬುವುದು ಸುಳ್ಳಲ್ಲ. ಕಂಕಣ ಭಾಗ್ಯ ಒಲಿದು ಬಂದರೆ ಆ ಭಗವಂತ ಕೂಡ ತಡೆಯಲು ಸಾಧ್ಯವಿಲ್ಲ ಎನ್ನುವುದಕ್ಕೆ ನಗರದಲ್ಲಿ ಸೋಮವಾರ ನಡೆದ ಮೂಗ ವಧು-ವರರಿಬ್ಬರ(Bride-Groom) ವಿವಾಹ(Marriage) ಸಾಕ್ಷಿಯಾಗಿದೆ. ವಧು ಹಾಗೂ ವರ ಇಬ್ಬರಿಗೂ ಮಾತುಗಳು ಬರುವುದಿಲ್ಲ. ಕೈ, ಸನ್ನೆ, ಕಣ್ಣು ಸನ್ನೆಯಲ್ಲಿಯೇ ಎಲ್ಲವೂ. ಇಂಥದರಲ್ಲಿ ಈ ಮೂಗ ವಧು- ವರನಿಗೆ ಅಂತೂ ಇಂತೂ ಕಂಕಣ ಭಾಗ್ಯ ಯೋಗ ಕೂಡಿ ಬಂತು. ವಿಜಯಪುರ ನಗರದ ಆಶ್ರಮ ಹತ್ತಿರದ ಅಕ್ಕಿ ಕಾಲೋನಿಯಲ್ಲಿ ಸೋಮವಾರ ಮೂಗ ವಧು- ವರರ ವಿವಾಹ ಸಂಭ್ರಮವೋ ಸಂಭ್ರಮ.

ನಗರದ ಸ್ವಪ್ನ ಕಿವುಡ ಮತ್ತು ಮೂಗ ಮಕ್ಕಳ ವಸತಿ ಶಾಲೆಯಲ್ಲಿ ಸುಜಾತ ಶಿವಾನಂದ ರೇಶ್ಮಿ ದಂಪತಿ ಪುತ್ರಿ ಸ್ವಪ್ನ (21) ಹಾಗೂ ಹುಬ್ಬಳ್ಳಿಯ ಪ್ರಭಾವತಿ ಚಂದ್ರಶೇಖರ ಶಿವಪ್ಪಯ್ಯನಮಠ ದಂಪತಿ ಪುತ್ರ ವಿನಾಯಕ (26) ಇಬ್ಬರೂ ಮೂಗರು(Dumb). 

Chanakya Career Academy: ಸರಕಾರಿ ಉದ್ಯೋಗದ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿದೆ ಚಾಣಕ್ಯ ಅಕಾಡೆಮಿ

ಈ ಮೂಗರ ಭವಿಷ್ಯದಲ್ಲಿ ಕಂಕಣ ಭಾಗ್ಯ ಒಲಿದು ಬರುತ್ತದೆಯೋ ಇಲ್ಲವೋ ಎಂದು ಇಬ್ಬರ ತಂದೆ- ತಾಯಿಗಳು ಚಿಂತೆಗೀಡಾಗಿದ್ದರು. ದೇವರ ಆಟ ಬಲ್ಲವರು ಯಾರೂ ಇಲ್ಲ ಎನ್ನುವುದು ಈ ಮೂಗರ ಬದುಕಿನಲ್ಲಿ ನಿಜವಾಗಿದೆ. ಇಬ್ಬರು ಮೂಗರು ಭಾವನಾತ್ಮಕವಾಗಿ ಒಂದುಗೂಡಲು ಮೈಸೂರಿನ(Mysuru) ಶ್ರವಣದೋಷವುಳ್ಳ ಮಕ್ಕಳ ತರಬೇತಿ ಕೇಂದ್ರದಲ್ಲಿ ವಿಶೇಷ ಶಿಕ್ಷಣ(Special Education) ಪಡೆಯಲು ಈ ಇಬ್ಬರು ತರಬೇತಿ ಕೇಂದ್ರದಲ್ಲಿ ಸೇರಿದ್ದರು. ಆಗ ಈ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ(Love). ಅದು ದಿನವೂ ಗಟ್ಟಿಗೊಂಡು ಇಬ್ಬರು ಪರಸ್ಪರರಲ್ಲಿ ಕಳೆದು ಹೋಗಿದ್ದಾರೆ. ತರಬೇತಿ ಕೇಂದ್ರದವರು ಈ ಯುವಕ, ಯುವತಿಯ ಪ್ರೇಮ ಸಲ್ಲಾಪ ಕಂಡು ತಡ ಮಾಡದೇ ಇಬ್ಬರ ತಂದೆ- ತಾಯಿಗಳಿಗೆ ವಿಷಯ ತಿಳಿಸಿದ್ದಾರೆ. ಆಗ ವಧು- ವರರ ತಂದೆ ತಾಯಿಗಳು ಇಬ್ಬರೂ ಮೂಗರಿಗೆ ಮದುವೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಅವರ ಆ ನಿರ್ಧಾರ ಈ ಮದುವೆಗೆ ಕಾರಣವಾಗಿದೆ. ಮೂಗ ಹಕ್ಕಿಗಳು ಈಗ ಸತಿಪತಿಗಳಾಗಿ ಹೊಸ ಜೀವನದ ಗೂಡು ಕಟ್ಟಿಕೊಂಡಿದ್ದಾರೆ.

ವಧು ಸ್ವಪ್ನಾ ವಿಜಯಪುರದವಳಾಗಿದ್ದಾಳೆ(Vijayapura). ಬಿಎ ಫೈನಲ್‌ನಲ್ಲಿ ಓದುತ್ತಿದ್ದಾಳೆ. ತಂದೆ- ತಾಯಿ ಸ್ವಪ್ನಾ ಕಿವುಡ ಮತ್ತು ಮೂಗ ಮಕ್ಕಳ ವಸತಿ ಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸ್ವಪ್ನಾ ಈಗ ಮೂಗ, ಕಿವುಡ ಮಕ್ಕಳಿಗೆ ಪಾಠ ಹೇಳುತ್ತಿದ್ದಾಳೆ. ವರ ವಿನಾಯಕ ಹುಬ್ಬಳ್ಳಿಯವರಾಗಿದ್ದಾರೆ(Hubballi). ಐಟಿಐ ಮುಗಿಸಿಕೊಂಡಿದ್ದಾರೆ. ಖಾಸಗಿ ಕಂಪನಿಯಲ್ಲಿ ಹುಬ್ಬಳ್ಳಿಯಲ್ಲಿ ನೌಕರಿ ಮಾಡುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ಅವರ ತಂದೆ- ತಾಯಿಗಳು ಮಗನನ್ನು ನೌಕರಿ ಬಿಡಿಸಿ ಮನೆಯಲ್ಲಿಯೇ ಹಿಟ್ಟಿನ ಗಿರಣಿ ಹಾಕಿಕೊಟ್ಟಿದ್ದಾರೆ.

Vijaypur: ಕಾಲೇಜು ಸುತ್ತಮುತ್ತ ಕರ್ಫ್ಯೂ, ಹೂವಿನ ಅಂಗಡಿಗಳು ಬಂದ್, ವ್ಯಾಪಾರಿಗಳಿಗೆ ಸಂಕಷ್ಟ

ಮನಗೂಳಿ ಸಂಗನಬಸವ ಶಿವಾಚಾರ್ಯರು, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿ.ಡಿ.ಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ , ಮಾಜಿ ಮೇಯರ್‌ ಗೋಪಾಲ ಘಟಕಾಂಬಳೆ. ರವಿ ಬಿಜ್ಜರಗಿ, ಅಶೋಕ ತಿಮಶೆಟ್ಟಿ, ಸಿದ್ದು ಮಲ್ಲಿಕಾರ್ಜುನಮಠ. ವಿಜಯ ಹಿರೇಮಠ. ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು .ಅಂಗವಿಕಲ ಇಲಾಖೆಯ ಸಿಬ್ಬಂದಿಗಳು ಮೂಗ ಮಕ್ಕಳ ಮದುವೆ ಸಾಕ್ಷೀಕರಿಸಿದರು. ಮನೋಹರ ಗುಡ್ಡೋಡಗಿ ಎಂಬ ಯುವಕ ಮೂಗರ ಮದುವೆಯಲ್ಲಿ ಕಾಸು ಪಡೆಯದೇ ಉಚಿತವಾಗಿ ಹಾಡುಗಳನ್ನು ಹಾಡಿ ಜನರನ್ನು ರಂಜಿಸಿದರು. ಸಿದ್ದಯ್ಯ ಹಿರೇಮಠ ಮದುವೆ ನಡೆಸಿಕೊಟ್ಟರು.

ಮೂಗ ಮಗಳ ಮದುವೆ ಮಾಡುವುದು ಹೇಗೆ ಎಂದು ಹಗಲು ರಾತ್ರಿ ಚಿಂತೆ ಕೊರೆಯುತ್ತಿತ್ತು. ಆದರೆ ಆ ದೇವರು ನನ್ನ ಮಗಳಿಗೆ ಕಂಕಣ ಭಾಗ್ಯ ಕರುಣಿಸಿದ್ದಾನೆ. ಈಗ ನನ್ನ ಮಗಳ ಮದುವೆ ಚಿಂತೆ ದೂರಾಗಿದೆ ಅಂತ ವಿಜಯಪುರದ ಸ್ವಪ್ನಾ ತಾಯಿ ಸುಜಾತಾ ಶಿವಾನಂದ ರೇಶ್ಮಿ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios