Asianet Suvarna News Asianet Suvarna News

Kavach Train System: ಕವಚಕ್ಕೆ ಹೆಚ್ಚಾದ ಬೇಡಿಕೆ, ಗಗನ ಮುಟ್ಟಿದ ಈ ಎರಡು ಕಂಪನಿ ಷೇರುಗಳು!

ಕವಚ್ ಎಂಬುದು ಆರ್‌ಡಿಎಸ್‌ಓ (ರಿಸರ್ಚ್ ಡಿಸೈನ್ ಮತ್ತು ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್) ಮೂಲಕ ಭಾರತೀಯ ರೈಲ್ವೇಸ್ ಅಭಿವೃದ್ಧಿಪಡಿಸಿದ ಸ್ವಯಂಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆಯಾಗಿದೆ. ರೈಲ್ವೆಯು 2012 ರಲ್ಲಿ ಈ ವ್ಯವಸ್ಥೆಯ ಕುರಿತಾಗಿ ಕೆಲಸ ಮಾಡಲು ಪ್ರಾರಂಭಿಸಿತು. ಆ ಸಮಯದಲ್ಲಿ ಈ ಯೋಜನೆಯ ಹೆಸರು ರೈಲು ಘರ್ಷಣೆ ತಪ್ಪಿಸುವ ವ್ಯವಸ್ಥೆ (TCAS) ಎಂದಾಗಿತ್ತು.
 

Demand for Kavach Train System on every rail route now shares of these two companies booming san
Author
First Published Jun 5, 2023, 7:57 PM IST

ಮುಂಬೈ (ಜೂ.5): ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ಅಪಘಾತದ ನಂತರ, ಈ ಮಾರ್ಗದ ರಕ್ಷಾಕವಚ ವ್ಯವಸ್ಥೆಯನ್ನು ಅಳವಡಿಸಿದ್ದರೆ, ಈ ಅಪಘಾತವನ್ನು ತಪ್ಪಿಸಬಹುದಿತ್ತು ಎಂಬ ಪ್ರಶ್ನೆಗಳು ಈಗ ಎದ್ದಿವೆ. ಈ ಅಪಘಾತದ ನಂತರ, ರೈಲ್ವೆ ಸಚಿವಾಲಯದ ವಕ್ತಾರರು ಈ ಮಾರ್ಗದಲ್ಲಿ ರಕ್ಷಾಕವಚ ವ್ಯವಸ್ಥೆಯನ್ನು ಅಳಡಿಸಲಾಗಿರಲಿಲ್ಲ ಎಂದು ಹೇಳಿದ್ದರು. ಈ ವರ್ಷದ ಆರಂಭದಲ್ಲಿ ಸ್ವಯಂಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆಯ ಡೆಮೊ ಅನ್ನು ತೋರಿಸಲಾಯಿತು. ಇದರಲ್ಲಿ ಎರಡು ರೈಲುಗಳು ಮುಖಾಮುಖಿಯಾದಾಗ ರೈಲುಗಳು ಸ್ವಯಂಚಾಲಿತವಾಗಿ ನಿಲ್ಲುತ್ತವೆ. ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಹಿಂದೆ ಭಾರತೀಯ ರೈಲ್ವೆಯ ಉದ್ದೇಶ ಶೂನ್ಯ ಅಪಘಾತದ ಗುರಿಯನ್ನು ಸಾಧಿಸುವುದು. ಇದರ ಮೊದಲ ಪ್ರಯೋಗವನ್ನು 2016 ರಲ್ಲಿ ನಡೆಸಲಾಗಿತ್ತು. ಕವಚ್ ಎಂಬುದು ರಿಸರ್ಚ್ ಡಿಸೈನ್ ಮತ್ತು ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್  ಅಂದರೆ ಆರ್‌ಡಿಎಸ್‌ಓ ಮೂಲಕ ಭಾರತೀಯ ರೈಲ್ವೇಸ್ ಅಭಿವೃದ್ಧಿಪಡಿಸಿದ ಸ್ವಯಂಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆ. ರೈಲ್ವೆಯು 2012 ರಲ್ಲಿ ಈ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಪ್ರಾರಂಭ ಮಾಡಿತ್ತು. ಆ ಸಮಯದಲ್ಲಿ ಈ ಯೋಜನೆಯ ಹೆಸರು ರೈಲು ಘರ್ಷಣೆ ತಪ್ಪಿಸುವ ವ್ಯವಸ್ಥೆ (TCAS) ಎಂದಾಗಿತ್ತು.

ಈ ವ್ಯವಸ್ಥೆಯು ಅನೇಕ ಎಲೆಕ್ಟ್ರಾನಿಕ್ ಸಾಧನಗಳ ಒಂದು ಗುಂಪಾಗಿದೆ. ಇದರಲ್ಲಿ ರೇಡಿಯೋ ತರಂಗಾಂತರ ಗುರುತಿಸುವ ಸಾಧನಗಳನ್ನು ರೈಲುಗಳು, ಹಳಿಗಳು, ರೈಲ್ವೆ ಸಿಗ್ನಲ್ ವ್ಯವಸ್ಥೆಗಳು ಮತ್ತು ಪ್ರತಿ ನಿಲ್ದಾಣದಲ್ಲಿ ಒಂದು ಕಿಲೋಮೀಟರ್ ದೂರದಲ್ಲಿ ಸ್ಥಾಪಿಸಲಾಗಿದೆ. ಈ ವ್ಯವಸ್ಥೆಯು ಅಲ್ಟ್ರಾ ಹೈ ರೇಡಿಯೊ ಫ್ರೀಕ್ವೆನ್ಸಿ ಮೂಲಕ ಇತರ ಘಟಕಗಳೊಂದಿಗೆ ಸಂವಹನ ನಡೆಸುತ್ತದೆ. ಲೊಕೊ ಪೈಲಟ್ ಸಿಗ್ನಲ್ ಜಂಪ್ ಮಾಡಿದ ತಕ್ಷಣ, ರಕ್ಷಾಕವಚವು ಸಕ್ರಿಯಗೊಳ್ಳುತ್ತದೆ. ಇದರ ನಂತರ ವ್ಯವಸ್ಥೆಯು ಲೊಕೊ ಪೈಲಟ್‌ಗೆ ಎಚ್ಚರಿಕೆ ನೀಡುತ್ತದೆ ಮತ್ತು ನಂತರ ರೈಲಿನ ಬ್ರೇಕ್‌ಗಳನ್ನು ನಿಯಂತ್ರಿಸುತ್ತದೆ. ಹಳಿಯಲ್ಲಿ ಮತ್ತೊಂದು ರೈಲು ಬರುತ್ತಿದೆ ಎಂದು ಸಿಸ್ಟಮ್ ಪತ್ತೆ ಮಾಡಿದ ತಕ್ಷಣ, ಅದು ಮೊದಲ ರೈಲಿನ ಚಲನೆಯನ್ನು ನಿಲ್ಲಿಸುತ್ತದೆ.

ಕವಚ ಸಿದ್ಧ ಮಾಡಿದ ಕಂಪನಿಗಳ ಷೇರು ಏರಿಕೆ: ದೇಶದಾದ್ಯಂತ ಎಲ್ಲಾ ರೈಲು ಮಾರ್ಗಗಳಲ್ಲಿ ಕವಚ್ ವ್ಯವಸ್ಥೆಯನ್ನು ಅಳವಡಿಸಬೇಕೆಂಬ ಬೇಡಿಕೆ ಏರಿಕೆಯಾಗುತ್ತಿದೆ. ಈ ನಡುವೆ, ಕೆರ್ನೆಕ್ಸ್ ಮೈಕ್ರೋಸಿಸ್ಟಮ್ಸ್ ಮತ್ತು ಎಚ್‌ಬಿಎಲ್ ಪವರ್ ಸಿಸ್ಟಮ್ಸ್, ಆರ್ಮರ್ ಸಿಸ್ಟಮ್‌ಗಳ ತಯಾರಿಕೆಗೆ ಸಂಬಂಧಿಸಿದ ಕಂಪನಿಯ ಷೇರುಗಳು ಸೋಮವಾರ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿವೆ. ಷೇರುಪೇಟೆಯಲ್ಲಿ ಸೋಮವಾರದದ ವಹಿವಾಟಿನ ಅಂತ್ಯಕ್ಕೆ ಕೆರ್ನೆಕ್ಸ್ ಮೈಕ್ರೋಸಿಸ್ಟಮ್ಸ್ ಕಂಪನಿಯ ಷೇರುಗಳಿ ಶೇ.5ರಷ್ಟು ಅಪ್ಪರ್‌ ಸರ್ಕ್ಯೂಟ್‌ ಗಡಿ ಮುಟ್ಟಿ ಪ್ರತಿ ಷೇರಿಗೆ 297.15ರಂತೆ ಕೊನೆಗೊಂಡವು. ಇನ್ನು ಎಚ್‌ಬಿಎಲ್ ಪವರ್ ಸಿಸ್ಟಮ್ಸ್ ಕಂಪನಿಯ ಷೇರುಗಳು ಶೇ. 7.70ರಷ್ಟು ಏರಿಕೆ ಕಂಡಿದ್ದು, 120.95ಕ್ಕೆ ದಿನದ ವಹಿವಾಟು ಮುಗಿಸಿದೆ.

ಕವಚ್ ಸಿಸ್ಟಮ್ ಅನ್ನು ರೈಲ್ವೇ ಜೊತೆಯಲ್ಲಿ ಲಿಸ್ಟೆಡ್ ಕಂಪನಿ ಎಚ್‌ಬಿಎಲ್ ಪವರ್ ಸಿಸ್ಟಮ್ಸ್, ಕೆರ್ನೆಕ್ಸ್ ಮೈಕ್ರೋಸಿಸ್ಟಮ್ಸ್ ಮತ್ತು ಇನ್ನೂ ಷೇರುಪೇಟೆಯಲ್ಲಿ ಲಿಸ್ಟ್‌ ಆಗದ ಮೇಧಾ ಸರ್ವೋ ಡ್ರೈವ್‌ಗಳ ಸಹಯೋಗದೊಂದಿಗೆ ಸಂಶೋಧನೆ ಮಾಡಲಾಗಿದೆ.  ಭಾರತದಲ್ಲಿ ರೈಲುಗಳಿಗೆ ರಕ್ಷಾಕವಚ ಉಪಕರಣಗಳನ್ನು ಒದಗಿಸಲು ರಿಸರ್ಚ್ ಡಿಸೈನ್ಸ್ ಮತ್ತು ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (RDSO) ಮೂರು ಸಂಸ್ಥೆಗಳಾದ ಮೇಧಾ, ಎಚ್‌ಬಿಎಲ್‌ ಹಾಗೂ ಕೆರ್ನೆಕ್ಸ್‌ಗೆ ಅನುಮೋದನೆ ನೀಡಿದೆ.

ಒಡಿಶಾ ರೈಲು ದುರಂತ, ಮೃತ ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರಿ ಕೆಲಸದ ಭರವಸೆ ನೀಡಿದ ಮಮತಾ ಬ್ಯಾನರ್ಜಿ!

ಹಾಗಿದ್ದರೂ, ರೈಲ್ವೆ ಮೂಲಗಳ ಪ್ರಕಾರ, ಇಡೀ ದೇಶದ ರೈಲು ಜಾಲದಲ್ಲಿ ಆಂಟಿ ಟ್ರೈನ್ ಕೊಲಿಷನ್ ಸಿಸ್ಟಮ್ (ಕವಚ್) ಅನ್ನು ಅಳವಡಿಸುವ ಪ್ರಕ್ರಿಯೆಯು ದೀರ್ಘ ಸಮಯ ತೆಗೆದುಕೊಳ್ಳಬಹುದು.

Odisha Train Accident: ಇಂಟರ್‌ ಲಾಕಿಂಗ್‌ ಸಿಸ್ಟಮ್‌ ಲೋಪದಿಂದಲೇ ನಡೆಯಿತಾ ರೈಲು ದುರಂತ ..?

Follow Us:
Download App:
  • android
  • ios