Asianet Suvarna News Asianet Suvarna News

ದೇಶದಲ್ಲಿ 7ನೇ ಡೆಲ್ಟಾ​ ಪ್ಲ​ಸ್‌ ವೈರಸ್‌ ಕೇಸ್‌ ಪತ್ತೆ!

* ದೇಶದಲ್ಲಿ 7ನೇ ಡೆಲ್ಟಾ​ ಪ್ಲ​ಸ್‌ ವೈರಸ್‌ ಕೇಸ್‌ ಪತ್ತೆ'

* ಮಧ್ಯ​ಪ್ರ​ದೇ​ಶ​ದ ರಾಜ​ಧಾನಿ ಭೋಪಾಲ್‌ನ 64 ವರ್ಷದ ವೃದ್ಧೆ​ಯೊ​ಬ್ಬ​ರಲ್ಲಿ ಕೊರೋನಾ ವೈರ​ಸ್‌ನ ಡೆಲ್ಟಾಪ್ಲಸ್‌ ತಳಿ

* ಡೆಲ್ಟಾತಳಿ ವಿಶ್ವವ್ಯಾಪಿ: ವಿಶ್ವಸಂಸ್ಥೆ ಎಚ್ಚರಿಕೆ

Delta plus Covid infection detected in Bhopal Madhya Pradesh first India 7th pod
Author
Bangalore, First Published Jun 19, 2021, 2:05 PM IST

ಭೋಪಾ​ಲ್‌(ಜೂ.19): ಮಧ್ಯ​ಪ್ರ​ದೇ​ಶ​ದ ರಾಜ​ಧಾನಿ ಭೋಪಾಲ್‌ನ 64 ವರ್ಷದ ವೃದ್ಧೆ​ಯೊ​ಬ್ಬ​ರಲ್ಲಿ ಕೊರೋನಾ ವೈರ​ಸ್‌ನ ಡೆಲ್ಟಾಪ್ಲಸ್‌ ತಳಿ ರೂಪಾಂತರಿ ಸೋಂಕು ಕಂಡು​ಬಂದಿದೆ. ಇದು ಮಧ್ಯ​ಪ್ರ​ದೇ​ಶ​ದಲ್ಲಿ ದಾಖ​ಲಾ​ದ ಮೊದಲ ಮತ್ತು ದೇಶ​ದಲ್ಲಿ ಪತ್ತೆ​ಯಾದ 7ನೇ ಡೆಲ್ಟಾಪ್ಲಸ್‌ ಪ್ರಕ​ರ​ಣ​ವಾ​ಗಿದೆ.

ಆದಾಗ್ಯೂ, ಈ ಸೋಂಕು ಕಂಡು​ಬಂದಿದ್ದ ವೃದ್ಧೆ ಇದೀಗ ಪೂರ್ತಿ ಗುಣ​ಮು​ಖ​ರಾ​ಗಿ​ದ್ದಾರೆ ಎಂಬುದೇ ಸಮಾ​ಧಾ​ನ​ಕ​ರ.

ದೇಶಾ​ದ್ಯಂತ ಆರೋಗ್ಯ ತುರ್ತು ಪರಿ​ಸ್ಥಿ​ತಿ ಮತ್ತು ಆಮ್ಲ​ಜ​ನ​ಕ​ ಸಿಲಿಂಡ​ರ್‌​ಗಳ ಅಭಾ​ವಕ್ಕೆ ಕಾರ​ಣ​ವಾದ ‘ಡೆಲ್ಟಾ’ ತಳಿಯ ರೂಪ​ದಲ್ಲೇ ‘ಡೆಲ್ಟಾಪ್ಲಸ್‌’ ವೈರಸ್‌ ಇರುವ ಕಾರಣ ಆತಂಕ ಎದು​ರಾ​ಗಿದೆ. ಜೊತೆಗೆ ಈ ಮಹಿ​ಳೆಯ ಜೊತೆಗೆ ಸಂಪರ್ಕ ಸಾಧಿ​ಸಿದ 20 ಮಂದಿ​ಯನ್ನು ಹುಡುಕಾಟ ನಡೆಸಿ ಅವರ ಗಂಟಲು ದ್ರವದ ಮಾದ​ರಿ​ಯನ್ನು ಪರೀ​ಕ್ಷೆ​ಗೊ​ಳ​ಪ​ಡಿ​ಸುವ ಕಾರ್ಯಕ್ಕೆ ಚುರುಕು ನೀಡ​ಲಾ​ಗಿದೆ ಎಂದು ಮೂಲ​ಗಳು ತಿಳಿ​ಸಿವೆ.

ಡೆಲ್ಟಾತಳಿ ವಿಶ್ವವ್ಯಾಪಿ: ವಿಶ್ವಸಂಸ್ಥೆ ಎಚ್ಚರಿಕೆ

ಭಾರತದಲ್ಲಿ ಪತ್ತೆ ಆದ ಡೆಲ್ಟಾಕೊರೋನಾ ರೂಪಾಂತರಿ ವೈರಸ್‌ ತಳಿ ಈಗ ವಿಶ್ವವ್ಯಾಪಿಯಾಗಿ ಆತಂಕ ಉಂಟು ಮಾಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್‌ ಹೇಳಿದ್ದಾರೆ.

ಶುಕ್ರವಾರ ಮಾತನಾಡಿದ ಅವರು, ಡೆಲ್ಡಾ ತಳಿ ಈಗ 80 ದೇಶಗಳಲ್ಲಿ ಕಂಡುಬಂದಿದೆ. ಇನ್ನೂ 12 ದೇಶಗಳಲ್ಲಿ ಇದು ಪತ್ತೆಯಾಗುವ ಆತಂಕ ಇದೆ. ಇದು ವೇಗವಾಗಿ ಸೋಂಕು ಹರಡಿಸಬಲ್ಲ ಸಾಮರ್ಥ್ಯ ಹೊಂದಿದ್ದು ಆತಂಕದ ವಿಚಾರ ಎಂದು ಹೇಳಿದ್ದಾರೆ.

Follow Us:
Download App:
  • android
  • ios