ದಿಲ್ಲಿ ಹವಾಮಾನ ಮತ್ತಷ್ಟು ಸುಧಾರಣೆ, 219ಕ್ಕೆ ಚೇತರಿಸಿದ ಸೂಚ್ಯಂಕ
ದಿಲ್ಲಿ ಹವಾಮಾನ ಮತ್ತಷ್ಟು ಸುಧಾರಣೆ: 219ಕ್ಕೆ ಚೇತರಿಸಿದ ಸೂಚ್ಯಂಕ- 2 ವಾರಗಳ ನಂತರ ಸಾಧಾರಣ ಮಟ್ಟಕ್ಕೆ ಚೇತರಿಕೆ- 2 ದಿನದಲ್ಲಿ ಮಳೆಯಿಂದಾಗಿ ಇಂಗಾಲದ ಅಂಶಗಳ ಹೀರಿಕೆ

ನವದೆಹಲಿ (ನ.12): ರಾಷ್ಟ್ರ ರಾಜಧಾನಿಯು ದೀಪಾವಳಿ ಹಬ್ಬಕ್ಕೆ ಮದುಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿರುವ ನಡುವೆಯೇ, ವಾಯುಗುಣಮಟ್ಟದಲ್ಲಿ ಸುಧಾರಣೆ ಕಂಡಿದ್ದು, ಕಲೆದ ಎರಡು ವಾರಗಳಲ್ಲಿ ಇದೇ ಮೊದಲ ಬಾರಿ ವಾಯು ಸೂಚ್ಯಂಕವು ಸಾಧಾರಣ ಮಟ್ಟಕ್ಕೆ (219) ಚೇತರಿಕೆ ಕಂಡಿದೆ. ಇದರಿಂದಾಗಿ ನೀಲಿ ಆಗಸಗಳು ಸ್ಪಷ್ಟವಾಗಿ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಣೆಯಾಗುವ ಸಾಧ್ಯತೆ ದಟ್ಟವಾಗಿದೆ.
ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಯೇ ವಾಯುಗುಣಮಟ್ಟ ಸುಧಾರಣೆಯಾಗಲು ಪ್ರಮುಖ ಕಾರಣ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅದರಿಂದಾಗಿ ದೆಹಲಿಯ ವಾಯುಮಾಲಿನ್ಯಕ್ಕೆ ಶೇ.30-35ರಷ್ಟು ಕೊಡುಗೆ ಕೊಡುತ್ತಿದ್ದ ಪಂಜಾಬ್-ಹರಿಯಾಣದ ರೈತರು ಕೂಳೆ ಸುಡುವುದನ್ನು ನಿಲ್ಲಿಸಿದ್ದಾರೆ. ಜೊತೆಗೆ ಶಾಲಾಮಕ್ಕಳಿಗೆ ಚಳಿಗಾಲದ ರಜೆಯನ್ನು ನೀಡಿರುವುದರಿಂದ ಸಂಚಾರ ದಟ್ಟಣೆಯಲ್ಲಿ ಭಾರಿ ಇಳಿಕೆಯಾಗಿರುವುದು ಕೂಡ ವಾಯುಮಾಲಿನ್ಯ ಕಡಿಮೆಯಾಗಲು ಕಾರಣವಾಗಿದೆ.
ಹರ್ಯಾಣದಲ್ಲಿ ಭೀಕರ ದುರಂತ, ನಕಲಿ ಮದ್ಯ ಸೇವಿಸಿ 19 ಮಂದಿ ಸಾವು
ಪಟಾಕಿ ಸುಡಬೇಡಿ, ಹೊಗೆಮಾಲಿನ್ಯ ಹಿನ್ನೆಲೆಯಲ್ಲಿ ಎಚ್ಚರಿಕೆ
ನಗರದಲ್ಲಿ ದೀಪಾವಳಿ ಹಬ್ಬಕ್ಕೆ ಭರದಿಂದ ಸಿದ್ಧತೆ ನಡೆಯುತ್ತಿರುವ ನಡುವೆಯೇ, ದೆಹಲಿ ಆರೋಗ್ಯ ಸಚಿವಾಲಯ ಕೆಲವು ಆರೋಗ್ಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಪ್ರಮುಖವಾಗಿ ಪಟಾಕಿ ಸುಡದಂತೆ ನಾಗರಿಕರಿಗೆ ಸಲಹೆ ನೀಡಿದೆ.
ವಾಯುಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ ಹೊರಡಿಸಿರುವ ಮಾರ್ಗಸೂಚಿಯಲ್ಲಿ, ಜನರು ಆದಷ್ಟು ಸಮೂಹ ಸಾರಿಗೆಯನ್ನು ಬಳಸುವಂತೆ ಸಲಹೆ ನೀಡಲಾಗಿದೆ.
ಅಲ್ಲದೆ ಮುಂಜಾನೆ ಮತ್ತು ಮುಸ್ಸಂಜೆಯಲ್ಲಿ ವಾಯುವಿಹಾರ ಹೋಗಬಾರದು. ಕಟ್ಟಿಗೆ, ಒಣಗಿದ ಎಲೆಗಳು ಹಾಗೂ ಕೂಳೆ ಸುಡುವುದನ್ನು ನಿಯಂತ್ರಿಸಬೇಕು. ಮನೆಯ ಒಳಗೆ ಸೊಳ್ಳೆ ಬತ್ತಿಗಳನ್ನು ಹಚ್ಚಬಾರದು. ಪಟಾಕಿ ಸುಡಬಾರದು ಎಂದು ತಿಳಿಸಲಾಗಿದೆ.
ಜಿಯೋ ಮಾಲ್ ಓಪನಿಂಗ್ ವೇಳೆ ಬೇರೆ ಬೇರೆ ಕಿವಿಯೋಲೆ ಧರಿಸಿ ಸುದ್ದಿಯಾದ ಇಶಾ ಅಂಬಾನಿ
ನಗರದಲ್ಲಿ ಓಡಾಡುವಾಗ ಆದಷ್ಟು ವಾಹನ ದಟ್ಟಣೆ ಇರುವ ರಸ್ತೆಗಳನ್ನು ಬಳಸಬಾರದು. ಜನರು ಉತ್ತಮ ಗುಣಮಟ್ಟದ ಹಣ್ಣು ಮತ್ತು ತರಕಾರಿಗಳನ್ನು ತಿನ್ನಬೇಕು. ಯಾವುದೇ ರೀತಿಯ ರೋಗದ ಲಕ್ಷಣಗಳು ಕಾಣಿಸಿದಲ್ಲಿ ತಕ್ಷಣವೇ ವೈದ್ಯರ ಜೊತೆ ಸಮಾಲೋಚಿಸಬೇಕು ಎಂದು ಸೂಚಿಸಲಾಗಿದೆ.
ಗರ್ಭಿಣಿಯರು, ಮಕ್ಕಳು, ಹಿರಿಯರು ಮತ್ತು ಅನಾರೋಗ್ಯವುಳ್ಳವರು ವಿಷಗಾಳಿಗೆ ತಮ್ಮನ್ನು ಒಡ್ಡಿಕೊಳ್ಳದಂತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ,. ಈ ನಡುವೆ ದೆಹಲಿಯ ವಾಯುಗುಣಮಟ್ಟ ಸಾಧಾರಣ ಮಟ್ಟಕ್ಕೆ ಇಳಿದಿದ್ದು, ಶನಿವಾರ ಮುಂಜಾನೆ 219 ಅಂಕ ದಾಖಲಿಸಿದೆ.