Asianet Suvarna News Asianet Suvarna News

ಹರ್ಯಾಣದಲ್ಲಿ ಭೀಕರ ದುರಂತ, ನಕಲಿ ಮದ್ಯ ಸೇವಿಸಿ 19 ಮಂದಿ ಸಾವು

ಹರ್ಯಾಣದ 2 ಜಿಲ್ಲೆಗಳ 4 ಗ್ರಾಮಗಳಲ್ಲಿ ನಕಲಿ ಮದ್ಯ ಸೇವಿಸಿ ಶನಿವಾರ 19 ಮಂದಿ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಕಾಂಗ್ರೆಸ್‌ ಹಾಗೂ ಜೆಜೆಪಿಯ ನಾಯಕರ ಇಬ್ಬರು ಪುತ್ರರು ಸೇರಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Many died after consuming toxic liquor in Haryana gow
Author
First Published Nov 12, 2023, 10:49 AM IST

ಚಂಡೀಗಢ (ನ.12): ಹರ್ಯಾಣದ 2 ಜಿಲ್ಲೆಗಳ 4 ಗ್ರಾಮಗಳಲ್ಲಿ ನಕಲಿ ಮದ್ಯ ಸೇವಿಸಿ ಶನಿವಾರ 19 ಮಂದಿ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಕಾಂಗ್ರೆಸ್‌ ಹಾಗೂ ಜೆಜೆಪಿಯ (Jannayak Janata Party) ನಾಯಕರ ಇಬ್ಬರು ಪುತ್ರರು ಸೇರಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಯಮುನಾನಗರ ಮತ್ತು ಅಂಬಾಲಾ ಜಿಲ್ಲೆಗಳ ಮಾಂಡೇಬರಿ, ಪಂಜೇತೋ ಕಾ ಮಜ್ರಾ, ಫೂಸ್‌ಗಢ ಮತ್ತು ಸಾರನ್‌ ಗ್ರಾಮಗಳಲ್ಲಿ ಈ ಘಟನೆ ನಡೆದಿದೆ.

ಘಟನೆ ಬಗ್ಗೆ ಪ್ರತಿಪಕ್ಷಗಳು ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಈ ಹಿಂದಿನ ನಕಲಿ ಮದ್ಯ ದುರಂತದಿಂದ ಸರ್ಕಾರ ಪಾಠ ಕಲಿತಿಲ್ಲ ಎಂದು ಮೂದಲಿಸಿವೆ. ಬಂಧಿತರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Bengaluru: ಕನ್ನಡ ಹಾಡು ಹಾಕದ್ದಕ್ಕೇ ಯುವಕನ ಕೊಲೆ!

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಗ್ರಾಮಗಳಲ್ಲಿ ಶೋಧ ನಡೆಸಿದ್ದಾರೆ.ಅಜ್ಞಾತ ಕಾರ್ಖಾನೆಯಿಂದ ತಯಾರಿಸಿ ಬಂಧಿತರಿಗೆ ಮಾರಾಟ ಮಾಡಿದ್ದ ಸುಮಾರು 200 ನಕಲಿ ಮದ್ಯಗಳ ಪೆಟ್ಟಿಗೆಗಳು, ಮದ್ಯ ತಯಾರಿಸಲು ಶೇಖರಿಸಿಟ್ಟಿದ್ದ ಸಾಮಗ್ರಿಗಳನ್ನು ಅಂಬಾಲಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ತನಿಖೆ ಕೈಗೊಂಡಿದ್ದಾರೆ.

ಗ್ರಾಮಸ್ಥರಿಗೆ ಈ ಬಗ್ಗೆ ಗೊತ್ತಿದ್ದರೂ ಹೆಸರು ಹೇಳಲು ಭಯಪಡುತ್ತಿದ್ದಾರೆ ಎಂದು ವರದಿ ತಿಳಿಸಿದೆ. ನನಗೆ ಭಯವಾಗುತ್ತಿದೆ. ದನಿ ಎತ್ತಿದರೆ ನಮ್ಮ ಜೀವಕ್ಕೆ ಅಪಾಯ ಎದುರಾಗಬಹುದು ಎಂದು ಗ್ರಾಮಸ್ಥನೊಬ್ಬ ಹೇಳಿಕೊಂಡಿದ್ದಾನೆ. ಜಿಲ್ಲೆಯಲ್ಲಿ ಅಕ್ರಮವಾಗಿ ತಯಾರಿಸಿದ ಶಂಕಿತ ನಕಲಿ ಮದ್ಯವನ್ನು ಸೇವಿಸಿ ಉತ್ತರ ಪ್ರದೇಶದ ಇಬ್ಬರು ವಲಸೆ ಕಾರ್ಮಿಕರು ಗುರುವಾರ ಅಂಬಾಲಾದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯ ಆತ್ಮಹತ್ಯೆ ಪ್ರಕರಣ, 15 ವರ್ಷಗಳ ಬಳಿಕ ಆರೋಪಿಗೆ ಶಿಕ್ಷೆ

ಅಂಬಾಲ ಪೊಲೀಸರು ಕಾರ್ಖಾನೆಯಲ್ಲಿ ತಯಾರಿಸಿದ 200 ಕ್ರೇಟ್ ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. 14 ಖಾಲಿ ಡ್ರಮ್‌ಗಳು ಮತ್ತು ಅಕ್ರಮ ಮದ್ಯ ತಯಾರಿಸಲು ಬಳಸಿದ್ದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ತನಿಖೆಗಾಗಿ ಯಮುನಾನಗರ ಪೊಲೀಸರು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದಾರೆ.

Follow Us:
Download App:
  • android
  • ios