ಘಟಿಕೋತ್ಸವದ ವೇಳೆ ಭಾರತೀಯ ಉಡುಗೆ ಜೊತೆ ಅಂಗವಸ್ತ್ರ ಧರಿಸಿ ಬನ್ನಿ: ದೆಹಲಿ ವಿವಿ ಆದೇಶ!

ಈ ತಿಂಗಳ ಕೊನೆಯಲ್ಲಿ ದೆಹಲಿ ವಿಶ್ವವಿದ್ಯಾಲಯವು ತನ್ನ 99ನೇ ಘಟಿಕೋತ್ಸವವನ್ನು ಆಚರಿಸಿಕೊಳ್ಳಲಿದೆ. ಈ ವೇಳೆ ಘಟಿಕೋತ್ಸವದಲ್ಲಿ ಭಾಗವಹಿಸಲಿರುವ ವಿದ್ಯಾರ್ಥಿಗಳು ಭಾರತೀಯ ಉಡುಗೆಯೊಂದಿಗೆ ಅಂಗವಸ್ತ್ರ ಧರಿಸಿ ಬರಬೇಕು ಎಂದು ಹೇಳಿದ್ದು, ಮಹಿಳೆಯರು ಸೀರೆ ಧರಿಸಿ ಬರಬೇಕು ಎಂದು ಆದೇಶಿಸಲಾಗಿದೆ.
 

Delhi University students to wear Indian attire with angvastra for convocation san

ನವದೆಹಲಿ (ಫೆ.5): ವಸಹಾತುಶಾಹಿಗಳ ಅಧಿಕಾರವನ್ನು ಬಿಂಬಿಸುವಂಥ ಹಳೆಯ ಕಾಲದ ಗೌನ್‌ಗಳ ಬದಲಿಗೆ ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಘಟಿಕೋತ್ಸವ ಕಾರ್ಯಕ್ರಮಕ್ಕೆ ಭಾಗವಹಿಸಲಿರುವ ವಿದ್ಯಾರ್ಥಿಗಳು ಭಾರತೀಯ ಉಡುಗೆಯೊಂದಿಗೆ ಅಂಗವಸ್ತ್ರ ಧರಿಸಿ ಬರಬೇಕು, ಮಹಿಳೆಯರು ಸೀರೆಯುಟ್ಟು ಬರಬೇಕು ಎಂದು ದೆಹಲಿ ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ತಿಂಗಳ ಕೊನೆಯಲ್ಲಿ ದೆಹಲಿ ವಿಶ್ವವಿದ್ಯಾಲಯ ತನ್ನ 99ನೇ ವರ್ಷದ ಘಟಿಕೋತ್ಸವ ಸಮಾರಂಭವನ್ನು ಆಚರಿಸಿಕೊಳ್ಳಲಿದೆ. ದೆಹಲಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ವಿಕಾಸ್ ಗುಪ್ತಾ ಈ ಕುರಿತಾಗಿ ಮಾಹಿತಿ ನೀಡಿದ್ದು, ಘಟಿಕೋತ್ಸವದ ಡ್ರೆಸ್‌ ಕೋಡ್‌ಅನ್ನು ಬದಲಿಸಲು ನಾವು ನಿರ್ಧಾರ ಮಾಡಿದ್ದೇವೆ. ಭಾರತೀಯ ಸಂಸ್ಕೃತಿಗೆ ಹೊಂದುವಂತೆ ಉಡುಗೆಯನ್ನು ಧರಿಸಿ ಬರುವಂತೆ ಸೂಚಿಸಲಾಗಿದೆ ಎಂದಿದ್ದಾರೆ. ಇಂಗ್ಲೀಷ್ ಸ್ಟೈಲ್‌ನ ನಿಲುವಂಗಿ ಹಾಗೂ ಅದರ ಮೇಲೆ ಗೌನ್‌ ಧರಿಸುವ ಸಂಪ್ರದಾಯ ಬಹಳ ಕಾಲದಿಂದಲೂ ಇತ್ತು. ಈಗ ಅದನ್ನು ಬದಲಿಸಬೇಕು ಎಂದು ತೀರ್ಮಾನ ಮಾಡಿದ್ದೇವೆ. ವಿದ್ಯಾರ್ಥಿಗಳಿಗೆ ಭಾರತೀಯ ಉಡುಗೆಯೊಂದಿಗೆ ಅಂಗವಸ್ತ್ರಗಳನ್ನು ಧರಿಸುವಂತೆ ಹೇಳಲಾಗಿದೆ. ಇನ್ನು ಅಧಿಕಾರಿಗಳಿಗೆ ಖಾದಿ ರೇಷ್ಮೆಯಿಂದ ತಯಾರಿಸಲಾದ ಉಡುಗೆಗಳನ್ನು ಧರಿಸುವಂತೆ ಹೇಳಲಾಗಿದೆ. ನಮ್ಮ ಮೂಲದ ಬಗ್ಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಇದು ಅಗತ್ಯ ಎಂದು ದೆಹಲಿ ವಿವಿ ಉಪಕುಲಪದಿ ಯೋಗೇಶ್‌ ಸಿಂಗ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

99ನೇ ಘಟಿಕೋತ್ಸವ (Convocation) ಕಾರ್ಯಕ್ರಮ ದೆಹಲಿ ವಿವಿಯಲ್ಲಿ (Delhi University) ಫೆ.25 ರಂದು ನಡೆಯಲಿದೆ. ಸ್ಪೋರ್ಟ್ಸ್‌ ಸ್ಟೇಡಿಯಂ ಸಂಕೀರ್ಣದ ಮಲ್ಟಿಪರ್ಪಸ್‌ ಹಾಲ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ.ಇದು ಕಡ್ಡಾಯವಲ್ಲದಿದ್ದರೂ, ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಗಳಾದ ಕುರ್ತಾ (Kurta) ಮತ್ತು ಸೀರೆಗಳನ್ನು (Saree)  ಆಯ್ಕೆ ಮಾಡಲು ಪ್ರೋತ್ಸಾಹಿಸಲಾಗುತ್ತದೆ ಎಂದು ಡಿಯು ಅಧಿಕಾರಿಗಳು ತಿಳಿಸಿದ್ದಾರೆ. ಅಂಗವಸ್ತ್ರಗಳನ್ನು ಪದವಿ, ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳಿಗೆ ಕಲರ್‌ ಕೋಡೆಡ್‌ ಮಾಡಲಾಗುತ್ತದೆ.

ಮುಖ್ಯ ಅತಿಥಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಖಾದಿ ರೇಷ್ಮೆಯಿಂದ ಮಾಡಿದ ಉಡುಪನ್ನು ನೀಡಲು ವಿಶ್ವವಿದ್ಯಾಲಯದ ಅಧಿಕಾರಿಗಳು ಯೋಜಿಸಿದ್ದಾರೆ. ವರದಿಗಳ ಪ್ರಕಾರ, ಡಿಸೆಂಬರ್ 2022 ರಲ್ಲಿ ನಡೆದ ಕಾರ್ಯಕಾರಿ ಮಂಡಳಿಯು ಈ ಬದಲಾವಣೆಯನ್ನು ಸರ್ವಾನುಮತದಿಂದ ಅಂಗೀಕರಿಸಿತು. ಅಂಗವಸ್ತ್ರವು ಭುಜದ ಮೇಲೆ ಇರಿಸಿಕೊಳ್ಳುವಂತ ಬಟ್ಟೆಯಾಗಿದೆ. ಇದರ ಅಂಚುಗಳನ್ನು ವಿಶೇಷವಾಗಿ ಅಲಂಕರಿಸಲಾಗಿರುತ್ತದೆ.  ಇದನ್ನು ಮುಖ್ಯವಾಗಿ ಧೋತಿ ಮತ್ತು ಕುರ್ತಾದೊಂದಿಗೆ ಪುರುಷರು ಬಳಸುತ್ತಾರೆಯಾದರೂ, ಇದನ್ನು ಗೌರವದ ಸಂಕೇತವಾಗಿಯೂ ನೀಡಲಾಗುತ್ತದೆ.

ರಾಷ್ಟ್ರಪತಿ ಭವನದ ಬಳಿಕ ದೆಹಲಿ ವಿವಿಯ ಮೊಘಲ್‌ ಗಾರ್ಡನ್‌ ಹೆಸರೂ ಬದಲು!

ಈ ನಡುವೆ ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳಲ್ಲಿ ಅನಾಥರಿಗೆ ಸೂಪರ್‌ನ್ಯೂಮರರಿ ಕೋಟಾದ ಅಡಿಯಲ್ಲಿ ತಲಾ ಎರಡು ಸೀಟುಗಳನ್ನು ನೀಡಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಈ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್ ಶುಲ್ಕಗಳು, ಪರೀಕ್ಷಾ ಶುಲ್ಕಗಳು ಮತ್ತು ಇತರ ಕಡ್ಡಾಯ ಶುಲ್ಕಗಳ ಪಾವತಿಯಿಂದ ವಿನಾಯಿತಿಯನ್ನು ಒಳಗೊಂಡಿರುತ್ತಾರೆ. ಅದರೊಂದಿಗೆ ಕಾಲೇಜಿನ ಯಾವುದೇ ರೀತಿಯ ಶುಲ್ಕಗಳು ಇವರಿಗೆ ಇದ್ದಿರುವುದಿಲ್ಲ.

ಮೋದಿ ವಿರುದ್ಧ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ, ದೆಹಲಿ ವಿಶ್ವವಿದ್ಯಾಲಯದಲ್ಲಿ ಸೆಕ್ಷನ್ 144 ಜಾರಿ

ಇದರಿಂದಾಗಿ ಕೋವಿಡ್‌-19 ಸಮಯದಲ್ಲಿ ಪೋಷಕರನ್ನು ಕಳೆದುಕೊಂಡವರು ಸೇರಿದಂತೆ ಸಾವಿರಾರು ಅನಾಥ ಮಕ್ಕಳು ಉಚಿತವಾಗಿ ಉನ್ನತ ಶಿಕ್ಷಣ ಪಡೆಯುವ ಅವಕಾಶವನ್ನು ಪಡೆಯುತ್ತಾರೆ ಎಂದು ವಿಸಿ ತಿಳಿಸಿದ್ದಾರೆ. ಉನ್ನತ ಶಿಕ್ಷಣವನ್ನು ಬಯಸುವ ವಿದ್ಯಾರ್ಥಿಗಳಿಗೆ ಯಾವುದೇ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲದೆ ಶಿಕ್ಷಣವನ್ನು ಒದಗಿಸುವ ಜವಾಬ್ದಾರಿಯನ್ನು ವಿಶ್ವವಿದ್ಯಾಲಯ ಹೊಂದಿದೆ ಎಂದು ಅವರು ಹೇಳಿದರು. 1922 ರಲ್ಲಿ ಸ್ಥಾಪಿತವಾದ ದೆಹಲಿ ವಿಶ್ವವಿದ್ಯಾನಿಲಯವು 16 ವಿಭಾಗಗಳು, 86 ಶೈಕ್ಷಣಿಕ ವಿಭಾಗಗಳು ಮತ್ತು ನಗರದಾದ್ಯಂತ ಹರಡಿರುವ 91 ಕಾಲೇಜುಗಳಲ್ಲಿ 132500 ಕ್ಕೂ ಹೆಚ್ಚು ಸಾಮಾನ್ಯ ವಿದ್ಯಾರ್ಥಿಗಳೊಂದಿಗೆ ಭಾರತದ ಅತಿದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ.

Latest Videos
Follow Us:
Download App:
  • android
  • ios