Asianet Suvarna News Asianet Suvarna News

ದೆಹಲಿಗರಿಗೆ ಉಚಿತ ಕೊರೋನಾ ಲಸಿಕೆ: ಬಜೆಟ್‌ನಲ್ಲಾದ ಪ್ರಮುಖ ಘೋಷಣೆಗಳು!

ಕೊರೋನಾ ಸಂಕಷ್ಟದ ನಡುವೆ ದೆಹಲಿ ಬಜೆಟ್‌ನಲ್ಲಿ ಪಗ್ರಮುಖ ಘೋಷಣೆ| ಸರ್ಕಾರಿ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆ ಉಚಿತ| ಮಕ್ಕಳಿಗೆ ದೇಶಪ್ರೇಮದ ಪಾಠ

Delhi to make vaccination free of cost in govt hospitals pod
Author
Bangalore, First Published Mar 9, 2021, 1:21 PM IST

ನವದೆಹಲಿ(ಮಾ.09): ಆಮ್‌ ಆದ್ಮಿ ಪಕ್ಷ ನೇತೃತ್ವದ ಸರ್ಕಾರ ಇಂದು ದೆಹಲಿಯ ಮೊದಲ ಇ-ಬಜೆಟ್ ಮಂಡಿಸಿದೆ. ದೆಹಲಿಯ ಹಣಕಾಸು ಸಚಿವ ಮನೀಶ್ ಸಿಸೋದಿಯಾ ವಿಧಾನಸಭೆ ತಲುಪುವ ಮುನ್ನ ಹನುಮಾನ್ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಾರೆ. 2047ರೊಳಗೆ ದೆಹಲಿಯ ಜನಸಂಖ್ಯೆ ಸುಮಾರು ಮೂರು ಕೋಟಿ 28 ಲಕ್ಷವಾಗುವ ನಿರೀಕ್ಷೆ ಇದೆ. ಹೀಗಿರುವಾಗ 2047 ಇಷ್ಟು ದೊಡ್ಡ ಜನಸಂಖ್ಯೆಗೆ ಬೇಕಾದ ಸೌಲಭ್ಯಗಳಿಗೆ ಇಂದಿನ ಬಜೆಟ್‌ನಲ್ಲಿ ಬುನಾದಿ ಹಾಕಲಿದ್ದೇವೆ ಎಂದು ಸಿಸೋದಿಯಾ ಹೇಳಿದ್ದಾರೆ.

ನಾನು 2021-22 ನೇ ಹಣಕಾಸು ವರ್ಷಕ್ಕೆ 69,000 ಕೋಟಿ ಮೌಲ್ಯದ ಬಜೆಟ್ ಮಂಡಿಸುತ್ತಿದ್ದೇನೆ. ಇದು 2014-15 ನೇ ವರ್ಷದಲ್ಲಿ ಮಂಡಿಸಲಾದ 30,940 ಕೋಟಿ ರೂ. ಮೊತ್ತಕ್ಕಿಂತ ದ್ವಿಗುಣವಾಗಿದೆ. ದೆಹಲಿ ಸರ್ಕಾರದ ಪ್ರತಿ ವ್ಯಯ 2015-16ರ 19,218 ರೂಗಿಂತ ಹೆಚ್ಚಾಗಿ 33,173 ಆಗುವ ನಿರೀಕ್ಷೆ ಇದೆ ಎಂದು ಮನೀಶ್ ಸಿಸೋದಿಯಾ ತಿಳಿಸಿದ್ದಾರೆ.

ಪ್ರತಿ ದಿನ ಒಂದು ತರಗತಿ ದೇಶಭಕ್ತಿ ಕುರಿತಾಗಿ

ಭಾರತದ 75ನೆ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ದೆಹಲಿ ಸರ್ಕಾರ ಶಾಲೆಯಲ್ಲಿ ಓದುತ್ತಿರುವ ಮಕ್ಕಳಲ್ಲಿ ದೇಶಪ್ರೇಮ ತುಂಬುವ ಸಲುವಾಗಿ ದೇಶಭಕ್ತಿ ಎಂಬ ಪಠ್ಯಕ್ರಮ ಆರಂಭಿಸಲಿದೆ. ಈ ನಿಟ್ಟಿನಲ್ಲಿ ಪ್ರತಿ ದಿನ ದೇಶಭಕ್ತಿ ಎಂಬ ತರಗತಿ ನಡೆಯಲಿದೆ ಎಂದಿದ್ದಾರೆ ಸಿಸೋದಿಯಾ

ಉಚಿತ ಕೊರೋನಾ ಲಸಿಕೆ

ನಾನು 2021-22ನೇ ವರ್ಷದಲ್ಲಿ ದೆಹಲಿಯ ಆರೋಗ್ಯ ಕ್ಷೇತ್ರಕ್ಕೆ 9,934 ಕೋಟಿ ರೂ ಬಜೆಟ್ ಮಂಡಿಸುತ್ತೇನೆ. ಇದು ಒಒಟ್ಟು ಬಜೆಟ್‌ನ ಶೇ. 14ರಷ್ಟಾಗುತ್ತದೆ. ದೆಹಲಿ ನಿವಾಸಿಗರಿಗೆ ಸರ್ಕಾರ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಉಚಿತವಾಗಿ ನಿಡಬೇಕೆಂಬ ನಿರ್ಧಾರ ದೆಹಲಿ ಸರ್ಕಾರ ಕೈಗೊಂಡಿದೆ ಎಂದಿದ್ದಾರೆ.

2047ರೊಳಗೆ ದೆಹಲಿ ನಿವಾಸಿಗರ ಆದಾಯ ಸಿಂಗಾಪುರದ ಪ್ರತಿ ವ್ಯಕ್ತಿಯ ಆದಾಯದಷ್ಟು ಆಗಬೇಕೆಂಬ ಗುರಿ ನಮ್ಮದು ಎಂದೂ ಹೇಳಿದ್ದಾರೆ.

Follow Us:
Download App:
  • android
  • ios