ಯಮುನಾ ನದಿ ನೀರಿನಿಂದ ಮುಳುಗಿದ ಡೆಲ್ಲಿಗೆ ಡೆಂಗ್ಯೂ ಸಂಕಷ್ಟ, 27 ಪ್ರಕರಣ ಪತ್ತೆ!
ಕಳೆದ ಕೆಲ ದಿನಗಳಿಂದ ಯಮುನಾ ನದಿ ನೀರು ಉಕ್ಕಿ ಹರಿದ ಪರಿಣಾಮ ದೆಹಲಿಯ ಬಹುತೇಕ ಪ್ರದೇಶಗಳು ಜಲಾವೃತಗೊಂಡಿತ್ತು. ಇದೀಗ ಯಮುನಾ ಅಬ್ಬರ ಇಳಿದರೂ ನೆರೆ ಇಳಿದಿಲ್ಲ. ಹಲೆವಡೆ ನೀರು ನಿಂತುಕೊಂಡಿದೆ. ಇದರ ಪರಿಣಾಮ ದೆಹಲಿಯಲ್ಲಿ ಇದೀಗ ಡೆಂಗ್ಯೂ ಪ್ರಕರಣ ಸಂಖ್ಯೆ ಹೆಚ್ಚಾಗಿದೆ.
ನವದೆಹಲಿ(ಜು.17) ಭಾರಿ ಮಳೆ, ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿದ ಕಾರಣ ದೆಹಲಿಯ ಬಹುತೇಕ ಭಾಗಗಳು ಮುಳುಗಡೆಯಾಗಿತ್ತು. ರಸ್ತೆಗಳು ನದಿಯಂತಾಗಿತ್ತು. ಹಲವು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಇದೀಗ ಯಮುನಾ ನದಿ ಹರಿವು ಕಡಿಮೆಯಾಗಿದೆ. ಆದರೆ ಈಗಾಗಲೇ ಜಲಾವೃತಗೊಂಡಿರುವ ಪ್ರದೇಶಗಳಲ್ಲಿ ನೀರು ನಿಂತಿದೆ. ಇದರ ಪರಿಣಾಮ ದೆಹಲಿಯಲ್ಲಿ ಡೆಂಗ್ಯೂ ಪ್ರಕರಣ ಸಂಖ್ಯೆ ಹೆಚ್ಚಾಗಿದೆ. ಒಂದೇ ದಿನ 27 ಪ್ರಕರಣ ಪತ್ತೆಯಾಗಿದೆ. ಈ ಮೂಲಕ ದೆಹಲಿಯಲ್ಲಿ ಇದೀಗ ಡೆಂಗ್ಯೂ ಪ್ರಕರಣ ಸಂಖ್ಯೆ 163ಕ್ಕೆ ಏರಿಕೆಯಾಗಿದೆ.
ಡೆಂಗ್ಯೂ ಕೇಸ್ ಹೆಚ್ಚಾಗುತ್ತಿದ್ದಂತೆ ದೆಹಲಿ ಮೇಯರ್ ಶೆಲ್ಲಿ ಒಬೆರಾಯ್ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ. ಆಸ್ಪತ್ರೆಯಲ್ಲಿನ ಚಿಕಿತ್ಸೆ, ಶುಚಿತ್ವ, ಔಷಧಿ ಲಭ್ಯತೆ ಕುರಿತು ಮಾಹಿತಿ ಪಡೆದುಕೊಂಡರು. ದೆಹಲಿಯ ಹಲವು ಪ್ರದೇಶದಲ್ಲಿ ಈಗಲು ನೀರು ನಿಂತುಕೊಂಡಿದೆ. ಹೀಗಾಗಿ ಡೆಂಗ್ಯೂ, ಮಲೆರಿಯಾ, ಚಿಕೂನ್‌ಗೂನ್ಯ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಡಲಿದೆ. ಇದಕ್ಕಾಗಿ ಮುಂಜಾಗ್ರತೆ ವಹಿಸಲಾಗುತ್ತಿದೆ ಎಂದು ಶೆಲ್ಲಿ ಒಬೆರಾಯ್ ಹೇಳಿದ್ದಾರೆ.
ದೆಹಲಿಯಲ್ಲಿ ಪ್ರವಾಹ, ಸಿಎಂ ಪ್ರವಾಸ: ಅರವಿಂದ್ ಕೇಜ್ರಿವಾಲ್ ಬೆಂಗಳೂರು ಸಭೆ ಟೀಕಿಸಿದ ಬಿಜೆಪಿ!
ಕಳೆದ 45 ವರ್ಷದಲ್ಲೇ ದಾಖಲೆಯ ಪ್ರಮಾಣದಲ್ಲಿ ಉಕ್ಕೇರಿ ದಿಲ್ಲಿಯಲ್ಲಿ ಪ್ರವಾಹ ಸ್ಥಿತಿ ಸೃಷ್ಟಿಸಿದ್ದ ಯಮುನಾ ನದಿ ಮಟ್ಟಭಾನುವಾರ ಮತ್ತಷ್ಟುಇಳಿಕೆ ಕಂಡಿದ್ದು, ನದಿ ನೀರಿನ ಮಟ್ಟ205.9 ಮೀ.ಗೆ ಕುಸಿದಿದೆ. ಇದರಿಂದಾಗಿ, ಆತಂಕಕ್ಕೀಡಾಗಿದ್ದ ದೆಹಲಿ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ರಾಷ್ಟ್ರರಾಜಧಾನಿಯಲ್ಲಿ ಜನಜೀವನ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ನಿರಾಶ್ರಿತರ ಕೇಂದ್ರಕ್ಕೆ ಆಗಮಿಸಿದ್ದ ಜನರೆಲ್ಲ ತಮ್ಮ ಮನೆಗಳತ್ತ ತೆರಳುತ್ತಿದ್ದು, ಹಲವೆಡೆ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗುತ್ತಿದೆ. ಆದರೆ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುತ್ತಿರುವ ಕಾರಣ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ.
ಈ ನಡುವೆ ಹಲವೆಡೆ ಅದರಲ್ಲೂ ನಗರದ ಯಮುನಾ ಬಜಾರ್‌ನಲ್ಲಿರುವ ಪರಿಹಾರ ಕೇಂದ್ರಗಳೂ ಅಥವಾ ಟೆಂಟ್‌ಗಳು ಜಲಾವೃತವಾಗಿವೆ. ಅಲ್ಲದೇ ಇಲ್ಲಿ ಅವ್ಯವಸ್ಥೆಯೇ ತುಂಬಿ ತುಳುಕುತ್ತಿದೆ ಎಂದು ಜನರು ಆಕ್ರೋಶಿಸಿದ್ದಾರೆ. ಜನರು ಊಟ ಮತ್ತು ನೀರಿಗಾಗಿ ಪರದಾಡಬೇಕಾಗಿದೆ. ಹಾಗೂ ಊಟಕ್ಕಾಗಿ ಜನರು ತಾಸುಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ. ಸರ್ಕಾರ ಒಟ್ಟು 2,700 ಟೆಂಟ್‌ಗಳನ್ನು ನಿರ್ಮಿಸಿದ್ದು 27,000 ಜನರು ಪರಿಹಾರ ಟೆಂಟ್‌ಗಳಲ್ಲಿ ವಾಸಿಸಲು ನೋಂದಣಿ ಮಾಡಿಕೊಂಡಿದ್ದಾರೆ.
ಯಮುನೆ ಅಬ್ಬರ ಇಳಿಕೆ: ದಿಲ್ಲಿ ನಿಟ್ಟುಸಿರು; ಪರಿಹಾರ ಕೆಂದ್ರಗಳಿಂದ ಮನೆಗಳಿಗೆ ಹೊರಟ ಜನ
ಯಮುನಾ ಆರ್ಭಟದಿಂದ ಕೆಂಪುಕೋಟೆ ಜಲಾವೃತಗೊಂಡಿತ್ತು. ಇನ್ನು ಸುಪ್ರೀಂಕೋರ್ಚ್ ಪ್ರವೇಶದ್ವಾರ ಮತ್ತು ರಾಜ್‌ಘಾಟ್‌ಗೂ ನೆರೆ ನೀರು ನುಗ್ಗಿತ್ತು. ನಗರದಲ್ಲಿ ಅಳವಡಿಸಲಾಗಿದ್ದ ಪ್ರವಾಹ ನಿಯಂತ್ರಕ ಸಾಧನವು ಮುರಿದಿದ್ದು ಪರಿಣಾಮ ಸುತ್ತಮುತ್ತಲ ಪ್ರದೇಶಗಳು ಜಲಾವೃತವಾಗಿವೆ. ಪ್ರವಾಹ ನಿಯಂತ್ರಣ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಸೇನೆ ಮತ್ತು ಎನ್‌ಡಿಆರ್‌ಎಫ್ ಯೋಧರ ಸಹಾಯ ಪಡೆಯುವಂತೆ ಗಿ ಹಾಗೂ ತುರ್ತಾಗಿ ಸರಿಪಡಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದರು.