Asianet Suvarna News Asianet Suvarna News

ಅಡ್ರೆಸ್ ತಪ್ಪಾಗಿ ದಂಪತಿ ಬೆಡ್ ರೂಂಗೆ ನುಗ್ಗಿದ ಡೆಲ್ಲಿ ಪೊಲೀಸ್, ಕೊನೆಗೆ ಬಿಹಾರ ಪೊಲೀಸ್ ಬರಬೇಕಾಯ್ತು!

ಆರೋಪಿ ಹುಡುಕಾಟದಲ್ಲಿದ್ದ ಡೆಲ್ಲಿ ಪೊಲೀಸರು ನೇರವಾಗಿ ದಂಪತಿ ಬೆಡ್ ರೂಂಗೆ ನುಗ್ಗಿದ್ದಾರೆ. ದಂಪತಿಯನ್ನು ಹಿಡಿದೆಳದು ಹೊರತಂದಿದ್ದಾರೆ. ಆದರೆ ಅಡ್ರೆಸ್ ತಪ್ಪಾಗಿ ನುಗ್ಗಿದ್ದೇವೆ ಅನ್ನೋದು ಪೊಲೀಸರಿಗೆ ಅರಿವಾಗುತ್ತಿದ್ದಂತೆ ಕಾಲ ಮಿಂಚಿತ್ತು. ದಮ್ಮಯ್ಯ ಅಂದರು ನಿವಾಸಿಗಳು ಬಿಡಲಿಲ್ಲ. ಕ್ಷಮಾಪಣೆ ಪತ್ರಕ್ಕೂ ಜಗ್ಗಲಿಲ್ಲ. ಕೊನೆಗೆ ಬಿಹಾರ ಪೊಲೀಸರು ಸ್ಥಳಕ್ಕೆ ಆಗಮಿಸಿದ ಘಟನೆ ನಡೆದಿದೆ.
 

Delhi police taken hostage by locals after wrong raid address bihar cops came for rescue ckm
Author
First Published Sep 4, 2024, 3:57 PM IST | Last Updated Sep 4, 2024, 3:57 PM IST

ಪಾಟ್ನ(ಸೆ.04) ಅತ್ಯಾಚಾರ ಪ್ರರಕರಣ ಸಂಬಂಧ ದೆಹಲಿ ಪೊಲೀಸರು ಆರೋಪಿ ಜಾಡು ಹಿಡಿದು ಬಿಹಾರಕ್ಕೆ ತೆರಳಿದ್ದಾರೆ. ತೀವ್ರ ಹುಡುಕಾಟ ನಡೆಸಿದ ಡೆಲ್ಲಿ ಪೊಲೀಸರು, ಏಕಾಏಕಿ ಮನೆಯೊಂದಕ್ಕೆ ನುಗ್ಗಿದ್ದಾರೆ. ಬಾಗಿಲುಗಳನ್ನು ದಡಾರ್ ಎಂದು ತೆರೆದು, ನೇರವಾಗಿ ಮನೆಗೆ ಪ್ರವೇಶಿಸಿದ್ದಾರೆ. ದಂಪತಿ ಇದ್ದ ಬೆಡ್ ರೂಂಗೆ ನುಗ್ಗಿದ ಪೊಲೀಸರು ಪತಿ ಹಾಗೂ ಪತ್ನಿ ಇಬ್ಬರನ್ನು ಹಿಡಿದೆಳೆದು ಹೊರತಂದಿದ್ದಾರೆ. ದಾಳಿ ನಡೆಸಿ ಮನೆಯಿಂದ ಹೊರಬಂದಾಗ ಡೆಲ್ಲಿ ಪೊಲೀಸರಿಗೆ ತಾವು ತಪ್ಪಾದ ಅಡ್ರೆಸ್ ಮೇಲೆ ದಾಳಿ ಮಾಡಿದ್ದೇವೆ ಎಂದು ಗೊತ್ತಾಗಿದೆ. ಆದರೆ ಅಷ್ಟೊತ್ತಿಗೆ ನಿವಾಸಿಗಳು ಆಗಮಿಸಿ ದೆಹಲಿ ಪೊಲೀಸರನ್ನೇ ಒತ್ತೆಯಾಳಾಗಿಟ್ಟುಕೊಂಡಿದ್ದಾರೆ. ದಮಯ್ಯ ಅಂದರೂ ಕೇಳಲಿಲ್ಲ. ಮಾಹಿತಿ ತಿಳಿದು ಸ್ಥಳಕ್ಕೆ ಬಿಹಾರ ಪೊಲೀಸರು ಆಗಮಿಸಿದ ಘಟನೆ ಬಿಹಾರದ ಪುರ್ನಿಯಾದಲ್ಲಿ ನಡೆದಿದೆ ಎಂದು ಟಾಪ್ ಇಂಡಿಯನ್ ನ್ಯೂಸ್ ವರದಿ ಮಾಡಿದೆ.

ತನಿಖೆಯ ಭಾಗವಾಗಿ ದೆಹಲಿ ಪೊಲೀಸರು ಅತ್ಯಾಚಾರ ಆರೋಪಿ ಹುಡುಕಾಟ ಆರಂಭಿಸಿದ್ದಾರೆ. ದೆಹಲಿಯಲ್ಲಿ ನಡೆದ ಪ್ರಕರಣದ ಆರೋಪಿ ಬಿಹಾರದ ಪುರ್ನಿಯಾದ ನಿವಾಸಿ ಅನ್ನೋ ಮಾಹಿತಿ ಪಡೆದ ಡೆಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ನೇರವಾಗಿ ಪುರ್ನಿಯಾಗೆ ಆಗಮಿಸಿದ ದೆಹಲಿ ಪೊಲೀಸರ ತಂಡ, ಆರೋಪಿಯ ವಿಳಾಸಕ್ಕೆ ತೆರಳಿದ್ದಾರೆ.

 ಇಲ್ಲಿ 2 ರಿಂದ 3 ಲಕ್ಷ ರೂಪಾಯಿಗೆ ಸಿಗುತ್ತೆ ಬಳಸಿದ ಬೆಂಜ್, ಆಡಿ, BMW ಕಾರು!

ಬಳಿಕ ಹಿಂದೂ ಮುಂದೂ ನೋಡದೆ ಡೆಲ್ಲಿ ಪೊಲೀಸರು ಒಂದೇ ಎಟಿಗೆ ಬಾಗಿಲು ಮುರಿದು ಒಳಗೆ ನುಗ್ಗಿದ್ದಾರೆ. ಇಡೀ ಮನೆಯನ್ನು ತಡಕಾಡಿದ್ದಾರೆ. ಇದೇ ವೇಳೆ ಪೊಲೀಸರ ಗುಂಪು ಕೃಷ್ಣ ಚೌಧರಿ ದಂಪತಿ ಮಲಗಿದ್ದ ಬೆಡ್ ರೂಂಗೆ ನುಗ್ಗಿದ್ದಾರೆ. ಕೃಷ್ಣ ಚೌಧರಿ ಹಾಗೂ ಅವರ ಪತ್ನಿ ಗಾಬರಿಯಾಗಿದ್ದಾರೆ. ಮಾತನಾಡಲು ಪೊಲೀಸರು ಅವಕಾಶ ನೀಡಿಲ್ಲ. ಮಹಿಳಾ ಪೊಲೀಸರಿಲ್ಲದ ಈ ತಂಡ ಕೃಷ್ಣ ಚೌಧರಿ ಪತ್ನಿಯನ್ನು ಹಿಡಿದೆಳೆದಿದ್ದಾರೆ. ಇತ್ತ ಕೃಷ್ಣ ಚೌಧರಿ ಕಾಲರ ಪಟ್ಟಿ ಹಿಡಿದು ಇಬ್ಬರನ್ನನ ಹೊರಗೆಳೆದು ತಂದಿದ್ದಾರೆ. 

ಕೃಷ್ಣ ಚೌಧರಿ ಹಾಗೂ ಪತ್ನಿಗೆ ಮಾತನಾಡಲು ಅವಕಾಶ ನೀಡಿಲ್ಲ. ಕಿರುಚಾಡಿದರೂ ಡೆಲ್ಲಿ ಪೊಲೀಸರು ಮಾತ್ರ ಕಿಮ್ಮತ್ತು ನೀಡಲಿಲ್ಲ. ಮನೆಯ ಹೊರಗೆಳೆದು ಬರುತ್ತಿದ್ದಂತ ಸ್ಥಳೀಯ ನಿವಾಸಿಗಳು ಆಗಮಿಸಿದ್ದಾರೆ. ಎಲ್ಲರಿಗೂ ಅಚ್ಚರಿ ಅತ್ಯಂತ ಸಜ್ಜನ ಕೃಷ್ಣ ಚೌಧರಿ ಸೈಲೆಂಟ್ ಆಗಿ ಮಾಡಿದ ತಪ್ಪೇನು ಎಂದು ಗೊಂದಲಕ್ಕೀಡಾಗಿದ್ದಾರೆ ಪೊಲೀಸರು ಬೇರೆ ಹೆಸರಿನಿಂದ ಕೃಷ್ಣ ಚೌಧರಿಯನ್ನು ಕರೆದಿದ್ದಾರೆ. ಈ ವೇಳೆ ಕೃಷ್ಣ ಚೌಧರಿಗೆ ಪರಿಸ್ಥಿತಿ ಅರ್ಥವಾಗಿದೆ. ತಕ್ಷಣವೇ ನಾನು ಕೃಷ್ಣ ಚೌಧರಿ ಎಂದು ಆಧಾರ್ ಕಾರ್ಡ್ ತಂದು ತೋರಿಸಿದ್ದಾರೆ.

ಅಷ್ಟೊತ್ತಿಗೆ ಪೊಲೀಸರಿಗೆ ತಮ್ಮ ಎಡವಟ್ಟು ಗೊತ್ತಾಗಿದೆ. ಆರೋಪಿಯ ನಕಲಿ ಅಡ್ರೆಸ್ ಜಾಡು ಹಿಡಿದು ಇನ್ಯಾರದ್ದೊ ಮನೆಗೆ ನುಗ್ಗಿ ದಂಪತಿಯನ್ನು ವಶಕ್ಕೆ ಪಡೆದಿದ್ದರು. ಮನೆಯಲ್ಲಿ ಪೊಲೀಸರು ಇಡೀ ವಸ್ತುಗಳನ್ನು ಎಳೆದು ಹಾಕಿದ್ದರು. ಪೊಲೀಸರ ಎಡವಟ್ಟು ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತಿದ್ದಂತೆ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ತಕ್ಷಣವೇ ತಪ್ಪಾಯ್ತು, ಕ್ಷಮಿಸಿ ಎಂದು ಪೊಲೀಸರು ಕ್ಷಮೆ ಕೇಳಿದ್ದಾರೆ. ಆದರೆ ಮಾಡಿದ ಅವಾಂತರಕ್ಕೆ ಕೃಷ್ಣ ಚೌದರಿಯಾಗಲಿ, ಸ್ಥಳೀಯರಾಗಲಿ ಕ್ಷಮಿಸುವ ಪ್ರಶ್ನೆಯೇ ಇರಲಿಲ್ಲ. ಅಷ್ಟರಲ್ಲೇ ಭಾರಿ ಸಂಖ್ಯೆಯಲ್ಲಿ ಸ್ಥಳೀಯರು ಸೇರಿದ್ದಾರೆ. ಪೊಲೀಸರನ್ನೇ ಹಿಡಿದು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ.

ನಾನಿನ್ನು ಸಿಂಗಲ್, ಗರ್ಲ್‌ಫ್ರೆಂಡ್ ಆಯ್ಕೆ ಮಾಡಿಕೊಡಿ; ಯುವಕನ ಮನವಿಗೆ ಸ್ಪಂದಿಸಿದ ಪೊಲೀಸ್!

ಚೆಲ್ಲಾಪಿಲ್ಲಿ ಮಾಡಿದ ಮನೆಯ ವಸ್ತುಗಳನ್ನು ಮರು ಜೋಡಿಸುವಂತೆ ಮಾಡಿದ್ದಾರೆ. ಬಳಿಕ ಕೋಣೆಯೊಳಗೆ ಕೂಡಿ ಹಾಕಿದ್ದಾರೆ.  ಪೊಲೀಸರು ಏನೇ ಮಾಡಿದರೂ ಸ್ಥಳೀಯರು ಮಾತ್ರ ಡೆಲ್ಲಿ ಪೊಲೀಸರನ್ನು ಬಿಡಲೇ ಇಲ್ಲ. ಮಾಹಿತಿ ತಿಳಿದ ಬಿಹಾರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಸ್ಥಳೀಯರ ಜೊತೆ ಸಂಧಾನ ಮಾತುಕತೆ ನಡೆಸಿದ್ದಾರೆ. ಬಳಿಕ ಡೆಲ್ಲಿ ಪೊಲೀಸರು ಲಿಖಿತವಾಗಿ  ಕ್ಷಮಾಪಣೆ ಪತ್ರ ಬರೆದು ಕೊಟ್ಟಿದ್ದಾರೆ. ಬಿಹಾರ ಪೊಲೀಸರ ಮನವಿ ಬಳಿಕ ಡೆಲ್ಲಿ ಪೊಲೀಸರನ್ನು ಬಿಟ್ಟುಕಳುಹಿಸಿದ ಘಟನೆ ಇದೀಗ ಭಾರಿ ಚರ್ಚೆಗೆ ಕಾರಣಾಗಿದೆ.
 

Latest Videos
Follow Us:
Download App:
  • android
  • ios