ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಟಿಕೆಟ್‌ಗಳನ್ನು ಆಮ್‌ಆದ್ಮಿ ಪಕ್ಷ ತಲಾ 80 ಲಕ್ಷ ರು.ಗಳಿಗೆ ಮಾರಾಟ ಮಾಡುತ್ತಿದೆ ಎಂದು ಹೇಳಲಾದ ರಹಸ್ಯ ಕಾರ್ಯಾಚರಣೆಯ ವಿಡಿಯೋವೊಂದನ್ನು ಬಿಜೆಪಿ ಸೋಮವಾರ ಬಿಡುಗಡೆ ಮಾಡಿದೆ.

ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಟಿಕೆಟ್‌ಗಳನ್ನು ಆಮ್‌ಆದ್ಮಿ ಪಕ್ಷ ತಲಾ 80 ಲಕ್ಷ ರು.ಗಳಿಗೆ ಮಾರಾಟ ಮಾಡುತ್ತಿದೆ ಎಂದು ಹೇಳಲಾದ ರಹಸ್ಯ ಕಾರ್ಯಾಚರಣೆಯ ವಿಡಿಯೋವೊಂದನ್ನು ಬಿಜೆಪಿ ಸೋಮವಾರ ಬಿಡುಗಡೆ ಮಾಡಿದೆ. ಸ್ವತಃ ಆಮ್‌ಆದ್ಮಿ ಪಕ್ಷದ ಕಾರ್ಯಕರ್ತೆ ಬಿಂದು ಎನ್ನುವವರು, ಟಿಕೆಟ್‌ ಸಂಬಂಧ ಪಕ್ಷದ ನಾಯಕರ ಜೊತೆ ಹಣಕಾಸಿನ ಮಾತುಕತೆ ನಡೆಸಿದ ಬಗ್ಗೆ ರಹಸ್ಯ ಕ್ಯಾಮೆರಾ ಬಳಸಿ ಸೆರೆಹಿಡಿದಿದ್ದು, ಅದನ್ನು ಬಿಜೆಪಿ ಬಿಡುಗಡೆ ಮಾಡಿದೆ.

‘ವಿಡಿಯೋದಲ್ಲಿ ರೋಹಿಣಿ-ಡಿ’ (Rohini-D constituency) ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬಿಂದು (Bindu) ಅವರು, ಆಪ್‌ ನಾಯಕರಾದ ಆರ್‌.ಆರ್‌.ಪಠಾನಿಯಾ(RR Pathania), ಪುನೀತ್‌ ಗೋಯಲ್‌ (Puneet Goyal) ಜೊತೆ ಟಿಕೆಟ್‌ ಪಡೆಯಲು ನೀಡಬೇಕಾದ ಮೊತ್ತದ ಬಗ್ಗೆ ಮಾತನಾಡುತ್ತಿರುವ ದೃಶ್ಯಗಳಿವೆ. ಪಠಾನಿಯಾ ಮತ್ತು ಗೋಯಲ್‌, ಇಬ್ಬರೂ ಆಪ್‌ನ ಟಿಕೆಟ್‌ ಹಂಚಿಕೆಗೆ ನೇಮಕವಾಗಿರುವ ಆಪ್‌ ಸಚಿವರಾದ ಗೋಪಾಲ್‌ ರಾಯ್‌(Gopal Roy) ಶಾಸಕರಾದ ದುರ್ಗೇಶ್‌ ಪಾಠಕ್‌(Durgesh Pathak), ಸೌರಭ್‌ ಭಾರದ್ವಾಜ್‌, ಆದಿಲ್‌ ಖಾನ್‌ ಮತ್ತು ಅತಿಶಿ ಜೊತೆ ನಂಟು ಹೊಂದಿದ್ದಾರೆ. ಇದು, ಪಾಲಿಕೆ ಟಿಕೆಟ್‌ ಅನ್ನು ಆಪ್‌ ಮತ್ತು ಅದರ ನಾಯಕರಾದ ಅರವಿಂದ್‌ ಕೇಜ್ರಿವಾಲ್‌ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ. ಆಪ್‌ ಒಟ್ಟು 110 ಟಿಕೆಟ್‌ಗಳನ್ನು ಈ ರೀತಿ ಹಣಕ್ಕಾಗಿ ಮಾರಾಟ ಮಾಡಲು ನಿಗದಿಪಡಿಸಿದೆ’ ಎಂದು ವಿಡಿಯೋ ಬಿಡುಗಡೆ ಮಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರ ಆರೋಪಿಸಿದ್ದಾರೆ.

ಆಪ್‌ ನಕಾರ:

ಬಿಜೆಪಿ ಆರೋಪದ ಬಗ್ಗೆ ತಿರುಗೇಟು ನೀಡಿರುವ ಆಪ್‌ ನಾಯಕ ದಿಲೀಪ್‌ ಪಾಂಡೆ, ‘ಪಾಲಿಕೆ ಚುನಾವಣೆಯಲ್ಲಿ ಆಪ್‌ ಟಿಕೆಟ್‌ಗೆ ಭಾರೀ ಬೇಡಿಕೆ ಇದೆ. ಇಂಥ ಸಂದರ್ಭದಲ್ಲಿ ಮಧ್ಯವರ್ತಿಗಳು ಸಕ್ರಿಯರಾಗುವುದು ಸಾಮಾನ್ಯ. ಆದರೆ ಪಕ್ಷದಲ್ಲಿ ಯಾರಿಗೂ ಟಿಕೆಟ್‌ ಅನ್ನು ಮಾರಿಲ್ಲ. ಮಾರಿಕೊಳ್ಳಲು ನಾವು ಬಿಜೆಪಿ ಅಥವಾ ಕಾಂಗ್ರೆಸ್‌ ಅಲ್ಲ. ಚುನಾವಣೆಯನ್ನು ಹೀನಾಯವಾಗಿ ಸೋಲುವ ಭಯ ಹೊಂದಿರುವ ಬಿಜೆಪಿ, ಈ ನಕಲಿ ಸ್ಟಿಂಗ್‌ ಆಪರೇಷನ್‌ ಮಾಡಿಸಿದೆ’ ಎಂದು ಟೀಕಿಸಿದ್ದಾರೆ.

ಕೇಜ್ರಿವಾಲ್‌ ಎದುರು ‘ಮೋದಿ ಮೋದಿ’ ಜಪ ಮಾಡಿದ ಗುಜರಾತ್‌ ಜನತೆ: ನಿಮ್ಮ ಹೃದಯ ಗೆಲ್ಲುತ್ತೇವೆ ಎಂದ ದೆಹಲಿ ಸಿಎಂ

ಮತ್ತೊಂದೆಡೆ ಸ್ಟಿಂಗ್‌ ಮಾಡಿದ್ದ ಬಿಂದು ಮಾತನಾಡಿ, ‘ಆಪ್‌ನ ಟಿಕೆಟ್‌ಗಳನ್ನು ಶ್ರೀಮಂತರಿಗೆ ಮಾರಿಕೊಳ್ಳಲಾಗುತ್ತಿದೆ. ಪಕ್ಷದ ತಳಮಟ್ಟದ ಕಾರ್ಯಕರ್ತರಿಗೆ ಯಾವುದೇ ಮಹತ್ವ ನೀಡಲಾಗುತ್ತಿಲ್ಲ. ಈ ಬಗ್ಗೆ ದುರ್ಗೇಶ್‌ ಪಾಠಕ್‌ಗೆ ದೂರು ನೀಡಿದರೂ ಪ್ರಯೋಜವಾಗಿಲ್ಲ. ಇಲ್ಲಿ ಒಬ್ಬರು ಇಬ್ಬರಲ್ಲ, ಕೆಳಗಿನಿಂದ ಮೇಲಿನವರೆಗೆ ಎಲ್ಲರೂ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.


ಕಾರ‍್ಯಕರ್ತರಿಂದ ಆಪ್‌ ಶಾಸಕಗೆ ಥಳಿತ

ನವದೆಹಲಿ: ದಿಲ್ಲಿ ಪಾಲಿಕೆ ಚುನಾವಣೆ ನಿಮಿತ್ತ ಸಭೆಯಲ್ಲಿ ನಿರತರಾಗಿದ್ದ ಆಪ್‌ ಶಾಸಕ (AAP MLA) ಗುಲಾಬ್‌ ಸಿಂಗ್‌ ಯಾದವ್‌ರನ್ನು (Gulab Singh Yadav) ಆಪ್‌ ಕಾರ‍್ಯಕರ್ತರೇ ಥಳಿಸಿದ ಘಟನೆ ನಡೆದಿದೆ. ‘ಹಣ ಪಡೆದು ಟಿಕೆಟ್‌ ನೀಡಿದ್ದಕ್ಕಾಗಿ ಅವರನ್ನು ಹೊಡೆದಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.

ದೆಹಲಿಯ ತಿಹಾರ್ ಜೈಲಿನಲ್ಲಿ ಆಪ್‌ ಸಚಿವ ಸತ್ಯೇಂದ್ರ ಜೈನ್‌ಗೆ ಮಸಾಜ್: ವಿಡಿಯೋ ವೈರಲ್..!