ದೆಹಲಿ ಗೆದ್ದಿರುವ ಬಿಜೆಪಿ ಇದೀಗ ಮುಖ್ಯಮಂತ್ರಿ ಆಯ್ಕೆ ಕಸರತ್ತು ನಡೆಸುತ್ತಿದೆ. ದೆಹಲಿಗೆ ಮಹಿಳಾ ಮುಖ್ಯಮಂತ್ರಿ ಅನ್ನೋ ಮಾತುಗಳು ಕೇಳಿಬರುತ್ತಿದೆ.ಹಾಗಾದರೆ ಮುಂದಿನ ಸಿಎಂ ಯಾರು? ಬಿಜೆಪಿ ಒಳ ಉತ್ತರವೇನು
ದೆಹಲಿ(ಫೆ.10) ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಬಿಜೆಪಿ ಇದೀಗ ಮುಖ್ಯಮಂತ್ರಿ ಆಯ್ಕೆ ಕಸರತ್ತು ನಡೆಸುತ್ತಿದೆ. ಹಲವು ಹೆಸರುಗಳು ಕೇಳಿಬರುತ್ತಿದೆ. ಪರ್ವೇಶ್ ವರ್ಮಾ ಸೇರಿದಂತೆ ಕೆಲ ದೆಹಲಿ ಬಿಜೆಪಿ ನಾಯಕರು ಹೆಸರು ಮುಂಚೂಣಿಯಲ್ಲಿದೆ. ಆದರೆ ಬಿಜೆಪಿ ಪ್ರಕಾರ ದೆಹಲಿ ಮುಂದಿನ ಮುಖ್ಯಮಂತ್ರಿ ಮಹಿಳೆ ಆಗಿರಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಪೈಕಿ ನಾಲ್ವರು ಮಹಿಳಾ ನಾಯಕಿಯರು ಹೆಸರು ಮುಂಚೂಣಿಯಲ್ಲಿದೆ.
ರೇಖಾ ಗುಪ್ತ
ಶಿಖಾ ರಾಯ್
ಪೂನಂ ಶರ್ಮಾ
ನೀಲಮ್ ಪೆಹಲ್ವಾನ್
ದೇಶದ ಜನ ಬಿಜೆಪಿ ವಿರುದ್ಧ ಒಂದಲ್ಲ ಒಂದು ದಿನ ರೊಚ್ಚಿಗೇಳ್ತಾರೆ: ಸಚಿವ ಶಿವರಾಜ ತಂಗಡಗಿ ವಾಗ್ದಾಳಿ!
ನಾಲ್ವರು ಮಹಿಳಾ ನಾಯಕಿಯರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಆದರೆ ಸದ್ಯ ಬಿಜೆಪಿ ಹೈಕಮಾಂಡ್ ಮೂಲಗಳ ಪ್ರಕಾರ ದೆಹಲಿಯಲ್ಲಿ ಈ ನಾಲ್ವರು ಮಹಿಳಾ ನಾಯಕಿರಲ್ಲಿ ಒಬ್ಬರನ್ನು ಉಪ ಮುಖ್ಯಮಂತ್ರಿ ಮಾಡಲು ಚರ್ಚೆ ನಡೆಯುತ್ತಿದೆ. ಹಾಗಾಗರೆ ಮುಖ್ಯಮಂತ್ರಿ ಯಾರು?
ಸಿಎಂ ಯಾರು ಅಂತ ರವಿ ಕಿಶನ್ ಹೇಳಿದ್ದೇನು?
ಮಾಧ್ಯಮಗಳ ಜೊತೆ ಮಾತನಾಡಿದ ರವಿ ಕಿಶನ್, 'ದಿಲ್ಲಿಯ ಮುಂದಿನ ಸಿಎಂ ಅದ್ಭುತ ವ್ಯಕ್ತಿ. ಇದು ಬಿಜೆಪಿ. ಸಿಎಂ ಯಾರು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ' ಅಂತ ಹೇಳಿದ್ದಾರೆ. ಬಿಜೆಪಿಯ ಸಂಘಟನಾ ಶಕ್ತಿಯ ಬಗ್ಗೆ ಮಾತನಾಡಿದ ಅವರು, ಪಕ್ಷದ ಯಾವುದೇ ಕಾರ್ಯಕರ್ತ ಅಥವಾ ಪಾಲಿಕೆ ಸದಸ್ಯ ಸಿಎಂ ಆಗಬಹುದು ಅಂತ ಹೇಳಿದ್ದಾರೆ. ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದ ಮುಖ್ಯಮಂತ್ರಿಗಳ ಉದಾಹರಣೆ ನೀಡಿದ ಅವರು, ಬಿಜೆಪಿಯಲ್ಲಿ ಯಾರೇ ಆದ್ರೂ ರಾತ್ರೋರಾತ್ರಿ ಸ್ಟಾರ್ ಆಗಬಹುದು ಅಂತ ಹೇಳಿದ್ದಾರೆ.
ದಿಲ್ಲಿಯ ಮುಂದಿನ ಸಿಎಂ ಯಾರು?
ರವಿ ಕಿಶನ್ ಹೇಳಿಕೆ ನಂತರ ದಿಲ್ಲಿಗೆ ಊಹಿಸದ ವ್ಯಕ್ತಿ ಸಿಎಂ ಆಗ್ತಾರಾ ಅನ್ನೋ ಪ್ರಶ್ನೆ ಮೂಡಿದೆ. ಪಕ್ಷ ಶೀಘ್ರದಲ್ಲೇ ದಿಲ್ಲಿಯ ಹೊಸ ಸಿಎಂ ಹೆಸರು ಘೋಷಿಸಲಿದೆ. ಈಗ ಎಲ್ಲರ ಚಿತ್ತ ಬಿಜೆಪಿ ನಿರ್ಧಾರದ ಮೇಲಿದೆ.
ಹೊಸದಿಲ್ಲಿ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಪ್ರವೇಶ್ ವರ್ಮಾ ಸೋಲಿಸಿದ್ದಾರೆ. ಜಾಟ್ ಸಮುದಾಯದ ಪ್ರವೇಶ್ ವರ್ಮಾ ಅವರನ್ನು ಮುಖ್ಯಮಂತ್ರಿ ಮಾಡಿದರೆ ಹರಿಯಾಣದಲ್ಲಿ ಒಬಿಸಿ ಸಮುದಾಯದಲ್ಲಿ ಅಸಮಾಧಾನ ಉಂಟಾಗುತ್ತದೆ ಎಂದು ಬಿಜೆಪಿ ಭಾವಿಸಿದೆ. ಇದರಿಂದ ಪಶ್ಚಿಮ ಉತ್ತರ ಪ್ರದೇಶದಲ್ಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಪ್ರವೇಶ್ ವರ್ಮಾ ಭಾನುವಾರ ರಾಜನಿವಾಸಕ್ಕೆ ತೆರಳಿ ಲೆಫ್ಟಿನೆಂಟ್ ಗವರ್ನರ್ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ ಅವರು ಅಮಿತ್ ಶಾ ಅವರನ್ನೂ ಭೇಟಿಯಾಗಿದ್ದರು. ವಿಜೇಂದರ್ ಗುಪ್ತಾ ಮತ್ತು ಸತೀಶ್ ಉಪಾಧ್ಯಾಯ ಅವರ ಹೆಸರುಗಳನ್ನೂ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಲಾಗುತ್ತಿದೆ.
ಆರ್‌ಎಸ್‌ಎಸ್ ನಾಯಕ ಅಭಯ್ ಮಹಾವರ್ ಹೆಸರೂ ಚರ್ಚೆಯಲ್ಲಿದೆ. ಮಹಿಳಾ ಮುಖ್ಯಮಂತ್ರಿ ಮಾಡುವ ನಿರ್ಧಾರ ತೆಗೆದುಕೊಂಡರೆ ರೇಖಾ ಗುಪ್ತಾ ಮತ್ತು ಶಿಖಾ ರಾಯ್ ಹೆಸರುಗಳನ್ನು ಪರಿಗಣಿಸಬಹುದು. ಪ್ರಸ್ತುತ ಶಾಸಕರಲ್ಲಿ ಒಬ್ಬರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ತಿಳಿದುಬಂದಿದೆ. ಬೇರೆಯವರನ್ನು ಮುಖ್ಯಮಂತ್ರಿ ಮಾಡುವ ನಿರ್ಧಾರ ತೆಗೆದುಕೊಂಡರೆ ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಮತ್ತು ಬಾಂಸುರಿ ಸ್ವರಾಜ್ ಹೆಸರುಗಳನ್ನೂ ಪರಿಗಣಿಸಬಹುದು.
ಸೋಲಿನ ಬಳಿಕವೂ ಸಿಎಂ ಆಗ್ತಾರೆ ಕೇಜ್ರಿವಾಲ್; ಹೇಗೆ ಎಂಬುದನ್ನ ವಿವರಿಸಿದ ಕಾಂಗ್ರೆಸ್
