ಭ್ರಷ್ಟಾಚಾರಾ ಆರೋಪ, ಕ್ರಮ ಕೈಗೊಂಡ ಲೆ.ಗರ್ವನರ್ ಕೇಜ್ರಿವಾಲ್ ಕಚೇರಿಯ ಉಪ ಕಾರ್ಯದರ್ಶಿ ಅಮಾನತು ಇಬ್ಬರು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅಮಾನತು

ನವದೆಹಲಿ(ಜೂ.22): ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಆಪ್ ಸರ್ಕಾರಕ್ಕೆ ಒಂದರ ಮೇಲೊಂದರಂತೆ ಹೊಡೆತ ಬೀಳುತ್ತಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಸಚಿವ ಸತ್ಯೇಂದ್ರ ಜೈನ್ ಅರೆಸ್ಟ್ ಆಗಿದ್ದಾರೆ. ಇದರ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್ ಕಚೇರಿಯ ಉಪ ಕಾರ್ಯದರ್ಶಿ ಹಾಗೂ ಇಬ್ಬರು ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ರನ್ನು ಲೆಫ್ಟಿನೆಂಟ್ ಗರ್ವನರ್ ವಿಕೆ ಸಕ್ಸೇನಾ ಅಮಾನತು ಮಾಡಿದ್ದಾರೆ.

ಭ್ರಷ್ಟಾಚಾರ ಆರೋಪದಡಿ ಒಟ್ಟು ಮೂವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಕಚೇರಿಯಲ್ಲಿ ಉಪ ಕಾರ್ಯದರ್ಶಿಯಾಗಿ ನಿಯೋಜನೆಗೊಂಡಿರುವ ಪ್ರಕಾಶ್ ಚಂದ್ರ ಠಾಕೂರ್, ವಸಂತ ವಿಹಾರ್ ಎಸ್‌ಡಿಎಂ ಹರ್ಷಿತ್ ಜೈನ್ ಮತ್ತು ವಿವೇಕ್ ವಿಹಾರ್ ಎಸ್‌ಡಿಎಂ ದೇವೇಂದ್ರ ಶರ್ಮಾ ಅಮಾನತುಗೊಳಿಸಲಾಗಿದೆ. ಇಷ್ಟೇ ಅಲ್ಲ ಇವರ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶಿಸಲಾಗಿದೆ. 

ಇ.ಡಿ. ವಶದಲ್ಲಿರುವ ಸಚಿವ ಜೈನ್‌ ಮುಖಕ್ಕೆ ಗಾಯ, ಚಿಕಿತ್ಸೆ

ಭ್ರಷ್ಟಾಚಾರವನ್ನು ಎಳ್ಳಷ್ಟು ಸಹಿಸಲ್ಲ ಅನ್ನೋ ಮಾತನ್ನು ಗವರ್ನರ್ ವಿಕೆ ಸಕ್ಸೇನ್ ಮತ್ತೆ ಮತ್ತೆ ಸಾಬೀತು ಮಾಡಿದ್ದಾರೆ. ಸೋಮವಾರ ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಇಬ್ಬರು ಸಹಾಯಕ ಎಂಜಿನಿಯರ್‌ಗಳನ್ನು ಅಮಾನತು ಮಾಡಿದ್ದರು. ದೆಹಲಿ ಅಭಿವೃದ್ಧಿ ಪ್ರಾಧಿಕಾರಿದಲ್ಲಿನ ಭ್ರಷ್ಟಾಚಾರದಲ್ಲಿ ಸಹಾಯಕ ಎಂಜಿನಿಯರ್ ಹೆಸರು ಕೇಳಿಬಂದಿತ್ತು. ಇದೀಗ ವಿಕೆ ಸಕ್ಸೇನಾ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಬಿಜೆಪಿ ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ. ಗರ್ವನರ್ ಆಗಿ ಅಧಿಕಾರ ಚಲಾಯಿಸುತ್ತಿಲ್ಲ. ಬಿಜೆಪಿ ತನ್ನ ಸೇಡಿನ ರಾಜಕಾರಣನ್ನು ದೆಹಲಿಯಲ್ಲಿ ಗವರ್ನರ್ ಮೂಲಕ ಮಾಡುತ್ತಿದೆ ಎಂದು ದಹೆಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.

ದಿಲ್ಲಿ ಆಪ್‌ ಸಚಿವ ಸತ್ಯೇಂದ್ರ ಜೈನ್‌ಗೆ ಜಾಮೀನು ನಕಾರ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ. ಕಸ್ಟಡಿಯಲ್ಲಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್‌ಗೆ ಶನಿವಾರ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ. ಮೇ 30ರಂದು ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣದಲ್ಲಿ ಆಆಪ್‌ ಆರೋಗ್ಯ ಸಚಿವ ಜೈನ್‌ರನ್ನು ಇ.ಡಿ. ಬಂಧಿಸಿತ್ತು. ಬಳಿಕ ಸಚಿವರು ಹಾಗೂ ಸಂಬಂಧಿಕರ ಮನೆಯಲ್ಲಿ ಕಾರ್ಯಾಚರಣೆ ನಡೆಸಿ ನಗದು ಹಣ ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಸಚಿವರ ಹಾಗೂ ಇ.ಡಿ. ಪರ ವಾದ ಆಲಿಸಿದ ನ್ಯಾಯಮೂರ್ತಿ ಗೀತಾಂಜಲಿ ಗೋಯಲ್‌, ಸಚಿವ ಜೈನ್‌ ಜಾಮೀನು ಅರ್ಜಿ ವಜಾಗೊಳಿಸಿದ್ದಾರೆ. ಜೈನ್‌ ಅವರು ಹವಾಲಾ ವ್ಯವಹಾರದ ಮೂಲಕ ಅಕ್ರಮ ವಹಿವಾಟು ನಡೆಸಿದ ಆರೋಪ ಹೊತ್ತಿದ್ದಾರೆ.

Sidhu Moose Wala ಭದ್ರತೆ ವಾಪಸ್ ಪಡೆದು ಆಮ್ ಆದ್ಮಿ ದುಸ್ಸಾಹಸ, ಸಿಧು ಹತ್ಯೆಗೆ ಸಿಎಂ ಹೊಣೆ ಎಂದ ಬಿಜೆಪಿ!

3 ಕೋಟಿ ನಗದು, 1.8 ಕೇಜಿ ಚಿನ್ನ ಜಪ್ತಿ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್‌ ಮತ್ತು ಅವರ ಆಪ್ತರಿಗೆ ಸೇರಿದ ಆಸ್ತಿಗಳ ಮೇಲೆ ಸೋಮವಾರ ನಡೆಸಿದ ದಾಳಿ ವೇಳೆ 2.85 ಕೋಟಿ ರು. ನಗದು ಮತ್ತು 1.8 ಕೇಜಿ ಪತ್ತೆಯಾಗಿದ್ದು, ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಮಂಗಳವಾರ ಮಾಹಿತಿ ನೀಡಿದೆ.

ಸೋಮವಾರ ಸಚಿವರು ಮತ್ತು ಅವರ ಆಪ್ತರಿಗೆ ಸೇರಿದ 7 ಪ್ರದೇಶಗಳ ಮೇಲೆ ಇ.ಡಿ. ದಾಳಿ ನಡೆಸಿತ್ತು. ರಾಮ್‌ ಪ್ರಕಾಶ್‌ ಜ್ಯುವೆಲರಿ ಲಿ.ಗೆ ಸೇರಿದ ಪ್ರದೇಶದಲ್ಲಿ 2.85 ಕೋಟಿ ರು. ನಗದು ಮತ್ತು 133 ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವೆಲ್ಲವೂ ಅಕ್ರಮ ಸಂಪಾದನೆಯಾಗಿದ್ದು, ರಹಸ್ಯ ಸ್ಥಳದಲ್ಲಿ ಇಡಲಾಗಿತ್ತು. ಇದರೊಂದಿಗೆ ಆಪಾದನೆಗೊಳಪಡುವ ದಾಖಲೆಗಳು ಮತ್ತು ಡಿಜಿಟಲ್‌ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ. ತಿಳಿಸಿದೆ.