Asianet Suvarna News Asianet Suvarna News

Delhi Liquor Policy Scam: ಕೆಸಿಆರ್‌ ಪುತ್ರಿ ಕೆ.ಕವಿತಾ ಮಾಜಿ ಸಿಎ ಬಂಧಿಸಿದ ಪೊಲೀಸರು!

ದೆಹಲಿ ಮದ್ಯ ನೀತಿ ಹಗರಣದಲ್ಲಿ ಕೆ.ಚಂದ್ರಶೇಖರ್‌ ರಾವ್‌ ಅವರ ಪುತ್ರಿ ಕೆ.ಕವಿತಾ ಅವರಿಗೆ ಇನ್ನಷ್ಟು ಕಗ್ಗಂಟಾಗಿದೆ. ಅವರ ಮಾಜಿ ಚಾರ್ಟೆಡ್‌ ಅಕೌಂಟೆಂಟ್‌ ಆಗಿದ್ದ ಹೈದರಾಬಾದ್‌ ಮೂಲದ ಬುಚ್ಚಿಬಾಬು ಗೋರಂಟ್ಲಾರನ್ನು ಸಿಬಿಐ ಬಂಧಿಸಿದೆ. ದೆಹಲಿ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಅವರ ಪಾತ್ರವೇ ಪ್ರಮುಖವಾಗಿದೆ ಎಂದು ಆರೋಪಿಸಲಾಗಿದೆ.
 

Delhi liquor policy scam KCR daughter K Kavitha EX CA arrested by CBI san
Author
First Published Feb 8, 2023, 11:03 AM IST

ನವದೆಹಲಿ (ಫೆ.8): ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂಎಲ್‌ಸಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅಥವಾ ಕೆಸಿಆರ್ ಅವರ ಪುತ್ರಿಯಾದ ಕೆ.ಕವಿತಾ ಅವರ ಮಾಜಿ ಚಾರ್ಟೆಡ್‌ ಅಕೌಂಟೆಟ್‌ಅನ್ನು ಬಂಧನ ಮಾಡಿದೆ. ತನಿಖಾ ದಳ ಹೈದರಾಬಾದ್‌ ಮೂದ ಲೆಕ್ಕ ಪರಿಶೋಧಕರಾದ ಬುಚ್ಚಿಬಾಬು ಗೋರಂಟ್ಲಾರನ್ನು ಬಂಧಿಸುವ ಮೂಲಕ ಪ್ರಕರಣದಲ್ಲಿ ದೊಡ್ಡ ಯಶಸ್ಸು ಸಾಧಿಸಿದೆ. ದೆಹಲಿ ಅಬಕಾರಿ ನೀತಿಯ ರಚನೆ ಹಾಗೂ ಅನುಷ್ಠಾನದಲ್ಲಿ ಅವರ ಮಾತ್ರವೇ ಪ್ರಮುಖವಾಗಿದೆ. ಆ ಮೂಲಕ ಹೈದರಾಬಾದ್ ಮೂಲದ ಸಗಟು ಮತ್ತು ಚಿಲ್ಲರೆ ಪರವಾನಗಿದಾರರಿಗೆ ಮತ್ತು 2021-22ರ ಮದ್ಯದ ನೀತಿಯ ಅಡಿಯಲ್ಲಿ ಅವರ ಲಾಭದಾಯಕ ಮಾಲೀಕರಿಗೆ "ತಪ್ಪಾದ ಲಾಭ" ವನ್ನು ನೀಡುವಂಥ ನೀತಿ ರಚನೆ ಮಾಡಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಕವಿತಾ ಅವರನ್ನು ಸಿಬಿಐ ವಿಚಾರಣೆ ನಡೆಸಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ ಏಳು ಆರೋಪಿಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆ ತನ್ನ ಮೊದಲ ಆರೋಪ ಪಟ್ಟಿಯನ್ನು ಸಲ್ಲಿಸಿತ್ತು.

'ಹಗರಣ'ದಲ್ಲಿ ಆಪಾದಿತ ಕಿಕ್‌ಬ್ಯಾಕ್‌ಗಳ ಕುರಿತು ದೆಹಲಿ ನ್ಯಾಯಾಲಯದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ರಿಮಾಂಡ್ ವರದಿಯಲ್ಲಿ ಬಿಆರ್‌ಸಿ ಎಂಎಲ್‌ಸಿಯ ಹೆಸರನ್ನು ಕ್ರಾಪ್‌ ಮಾಡಲಾಗಿತ್ತು. ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದು ಕವಿತಾ ಈ ಹಿಂದೆ ಹೇಳಿದ್ದರು.

ಸರ್ಕಾರದ ವತಿಯಿಂದ ಗಣರಾಜ್ಯೋತ್ಸವ ಆಚರಿಸದ ತೆಲಂಗಾಣ, ಹೈಕೋರ್ಟ್‌ ಆದೇಶ ಉಲ್ಲಂಘಿಸಿದ ಕೆಸಿಆರ್‌!

"ಇದುವರೆಗೆ ನಡೆಸಲಾದ ತನಿಖೆಯ ಪ್ರಕಾರ, ವಿಜಯ್ ನಾಯರ್, ಆಪ್ ನಾಯಕರ ಪರವಾಗಿ ಸೌತ್ ಗ್ರೂಪ್ (ಶರತ್ ರೆಡ್ಡಿ, ಕೆ ಕವಿತಾ, ಮಾಗುಂಟ ಶ್ರೀನಿವಾಸುಲು ರೆಡ್ಡಿ ನಿಯಂತ್ರಿಸುವ ಗುಂಪಿನಿಂದ ಕನಿಷ್ಠ 100 ಕೋಟಿ ರೂಪಾಯಿಗಳಷ್ಟು ಕಿಕ್‌ಬ್ಯಾಕ್ ಪಡೆದಿದ್ದಾರೆ) ಅಮಿತ್ ಅರೋರಾ ಸೇರಿದಂತೆ ವಿವಿಧ ವ್ಯಕ್ತಿಗಳಿಂದ ಕಿಕ್‌ ಬ್ಯಾಕ್‌ ಪಡೆದುಕೊಂಡಿದ್ದಾರೆ. ಇಡಿ ಆರೋಪಿಗಳಲ್ಲಿ ಒಬ್ಬರಾದ ಅಮಿತ್ ಅರೋರಾ ಅವರ ಮೇಲೆ ದೆಹಲಿ ನ್ಯಾಯಾಲಯದಲ್ಲಿ ಸಲ್ಲಿಸಿದ ರಿಮಾಂಡ್ ವರದಿಯಲ್ಲಿ ಈ ಮಾಹಿತಿ ತಿಳಿಸಲಾಗಿದೆ.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತ ತಾಲಿಬಾನ್‌ ಆಗಲಿದೆ, ಕೆಸಿಆರ್‌ ವಾಗ್ದಾಳಿ!

Follow Us:
Download App:
  • android
  • ios