Asianet Suvarna News Asianet Suvarna News

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತ ತಾಲಿಬಾನ್‌ ಆಗಲಿದೆ, ಕೆಸಿಆರ್‌ ವಾಗ್ದಾಳಿ!

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಧಾರ್ಮಿಕ ಮತ್ತು ಜಾತಿ ಮತಾಂಧತೆಗೆ ಉತ್ತೇಜನ ನೀಡಿದರೆ ದೇಶವು ತಾಲಿಬಾನ್ ತರಹದ ಪರಿಸ್ಥಿತಿಯನ್ನು ಎದುರಿಸಲಿದೆ ಎಂದು ಎಚ್ಚರಿಸಿದ್ದಾರೆ.
 

KCR hits out at BJP over religious fanaticism Country will face Taliban like situation san
Author
First Published Jan 13, 2023, 1:07 PM IST

ಹೈದರಾಬಾದ್‌ (ಜ.13): ಆಡಳಿತಾರೂಢ ಬಿಆರ್‌ಎಸ್ ಅಧ್ಯಕ್ಷ ಮತ್ತು ತೆಲಂಗಾಣ ಮುಖ್ಯಮಂತ್ರಿ, ಕೆಸಿಆರ್‌ ಎಂದೂ ಕರೆಯಲ್ಪಡುವ ಕೆ.ಚಂದ್ರಶೇಖರ್ ರಾವ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಧಾರ್ಮಿಕ ಮತ್ತು ಜಾತಿ ಮತಾಂಧತೆ ಮತ್ತು ಸಮಾಜದಲ್ಲಿ ಒಡಕು ಮೂಡಿಸುವುದನ್ನು ಬಿಜೆಪಿಯು ದೇಶದಲ್ಲಿ ಮುಂದುವರಿಸಿದರೆ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ತರಹದ ಪರಿಸ್ಥಿತಿ ಭಾರತದಲ್ಲೂ ಕೂಡ ನಿರ್ಮಾಣವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.  ಧಾರ್ಮಿಕ ಮತ್ತು ಜಾತಿಯ ಮತಾಂಧತೆಯನ್ನು ಉತ್ತೇಜಿಸಿದರೆ, ಜನರನ್ನು ವಿಭಜಿಸಿದರೆ, ಅಂತಹ ನೀತಿಗಳನ್ನು ಅನುಸರಿಸಿದರೆ ಅದು ನರಕದಂತಾಗುತ್ತದೆ. ಅಫ್ಘಾನಿಸ್ತಾನ ದೇಶವನ್ನು ತಾಲಿಬಾನ್‌ ಆಕ್ರಮಿಸಿಕೊಂಡ ರೀತಿಯಾಗುತ್ತದೆ. ಅಂಥದ್ದೊಂದು ಭಯಾನಕ ಪರಿಸ್ಥಿತಿ ಸೃಷ್ಟಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.ಈ ದ್ವೇಷದಿಂದಾಗಿ ದೇಶದ ಜೀವನಾಡಿಯೇ ಸುಟ್ಟು ಭಸ್ಮವಾಗುವ ಸಂದರ್ಭಗಳು ಎದುರಾಗಲಿವೆ.ಆದ್ದರಿಂದ ವಿಶೇಷವಾಗಿ ಯುವಕರು ಜಾಗೃತರಾಗಿರಬೇಕು ಎಂದು ಕೆಸಿಆರ್‌  ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಮಹಬೂಬಾಬಾದ್ ಮತ್ತು ಕೊತಗುಡೆಂನಲ್ಲಿ ಸಂಯೋಜಿತ ಜಿಲ್ಲಾಧಿಕಾರಿ ಕಚೇರಿಯನ್ನು ಉದ್ಘಾಟಿಸಿದ ನಂತರ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಪ್ರಗತಿಪರ ಮತ್ತು ನಿಷ್ಪಕ್ಷಪಾತ ಸರ್ಕಾರವಿದ್ದರೆ ಮಾತ್ರ ದೇಶ ಮತ್ತು ರಾಜ್ಯ ಪ್ರಗತಿ ಸಾಧಿಸಲು ಸಾಧ್ಯ ಎಂದು ಹೇಳಿದರು. ತೆಲಂಗಾಣದ ಉದಾಹರಣೆಯ್ನು ನೀಡಿದ ಅವರು, ಭವಿಷ್ಯದ ರಾಜಕೀಯದಲ್ಲಿ ಇಡೀ ದೇಶಕ್ಕೆ ಮುಂದಿನ ದಾರಿಯನ್ನು ನಮ್ಮ ರಾಜ್ಯ ತೋರಿಸುತ್ತಿದೆ ಎಂದು ಹೇಳಿದ್ದಾರೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸರಿಸಮಾನವಾಗಿ ಕಾರ್ಯನಿರ್ವಹಿಸಲು ವಿಫಲವಾದ ಕಾರಣ ತೆಲಂಗಾಣದ ಒಟ್ಟು ರಾಜ್ಯ ಆಂತರಿಕ ಉತ್ಪನ್ನವು (ಜಿಎಸ್‌ಡಿಪಿ) ಇರಬೇಕಾದಂತೆ ಬೆಳೆಯಲಿಲ್ಲ ಎಂದು ಅವರು ಆರೋಪಿಸಿದರು. 2014 ರಲ್ಲಿ ರಾಜ್ಯ ರಚನೆಯ ಸಮಯದಲ್ಲಿ ತೆಲಂಗಾಣದ ಜಿಎಸ್‌ಡಿಪಿ 5 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು ಮತ್ತು ಇಂದು ಅದು 11.5 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ ಎಂದು ರಾವ್ ಹೇಳಿದರು.

ಕೇಂದ್ರದ ಅಸಮರ್ಥ ನೀತಿಗಳಿಂದಾಗಿ ತೆಲಂಗಾಣ ಒಂದರಲ್ಲೇ 3 ಲಕ್ಷ ಕೋಟಿ ರೂ. ನಷ್ಟ ಕಂಡಿದೆ. ಈ ಅಂಕಿಅಂಶಗಳನ್ನು ಅರ್ಥಶಾಸ್ತ್ರಜ್ಞರು, ಆರ್‌ಬಿಐ ಮತ್ತು ಸಿಎಜಿ ನೀಡಿದೆ ಎಂದು ಅವರು ಹೇಳಿದ್ದಾರೆ. ಜಿಎಸ್‌ಡಿಪಿ 14.50 ಲಕ್ಷ ಕೋಟಿ ಇರಬೇಕಿತ್ತು, ಆದರೆ ಕೇಂದ್ರದ ನೀತಿಗಳಿಂದಾಗಿ ಅದು 11.50 ಲಕ್ಷ ಕೋಟಿಗೆ ತಲುಪಿದೆ ಎಂದು ಆರೋಪಿಸಿದರು.

"ದೇಶವು ಇಂತಹ ಗೊಂದಲವನ್ನು ಎದುರಿಸಿದರೆ, ನಾವು ತಾಲಿಬಾನ್‌ಗಳಂತಾದರೆ, ಹೂಡಿಕೆಗಳು ಬರುತ್ತವೆಯೇ? ಉದ್ಯೋಗಗಳು ಇರುತ್ತವೆಯೇ? ಇರುವ ಉದ್ಯಮಗಳು ಉಳಿಯುತ್ತವೆಯೇ? ಗಲಭೆಗಳು ಸಂಭವಿಸಿ ಕರ್ಫ್ಯೂ, ಲಾಠಿ ಚಾರ್ಜ್ ಮತ್ತು ಗೋಲಿಬಾರ್‌ ವಾತಾವರಣವಾದರೆ ಸಮಾಜ ಹೇಗಿರುತ್ತದೆ. ಪ್ರಗತಿ ಸಾಧಿಸುತ್ತೇವೆಯೇ? ಇಂದು ಏನಾಗುತ್ತಿದೆ, ದೇಶವನ್ನು ತಪ್ಪು ದಾರಿಗೆ ತರುವ ದುಷ್ಟ ಪ್ರಯತ್ನಗಳು ಹೇಗೆ ನಡೆಯುತ್ತಿವೆ ಎಂಬುದನ್ನು ನೀವೆಲ್ಲರೂ ಗಮನಿಸುತ್ತಿದ್ದೀರಿ ಎಂದು ಅವರು ಹೇಳಿದರು.

ತಿಂಗಳಲ್ಲಿ 1 ವಾರ ಕೆಸಿಆರ್‌ ಇನ್ನು ದಿಲ್ಲಿಯಲ್ಲಿ ಬಿಡಾರ

ದೇಶವು ಅಪಾರ ಪ್ರಮಾಣದ ನೀರು ಮತ್ತು ವಿದ್ಯುತ್ ಸಂಪನ್ಮೂಲಗಳನ್ನು ಹೊಂದಿದ್ದರೂ, ಕೇಂದ್ರದ ಕೆಟ್ಟ ನೀತಿಗಳಿಂದ ಅಂತರರಾಜ್ಯ ಜಲ ವಿವಾದಗಳು ಮತ್ತು ನೀರಿನ ಕೊರತೆಗಳಿವೆ ಎಂದು ಅವರು ಹೇಳಿದರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಕುಡಿಯುವ ನೀರು ಮತ್ತು ವಿದ್ಯುತ್ ಪೂರೈಕೆ ಸರಿಯಾಗಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ ಎಂದರು.ಸದ್ಯದ ಪರಿಸ್ಥಿತಿ ಹೀಗಿರುವಾಗ, ಯಾವುದೇ ಉದ್ದೇಶವನ್ನು ಪೂರೈಸದ ಹೆಚ್ಚಿನ  ಭಾಷಣಗಳನ್ನು ಪ್ರಧಾನಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ದೆಹಲಿ ಮದ್ಯ ನೀತಿ ಹಗರಣ: ಸಿಬಿಐನಿಂದ ಕೆಸಿಆರ್‌ ಪುತ್ರಿ ಕವಿತಾ ವಿಚಾರಣೆ

ಜನವರಿ 18 ರಂದು ಭದ್ರಾದ್ರಿ-ಕೋತಗುಡೆಂ ಬಳಿಯ ಖಮ್ಮಮ್‌ನಲ್ಲಿ ಬಿಆರ್‌ಎಸ್ ಆಯೋಜಿಸಲು ಉದ್ದೇಶಿಸಿರುವ ಸಾರ್ವಜನಿಕ ಸಭೆಯನ್ನು ಉಲ್ಲೇಖಿಸಿ, 'ದೇಶವನ್ನು ಉಳಿಸುವ' ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಭೆಯನ್ನು ಯೋಜಿಸಲಾಗಿದೆ ಎಂದು ಹೇಳಿದರು.

Follow Us:
Download App:
  • android
  • ios