‘ಕೊರೋನಾ ಸೋಂಕಿನಿಂದ ರಕ್ಷಿಸಲು ಜನರಿಗೆ ನೀಡಲು ನಿಮ್ಮಲ್ಲಿ ಲಸಿಕೆಗಳೇ ಇಲ್ಲ ಯಾರಿಗೇ ಕರೆ ಮಾಡಿದರೂ ಲಸಿಕೆ ಪಡೆಯಿರಿ ಎಂಬ ಕಿರಿಕಿರಿ ಏಕೆ? ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಹೈಕೋರ್ಟ್‌ ತೀವ್ರ ಆಕ್ರೋಶ 

ನವದೆಹಲಿ (ಮೇ.14): ‘ಕೊರೋನಾ ಸೋಂಕಿನಿಂದ ರಕ್ಷಿಸಲು ಜನರಿಗೆ ನೀಡಲು ನಿಮ್ಮಲ್ಲಿ ಲಸಿಕೆಗಳೇ ಇಲ್ಲ. ಆದರೆ ಜನರು ಯಾರಿಗೇ ಕರೆ ಮಾಡಿದರೂ ಲಸಿಕೆ ಪಡೆಯಿರಿ ಎಂಬ ಕಿರಿಕಿರಿಯಾಗುವ ರಿಂಗ್‌ಟ್ಯೂನ್‌ ಅನ್ನು ಮಾತ್ರ ಭಿತ್ತರಿಸುತ್ತೀರಿ’ ಹೀಗೆಂದು ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಹೈಕೋರ್ಟ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿತು. 

ಪ್ರಕರಣದವೊಂದರ ವಿಚಾರಣೆ ವೇಳೆ ‘ಯಾರಿಗೆ ಕರೆ ಮಾಡಿದರೂ ಕೊರೋನಾ ಲಸಿಕೆಯಿಂದ ಪಾರಾಗಲು ಲಸಿಕೆ ಅತ್ಯವಶ್ಯಕ ಎಂಬ ಸಂದೇಶ ಮಾತ್ರ ಪ್ರತೀ ಬಾರಿಯೂ ಬರುತ್ತದೆ. 

2ನೇ ಡೋಸ್‌ಗೆ ಹೆಚ್ಚಿನ ಆದ್ಯತೆ ನೀಡಿ: ರಾಜ್ಯಗಳಿಗೆ ಸೂಚನೆ ...

ಆದರೆ ನಿಮ್ಮಲ್ಲಿ ಲಸಿಕೆಗಳೇ ಇಲ್ಲ. ಲಸಿಕೆಗಳೇ ಇಲ್ಲದಿದ್ದಾಗ ಲಸಿಕೆ ಪಡೆಯಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿತು. ಈಗಾಗಲೇ 45 ವರ್ಷ ಮೇಲ್ಪಟ್ಟವರಿಗೆ ದೇಶದಲ್ಲಿ ಲಸಿಕಾ ಪ್ರಕ್ರಿಯೆ ನಡೆಯುತ್ತಿದೆ. ಆದರೆ 18 ವರ್ಷ ಮೇಲ್ಪಟ್ಟವರ ಲಸಿಕಾ ಪ್ರಕ್ರಿಯೆ ಮುಂದೂಡಲಾಗಿದೆ. ಕಾರಣ ದೇಶದ ಎಲ್ಲೆಡೆ ಲಸಿಕೆ ಕೊರತೆ. 

ದೇಶದಲ್ಲಿ ತೀವ್ರತೆರನಾದ ಲಸಿಕಾ ಕೊರತೆ ಹಿನ್ನೆಲೆಯಲ್ಲಿ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona