ನಿಯಮ ಉಲ್ಲಂಘಿಸಿದ ಬ್ಲ್ಯಾಕ್ ಫೋರ್ಟ್, ಪವರ್ ಕೂಲ್ ಬಿಯರ್ ಕಂಪನಿ ಬಡ್‌ವೈಸರ್ ಬಿಯರ್ ಬಾಟಲಿ ಮರುಬಳಕೆ ಮಾಡಿ ಬಳಕೆ ಮತ್ತೊಂದು ಕಂಪನಿ ಬಾಟಲಿ ಬಳಕೆ ಮಾಡಿ ನಿಯಮ ಉಲ್ಲಂಘನೆ ಇತರ ಕಂಪನಿಯ ಬಾಟಲಿ ಅಥವಾ ಉತ್ಪನ್ನಗಳ ಬಳಕೆ ಮಾಡದಂತೆ ಸೂಚನೆ
ನವದೆಹಲಿ(ಮಾ.23): ಬಿಸಿಲ ಬೇಗೆ ನಡುವೆ ಚಿಲ್ಡ್ ಬಿಯರ್ ಕುಡಿಯುವಾಗ ಗೊಂದಲ ಆಗಬಾರದು. ಕೊಟ್ಟ ದುಡ್ಡಿಗೆ ಮೋಸ ಆಗಬಾರದು. ಅರೇ ಇದೇನು ಕುಡುಕರ ಫಿಲಾಸಫಿ ಅಂತಾ ಕನ್ಫ್ಯೂಸ್ ಆಗಬೇಡಿ. ಇನ್ಯಾರದ್ದೂ ಕಂಪನಿಯ ಬಿಯರ್ ಬಾಟಲ್ ಮರುಬಳಕೆ ಮಾಡಿ, ಮತ್ತೊಂದು ಕಂಪನಿಯ ಬಿಯರ್ ತುಂಬಿ ಗ್ರಾಹಕರಿಗೆ ಮೋಸ ಮಾಡುವ ಪದ್ಧತಿಗೆ ದೆಹಲಿ ಹೈಕೋರ್ಟ್ ಬ್ರೇಕ್ ಹಾಕಿದೆ.
ಬ್ಲ್ಯಾಕ್ ಫೋರ್ಟ್ ಹಾಗೂ ಪವರ್ ಕೂಲ್ ಬಿಯರ್ ಕಂಪನಿಗಳು, ಜನಪ್ರಿಯ ಬಿಯರ್ ಬಡ್‌ವೈಸರ್ ಹಳೇ ಬಾಟಲಿಗಳನ್ನು ಖರೀದಿಸಿ ಅದನ್ನು ಮರುಬಳಕೆ ಮಾಡುತ್ತಿತ್ತು. ಹೀಗೆ ಮರುಬಳಕೆ ಮಾಡುವ ಬಾಟಲಿಗಳಲ್ಲಿ ಬ್ಲ್ಯಾಕ್ ಫೋರ್ಟ್ ಹಾಗೂ ಪವರ್ ಕೂಲ್ ಕಂಪನಿಯ ಬಿಯರ್ ತುಂಬಿ ಗ್ರಾಹಕರಿಗೆ ನೀಡಲಾಗುತ್ತಿತ್ತು. ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಬಡ್‌ವೈಸರ್ ಕಂಪನಿ ಪರವಾಗಿ ದೆಹಲಿ ಹೈಕೋರ್ಟ್ ಆದೇಶ ನೀಡಿದೆ.
ದಿನಕ್ಕೆರಡು ಬಿಯರ್ ಕುಡಿಯೋದು ಮೆದುಳಿಗೆಷ್ಟು ಡೇಂಜರ್ ಗೊತ್ತಾ ?
ಯಾವುದೇ ಉತ್ಪನ್ನವನ್ನು ಮತ್ತೊಂದು ತಯಾಕರ ಮರುಬಳಕೆ ಬಾಟಲಿಯಲ್ಲಿ ತುಂಬಿ ಮಾರಾಟ ಮಾಡುವುದು ಕಾನೂನು ಉಲ್ಲಂಘನೆಯಾಗಿದೆ ಎಂದು ದೆಹಲಿ ಹೈಕೋರ್ಟ್ ಜಸ್ಟೀಸ್ ಪ್ರತಿಭಾ ಎಂ ಸಿಂಗ್ ಹೇಳಿದ್ದಾರೆ. ಬ್ಲ್ಯಾಕ್ ಫೋರ್ಟ್ ಹಾಗೂ ಪವರ್ ಕೂಲ್ ಬಿಯರ್ ಕಂಪನಿಗಳು ಬಡ್‌ವೈಸರ್ ಬಿಯರ್ ಬಾಟಲಿಗಳನ್ನು ಮರುಬಳಕೆ ಮಾಡಿ ಬಳಕೆ ಮಾಡುತ್ತಿದೆ. ಇಲ್ಲಿ ಮರುಬಳಕೆಗಿಂತೆ ಇತರ ಕಂಪನಿಯ ಟ್ರೇಡ್ ಮಾರ್ಕ್ ಬಳಕೆಯಾಗುತ್ತಿದೆ. ಇದರಿಂದ ಮೂಲ ಉತ್ಪನ್ನ ಕುರಿತು ಗೊಂದಲ ಸೃಷ್ಟಿಯಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಸ್ಪಷ್ಟ ಕಾನೂನು ಉಲ್ಲಂಘನೆಯಾಗುತ್ತಿರುವ ಕಾರಣ ಬ್ಲ್ಯಾಕ್ ಫೋರ್ಟ್ ಹಾಗೂ ಪವರ್ ಕೂಲ್ ಬಿಯರ್ ಕಂಪನಿಗಳು ಈ ಕೂಡಲೇ ಬಡ್‌ವೈಸರ್ ಬಿಯರ್ ಬಾಟಲಿಗಳನ್ನ ಮರುಬಳಕೆ ಮಾಡಿ ಮಾರಾಟ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಕೋರ್ಟ್ ಹೇಳಿದೆ.
ಭಾರತದ ಬಿಯರ್ ಪ್ರಿಯರಿಗೆ ರಷ್ಯಾ ಉಕ್ರೇನ್ ಯುದ್ಧ ಚಿಂತೆ, ಬೆಲೆ ಹೆಚ್ಚಳ ಸಾಧ್ಯತೆ!
ಬ್ಲ್ಯಾಕ್ ಫೋರ್ಟ್ ಹಾಗೂ ಪವರ್ ಕೂಲ್ ಬಿಯರ್ ಕಂಪನಿಯಯ ಬಾಟಲಿಗಳ ತಪಾಸಣೆ ನಡೆಸಬೇಕು. ಇಷ್ಟೇ ಅಲ್ಲ ಇತರ ಕಂಪನಿಗಳ ಬಾಟಲಿಗಳನ್ನು ಮರು ಬಳಕೆ ಮಾಡಿ ಅದೆ ಟ್ರೇಡ್‌ಮಾರ್ಕ್‌ನಲ್ಲಿ ಮಾರಾಟ ಮಾಡುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಹಳೇ ಬಾಟಲಿಗಳನ್ನು ಖರೀದಿಸಿ ಕಚ್ಚಾ ಸಾಮಾಗ್ರಿ ತಯಾರಿಸಿ ಅದರಿಂದ ಹೊಸ ಬಾಟಲಿ ಉತ್ಪಾದಿಸಿ ಮಾರಾಟ ಮಾಡುವುದಕ್ಕೆ ಅವಕಾಶವಿದೆ. ಆದರೆ , ಇತರ ಕಂಪನಿಯ ಟ್ರೇಡ್ ಮಾರ್ಕ್ ಜೊತೆ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಬ್ಲ್ಯಾಕ್ ಫೋರ್ಟ್ ಹಾಗೂ ಪವರ್ ಕೂಲ್ ಬಿಯರ್ ಕಂಪನಿಗಳು ಬಡ್‌ವೈಸರ್ ಹಳೇ ಬಾಟಲಿಗಳನ್ನು ಮರುಬಳಕೆ ಮಾಡಿ ತಮ್ಮ ಕಂಪನಿಯ ಲೇಬಲ್ ಹಾಕಿ ಬಿಯರ್ ಮಾರಾಟ ಮಾಡುತ್ತಿದೆ. ಈ ಬಾಟಲಿಗಳಲ್ಲಿ ನಮ್ಮ ಬಡ್‌ವೈಸರ್ ಕಂಪನಿ ಟ್ರೇಡ್ ಮಾರ್ಕ್ ಇದೆ. ಇದರಿಂದ ನಮ್ಮ ಬ್ರ್ಯಾಂಡ್‌ಗೆ ಧಕ್ಕೆಯಾಗುತ್ತಿದೆ. ಗ್ರಾಹಕರಿಗೆ ಮೋಸವಾಗುತ್ತಿದೆ ಎಂದು ಬಡ್‌ವೈಸರ್ ಕಂಪನಿ ಮಾಲೀ ಅನ್ಯೂಸರ್ ಬುಷ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ತಪ್ಪಾಗಿರುವುದನ್ನು ಒಪ್ಪಿಕೊಂಡಿರುವ ಬ್ಲ್ಯಾಕ್ ಫೋರ್ಟ್ ಹಾಗೂ ಪವರ್ ಕೂಲ್ ಬಿಯರ್ ಮುಂಜಾಗ್ರತೆ ವಹಿಸುವುದಾಗಿ ಹೇಳಿದೆ. ಇದೇ ವೇಳೆ ಮುಂದಿನ ದಿನಗಳಲ್ಲಿ ಬ್ಲ್ಯಾಕ್ ಫೋರ್ಟ್ ಹಾಗೂ ಪವರ್ ಕೂಲ್ ಬಿಯರ್ ಕಂಪನಿ ಬಡ್‌ವೈಸರ್ ಬಿಯರ್ ಮರುಬಳಕೆ ಬಾಟಲಿ ಉಪಯೋಗ ಕಂಡು ಬಂದರೆ ಕಂಪನಿಗೆ ನೊಟೀಸ್ ನೀಡಲು, ಅವರಿಂದ ಪರಿಹಾರ ಮೊತ್ತ ಪಡೆಯಲು ಬಡ್‌ವೈಸರ್ ಅರ್ಹವಾಗಿದೆ ಎಂದು ಕೋರ್ಟ್ ಹೇಳಿದೆ.
ಬಡ್‌ವೈಸರ್ ಬಿಯರ್ ಭಾರತದಲ್ಲಿ ಅತ್ಯಂತ ಜನಪ್ರಿಯ ಬಿಯರ್ ಆಗಿದೆ. ಅಮೆರಿಕ ಮೂಲದ ಈ ಬಿಯರ್ ಕಂಪನಿ 146 ವರ್ಷಗಳ ಹಿಂದೆ, ಅಂದರೆ 1876ರಲ್ಲಿ ಆರಂಭಗೊಂಡಿತು. ಅಮೆರಿಕ, ಭಾರತ, ಯುಕೆ, ಯೂರೋಪ್, ನೆದರ್ಲೆಂಡ್, ಆಸ್ಟ್ರೇಲಿಯಾ , ಕೆನಾಡ, ಚೀನಾ, ಥಾಯ್ಲೆಂಡ್, ಐರ್ಲೆಂಡ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಬಡ್‌ವೈಸರ್ ಬಿಯರ್ ಲಭ್ಯವಿದೆ.
