ಪ್ರತಿ ಗುಟುಕು ಬಿಯರ್ ಸವಿಯುವಾಗ ಬೆಲೆ ಏರಿಕೆ ಚಿಂತೆ ರಷ್ಯಾ ಉಕ್ರೇನ್ ಯುದ್ಧದಿಂದ ಭಾರತದಲ್ಲಿ ಬಿಯರ್ ಬೆಲೆ ಏರಿಕೆ ಸಾಧ್ಯತೆ ಭಾರತದ ಬಿಯರ್‌ಗೂ ರಷ್ಯಾ ಉಕ್ರೇನ್ ಯುದ್ಧಕ್ಕೂ ಇದೆ ಸಂಬಂಧ
ನವದೆಹಲಿ(ಫೆ.28): ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ಆತಂಕ ವಿಶ್ವದ ಬಹುತೇಕಾ ಎಲ್ಲಾರಾಷ್ಟ್ರಗಳಿಗೆ ಹಬ್ಬಿದೆ. ತಮ್ಮ ನಾಗರೀಕರನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವುದೇ ದೊಡ್ಡ ಚಿಂತೆಯಾಗಿದೆ. ಇದರ ನಡುವೆ ಭಾರತದ ಬಿಯರ್ ಪ್ರಿಯರಿಗೂ ಉಕ್ರೇನ್ ಮೇಲಿನ ದಾಳಿ ಬಹುದೊಡ್ಡ ಚಿಂತೆಯನ್ನೇ ಸೃಷ್ಟಿಸಿದೆ. ಇದಕ್ಕೆ ಕಾರಣ ಯುದ್ಧದಿಂದ ಭಾರತದಲ್ಲಿ ಬಿಯರ್ ಬೆಲೆ ಏರಿಕೆಯಾಗುವ ಸಾಧ್ಯತೆಗಳು ಕಾಣಿಸತೊಡಗಿದೆ.
ಪ್ರತಿ ಸಿಪ್ ಬಿಯರ್ ಇಳಿಸುವಾಗಲು ಚಿಂತೆಯ ನೆರಿಗೆಗಳು ಭಾರತದ ಬಿಯರ್ ಪ್ರಿಯರಲ್ಲಿ ಕಾಣಿಸಿಕೊಳ್ಳುತ್ತಿದೆ. ಉಕ್ರೇನ್ ಮೇಲೆ ರಷ್ಯಾ ದಾಳಿಯಿಂದ ಈಗಾಗಲೇ ಕೆಲ ದೇಶಗಳು ನೇರ ಪರಿಣಾಮ ಎದುರಿಸುತ್ತಿದೆ. ಭಾರತಕ್ಕೆ ಪರೋಕ್ಷ ಪರಿಣಾಮಗಳಿವೆ. ಇದರ ನಡುವೆ ಬಿಯರ್ ಬೆಲೆ ಕೂಡ ಸೇರಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ರಷ್ಯಾ ಹಾಗೂ ಉಕ್ರೇನ್ ಎರಡು ದೇಶಗಳು ಅತೀ ಹೆಚ್ಚು ಬಾರ್ಲಿ ಹಾಗೂ ಗೋಧಿ ರಫ್ತು ಮಾಡುವ ದೇಶವಾಗಿದೆ.
ಇದರಿಂದ ಭಾರತಕ್ಕೇನು ಸಮಸ್ಯೆ ಎಂದು ಭಾವಿಸುತ್ತಿದ್ದೀರಾ? ಬಿಯರ್ ತಯಾರಿಕೆಯಲ್ಲಿ ಪ್ರಮುಖ ಪಾತ್ರನಿರ್ವಹಿಸುವ ಬಾರ್ಲಿ ಹಾಗೂ ಗೋಧಿ ಪೂರೈಕೆ ಸಮಸ್ಯೆಯಾಗುತ್ತಿದೆ. ಇದರಿಂದ ಬಿಯರ್ ಬೆಲೆ ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ.
ರಷ್ಯಾ ವಿರುದ್ಧ ಹೋರಾಡಲು ಬೀರ್‌ನಿಂದ ಬಾಂಬ್ ಮಾಡಿದ ಉಕ್ರೇನ್ ಮದ್ಯ ತಯಾರಕ ಸಂಸ್ಥೆ
ಬಾರ್ಲಿ ರಫ್ತು ಮಾಡು ವಿಶ್ವದ ಎರಡನೇ ಅತೀ ದೊಡ್ಡ ದೇಶ ರಷ್ಯಾ. ಇತ್ತ ಗೋಧಿಯನ್ನು ರಫ್ತು ಮಾಡುವ ವಿಶ್ವದ ನಾಲ್ಕನೇ ಅತೀ ದೊಡ್ಡ ದೇಶ ಉಕ್ರೇನ್. ಬಿಯರ್ ತಯಾರಿಕೆಯಲ್ಲಿ ಎರಡು ಅಷ್ಟೇ ಮುಖ್ಯ. ಯುದ್ಧದಿಂದ ರಷ್ಯಾ ಹಾಗೂ ಉಕ್ರೇನ್‌ನಿಂದ ಬಾರ್ಲಿ ಹಾಗೂ ಗೋಧಿ ರಫ್ತಾಗುತ್ತಿಲ್ಲ. ಇದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಾರ್ಲಿ ಹಾಗೂ ಗೋಧಿ ಬೆಲೆ ಏರಿಕೆ ದಿನ ದೂರವಿಲ್ಲ.
ಭಾರತದ ಬಿಯರ್ ಉತ್ಪಾದನೆ ಕಂಪನಿಗಳು ದೇಶದಲ್ಲಿ ಬೆಳೆಯುವ ಬಾರ್ಲಿ ಹಾಗೂ ಗೋಧಿ ಮೇಲೆ ಅವಲಂಬಿತವಾಗಿದೆ. ಆದರೆ ಬೆಲೆ ಏರಿಕೆ ಬಿಸಿ ಭಾರತಕ್ಕೂ ತಟ್ಟಲಿದೆ. ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ಪರಿಸ್ಥಿತಿ ಹೀಗೆ ಮುಂದುವರಿದರೆ ಬಾರ್ಲಿ ಗೋಧಿ ಪೂರೈಕೆ ಸಮಸ್ಯೆಯಾಗಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿ ಹಾಗೂ ಬಾರ್ಲಿ ಬೆಲೆ ಏರಿಕೆಯಾದರೆ ಭಾರತದಲ್ಲೂ ಬೆಲೆ ಏರಿಕೆಯಾಗಲಿದೆ. ಇದರಿಂದ ಬಿಯರ್ ಕಂಪನಿಗಳ ಬಿಯರ್ ಉತ್ಪಾದನಾ ವೆಚ್ಚ ಹೆಚ್ಚಾಗಲಿದೆ.
Blue Beer: ಚಿಯರ್ಸ್..ಮದ್ಯ ಪ್ರಿಯರಿಗೆ ಕಿಕ್ ಏರೋದು ಗ್ಯಾರಂಟಿ
ಅಮೆರಿಕ, ಕೆನಾಡದಲ್ಲಿ ರಷ್ಯಾದ ವೋಡ್ಕಾ, ಮದ್ಯಗಳನ್ನು ಬಹಿಷ್ಕರಿಸಿದ್ದಾರೆ. ಇತ್ತ ರಷ್ಯಾ ಹಾಗೂ ಉಕ್ರೇನ್‌ನಿಂದ ಮದ್ಯ ಪೂರೈಕೆ, ಕಚ್ಚಾ ವಸ್ತುಗಳ ಪೂಕೈಗೂ ಅಡ್ಡಿಯಾಗಿದೆ. ಹೀಗಾಗಿ ಅಮೆರಿಕ, ಕೆನಡಾ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಮದ್ಯದ ಬೆಲೆ ಹೆಚ್ಚಳವಾಗಿದೆ.
ಖಾರ್ಕೀವ್‌ನಲ್ಲಿ ಕಾಳಗ:
ರಷ್ಯಾ ಅಧ್ಯಕ್ಷ ಪುಟಿನ್ ನಾಲ್ಕು ದಿಕ್ಕುಗಳಿಂದಲೂ ಉಕ್ರೇನ್ ಮೇಲೆ ತೀವ್ರ ದಾಳಿಗೆ ಶನಿವಾರವಷ್ಟೇ ಸೂಚಿಸಿದ್ದರು. ಹೀಗಾಗಿ ಈವರೆಗೂ ರಾಜಧಾನಿ ಕೀವ್ ಮೇಲೆ ಮಾತ್ರ ತನ್ನ ಗಮನ ಕೇಂದ್ರೀಕರಿಸಿದ್ದ ರಷ್ಯಾ ಪಡೆಗಳು, ಭಾನುವಾರ ಉಕ್ರೇನ್‌ನ 2ನೇ ಅತಿದೊಡ್ಡ ನಗರವಾದ 14 ಲಕ್ಷ ಜನಸಂಖ್ಯೆಯ ಖಾರ್ಕೀವ್ ಸೇರಿದಂತೆ ಹಲವು ನಗರಗಳ ಮೇಲೂ ಭಾರೀ ದಾಳಿ ನಡೆಸಿವೆ.
ಕಳೆದ ಗುರುವಾರವೇ ಖಾರ್ಕೀವ್ ನಗರದ ಗಡಿಗೆ ರಷ್ಯಾ ಪಡೆಗಳು ಆಗಮಿಸಿದ್ದವಾದರೂ, ಒಳಗೆ ಪ್ರವೇಶ ಮಾಡಿರಲಿಲ್ಲ. ಆದರೆ ಭಾನುವಾರ ದೊಡ್ಡ ಪ್ರಮಾಣದಲ್ಲಿ ನಗರವನ್ನು ಪ್ರವೇಶಿಸುವ ಯತ್ನವನ್ನು ರಷ್ಯಾ ಪಡೆಗಳು ಮಾಡಿವೆ. ಇದಕ್ಕೆ ಮುನ್ನುಡಿಯಾಗಿ ನಗರದ ಮೇಲೆ ಭಾರಿ ಪ್ರಮಾಣದ ಬಾಂಬ್, ಕ್ಷಿಪಣಿ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ನಗರದ ತೈಲ ಹಾಗೂ ಅನಿಲ ಪೈಪ್‌ಲೈನ್, ವಿಮಾನ ನಿಲ್ದಾಣ, ಜನವಸತಿ ಪ್ರದೇಶ, ಸೇನಾ ನೆಲೆ ನಾಶವಾಗಿವೆ. ಅನಿಲ ಪೈಪ್‌ಲೈನ್, ತೈಲ ಪೈಪ್‌ಲೈನ್ ಮೇಲಿನ ರಷ್ಯಾದ ದಾಳಿಯ ಹೊಸ ತಂತ್ರಗಾರಿಕೆ ಆಗಿರಬಹುದು ಎಂದು ವಿಶ್ಲೇಷಿಸಲಾಗಿದೆ.
