ಬಿರು ಬಿಸಿಲಿನಿಂದಾಗಿ ಕೋರ್ಟ್‌ ವಿಚಾರಣೆಯೇ ಮುಂದೂಡಿಕೆ!

ದಾಖಲೆ ಉಷ್ಣಾಂಶಕ್ಕೆ ಸಾಕ್ಷಿಯಾಗಿರುವ ದೆಹಲಿ, ಇದೇ ಕಾರಣಕ್ಕೆ ಬುಧವಾರ ನ್ಯಾಯಾಲಯದ ವಿಚಾರಣೆಯೊಂದರ ಮುಂದೂಡಿಕೆಗೂ ಕಾರಣವಾಯ್ತು.

Delhi HeatwDelhi heatwave court proceedings postponed!ave rav

ನವದೆಹಲಿ: ದಾಖಲೆ ಉಷ್ಣಾಂಶಕ್ಕೆ ಸಾಕ್ಷಿಯಾಗಿರುವ ದೆಹಲಿ, ಇದೇ ಕಾರಣಕ್ಕೆ ಬುಧವಾರ ನ್ಯಾಯಾಲಯದ ವಿಚಾರಣೆಯೊಂದರ ಮುಂದೂಡಿಕೆಗೂ ಕಾರಣವಾಯ್ತು.

ಉಷ್ಣಾಂಶ ಹೆಚ್ಚಳದಿಂದ ವಿಚಾರಣೆ ನಡೆಸುವುದಕ್ಕೆ ಕಷ್ಟವಾಗುತ್ತಿದೆ ಎಂದು ಗ್ರಾಹಕ ನ್ಯಾಯಾಲಯ, ಪ್ರಕರಣದ ವಿಚಾರಣೆಯನ್ನು ಮುಂದೂಡಿದ ಘಟನೆ ಬುಧವಾರ ನಡೆದಿದೆ. ‘ಕೋರ್ಟ್‌ನ ಈ ಕೊಠಡಿಯಲ್ಲಿ ಎಸಿ, ಕೂಲರ್ ಇಲ್ಲ. ತಾಪಮಾನ 40 ಡಿಗ್ರಿಗಿಂತ ಅಧಿಕವಾಗಿದೆ. ನ್ಯಾಯಾಲಯದ ಕೊಠಡಿಯಲ್ಲಿ ಅಧಿಕ ಉಷ್ಣಾಂಶವಿದೆ. ಇದರಿಂದ ಹೆಚ್ಚಿನ ಬೆವರಿಗೆ ಕಾರಣವಾಗುತ್ತಿದ್ದು, ವಾದವನ್ನು ಆಲಿಸುವುದಕ್ಕೆ ಕಷ್ಟವಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಕರಣವನ್ನು ಮುಂದೂಡುವುದು ಬಿಟ್ಟು ಬೇರೆ ದಾರಿಯಿಲ್ಲ.’ ಎಂದು ಹೇಳಿ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿ ಆದೇಶ ಹೊರಡಿಸಿದರು

ದೆಹಲಿ ನಗರದ ಇತಿಹಾಸದಲ್ಲಿಯೇ ದಾಖಲೆಯ ತಾಪಮಾನ, 52.3 ಡಿಗ್ರಿ ಬಿಸಿಲಿಗೆ ಜನ ಕಂಗಾಲು!

ದಿಲ್ಲಿಯಲ್ಲಿ ಪೈಪ್‌ ನೀರು ಬಳಸಿ ಕಾರು ತೊಳೆದರೆ ₹2,000 ದಂಡ: ಅತಿಶಿ 

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವವುಂಟಾಗಿದ್ದು, ನೀರಿನ ಸಂರಕ್ಷಣೆಗೆ ದೆಹಲಿ ಸರ್ಕಾರ ಕೆಲವು ಕಠಿಣ ಕಾನೂನುಗಳನ್ನು ರೂಪಿಸಿದೆ. 

30 ನಿಮಿಷದಲ್ಲಿ ಸ್ಫೋಟಿಸುವ ಬಾಂಬ್‌ ಬೆದರಿಕೆ: ವಿಮಾನದಿಂದ ಜಾರಿ ಹೊರಬಂದ ಪ್ರಯಾಣಿಕರು, ರಕ್ಕೆ ಮೇಲೆ ಬಂದ ವೃದ್ಧೆ

ಅದರಂತೆ ದೆಹಲಿಯಲ್ಲಿ ಪೈಪ್‌ ಬಳಸಿ ಕಾರನ್ನು ತೊಳೆದರೆ ಹಾಗೂ ವಾಣಿಜ್ಯ ಕಟ್ಟಡ ಮತ್ತು ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ ಗೃಹೋಪಯೋಗಿ ನೀರಿನ ಸಂಪರ್ಕವನ್ನು ಬಳಸಿಕೊಂಡಲ್ಲಿ 2 ಸಾವಿರ ರು. ದಂಡ ವಿಧಿಸಲಾಗುತ್ತದೆ.ದೆಹಲಿ ಜಲಸಂಪನ್ಮೂಲ ಸಚಿವೆ ಅತಿಶಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದು, ‘ಹರ್‍ಯಾಣದಿಂದ ದೆಹಲಿ ಪಾಲಿಗೆ ಬರಬೇಕಾದ ಯಮುನಾ ನದಿಯ ನೀರನ್ನು ಪೂರೈಕೆ ಮಾಡದಿರುವುದು ನೀರಿನ ಅಭಾವಕ್ಕೆ ಕಾರಣವಾಗಿದೆ. ಹಾಗಾಗಿ ನೀರಿನ ಅಭಾವವನ್ನು ತಡೆಯಲು ಗುರುವಾರ ಬೆಳಗ್ಗೆಯಿಂದ ಈ ಕುರಿತು ನಗರದಾದ್ಯಂತ ಗಸ್ತು ತಿರುಗಿ ನೀರನ್ನು ಪೋಲು ಮಾಡಿದ್ದು ಕಂಡುಬಂದಲ್ಲಿ ದಂಡ ವಿಧಿಸಲಾಗುವುದು’ ಎಂದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios