Asianet Suvarna News Asianet Suvarna News

ಮಗಳ ಮೇಲೆಯೇ ಅಪ್ಪನ ಬಲಾತ್ಕಾರ: ದೂರು ದಾಖಲಿಸದ ಅಮ್ಮನ ಮೇಲಿನ ಕೇಸ್ ವಜಾ

ತನ್ನ ಸ್ವಂತ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯವೆಸಗಿದ ತಂದೆಯ ಬಗ್ಗೆ  ದೂರು ನೀಡಲು ವಿಳಂಬ ಮಾಡಿದ ತಾಯಿ(ಆರೋಪಿಯ ಪತ್ನಿ) ವಿರುದ್ಧ ದಾಖಲಾಗಿದ್ದ ಕೇಸನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. 

Delhi HC Grants Relief to Mother in Childs Sexual Abuse Case Against husband
Author
First Published Sep 19, 2024, 5:56 PM IST | Last Updated Sep 19, 2024, 5:56 PM IST

ನವದೆಹಲಿ: ತನ್ನ ಸ್ವಂತ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯವೆಸಗಿದ ತಂದೆಯ ಬಗ್ಗೆ  ದೂರು ನೀಡಲು ವಿಳಂಬ ಮಾಡಿದ ತಾಯಿ(ಆರೋಪಿಯ ಪತ್ನಿ) ವಿರುದ್ಧ ದಾಖಲಾಗಿದ್ದ ಕೇಸನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಲೈಂಗಿಕ ಸಂತ್ರಸ್ತೆಯಾದ 6 ವರ್ಷದ ಬಾಲಕಿಯ ತಾಯಿಯೂ ಆಗಿರುವ ಆರೋಪಿಯ ಪತ್ನಿಯೂ ಕೂಡ ತನ್ನ ಗಂಡನ ಮನೆಯಲ್ಲಿ ತೀವ್ರ ಹಿಂಸೆ ದೌರ್ಜನ್ಯ ಅನುಭವಿಸುತ್ತಿರುವುದನ್ನು ಗಮನಿಸಿದ ನ್ಯಾಯಾಲಯ ಆಕೆಯ ವಿರುದ್ಧದ ದಾಖಲು ಮಾಡಿದ ಪ್ರಕರಣವನ್ನು ವಜಾಗೊಳಿಸಿದೆ.  

ಮಹಿಳೆಯ 16 ವರ್ಷದ ಅಪ್ರಾಪ್ತ ಮಗಳು ತಂದೆಯಿಂದಲೇ ಹಲವು ಬಾರಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು ಹಾಗೂ ಆತನಿಂದ ಹಲ್ಲೆಗೊಳಗಾಗಿದ್ದಳು. ಆದರೆ ತಾಯಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿರಲಿಲ್ಲ, ಹೀಗಾಗಿ ಮಹಿಳೆ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 21ರ ಅಡಿ (ಪ್ರಕರಣ ದಾಖಲಿಸಲು ಅಥವಾ ವರದಿ ಮಾಡಲು ವಿಫಲವಾದವರಿಗೆ ಶಿಕ್ಷೆ)  ಹಾಗೂ ಪೋಸ್ಕೋ (ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆಕಾಯ್ದೆ) ಪ್ರಕರಣ ದಾಖಲಾಗಿತ್ತು. 

400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಫೇಕ್‌ MBBS ಸರ್ಟಿಫಿಕೇಟ್ ನೀಡಿದ ನಕಲಿ ವೈದ್ಯನ ಬಂಧನ

ಆದರೆ ಈ ಪ್ರಕರಣವನ್ನು ಪರಿಶೀಲಿಸಿದ ನ್ಯಾಯಾಧೀಶರಾದ ಅನಿಶ್ ದಯಾಲ್, ಆಕೆಯ ವಿರುದ್ಧ ಮಾಡುವ ಈ ಕ್ರಮವೂ ಆಕೆಗೆ ಹಾಗೂ ಆಕೆಯನ್ನು ಮಾತ್ರ ಅವಲಂಬಿತಳಾಗಿರುವ ಮಗಳ ಮೇಲೆ ಗಂಭೀರ ಪೂರ್ವಾಗ್ರಹವನ್ನು ಉಂಟು ಮಾಡುತ್ತದೆ ಎಂದು ಹೇಳಿದರು. ಇಲ್ಲಿ ಪ್ರಕರಣ ದಾಖಲಿಸಲು ವಿಳಂಬವಾಗಿದ್ದರು, ನಂತರದಲ್ಲಿ ಮಹಿಳೆ ತಕ್ಷಣವೇ ವರದಿ ಮಾಡಿದ್ದಾಳೆ. ಅಲ್ಲದೇ ಗಂಡ ಹಾಗೂ ಆತನ ಮನೆಯವರ ವಿರೋಧದ ನಡುವೆಯೂ ಮಹಿಳೆ ಮಗಳನ್ನು ಮಾನಸಿಕ ತಜ್ಞರ ಬಳಿಯೂ ಕರೆದೊಯ್ಡು ಕೌನ್ಸೆಲಿಂಗ್ ಮಾಡಿಸಿದ್ದಾಳೆ ಎಂಬುದನ್ನು ನ್ಯಾಯಾಧೀಶರು ಗಮನಿಸಿದ್ದಾರೆ. 

ಇದು ಒಂದು ಶ್ರೇಷ್ಠ ಪ್ರಕರಣವಾಗಿದ್ದು, ಇಲ್ಲಿ ಕಾನೂನು ನಿಯಮಗಳ ಪ್ರಕಾರ ಸಂತ್ರಸ್ತೆಯೇ ಆರೋಪಿಯಾಗಿದ್ದಾಳೆ. ಆ ಪ್ರಕರಣದ ಸಂದರ್ಭ ಹಾಗೂ ಆಕೆಯ ವಾಸ್ತವ ಸ್ಥಿತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಲೈಂಗಿಕ ಅಪರಾಧದ ವರದಿ ಮಾಡಲು ವಿಳಂಬ ಮಾಡಿದ್ದಕ್ಕಾಗಿ ತಾಯಿಯ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ. ಆದರೆ  ಈ ಪ್ರಕರಣದಲ್ಲಿ ತಾಯಿಯೂ ಕೂಡ ತನ್ನ ಗಂಡನ ಮನೆಯಲ್ಲಿ ದೌರ್ಜನ್ಯ ಹಾಗೂ ಹಿಂಸೆ ಪ್ರಕರಣದ ಸಂತ್ರಸ್ತೆಯಾಗಿದ್ದಾಳೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ತನ್ನ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಧೀಶರು ಹೀಗೆ ಹೇಳಿದ್ದು, ಮಹಿಳೆ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿದ್ದಾರೆ.  ಅಲ್ಲದೇ ಆಕೆಯ ಪತಿ ವಿರುದ್ಧದ ವಿಚಾರಣೆಯೂ ಕಾನೂನು ಪ್ರಕಾರ ಮುಂದುವರೆಯಲಿದೆ ಎಂದು ನ್ಯಾಯಾಲಯ ಹೇಳಿದೆ. 

ಹಣಕ್ಕಾಗಿ ಹತ್ತಿರದ ಸಂಬಂಧಿಯಿಂದಲೇ 5 ವರ್ಷದ ಮಗುವಿನ ಉಸಿರುಕಟ್ಟಿಸಿ ಹತ್ಯೆ

ಇತ್ತ ಅಪ್ರಾಪ್ತ ಬಾಲಕಿ 7ನೇ ತರಗತಿಯಲ್ಲಿದ್ದಾಗಲೇ ಆಕೆಯ ಮೇಲೆ ಆಕೆಯ ತಂದೆಯೇ ಲೈಂಗಿಕ ದೌರ್ಜನ್ಯವೆಸಗಿದ್ದ. ಅಲ್ಲದೇ ಈ ವಿಚಾರವನ್ನು ಬಾಯ್ಬಿಟ್ಟಲ್ಲಿ ಪರಿಸ್ಥಿತಿ ಚೆನ್ನಾಗಿರಲ್ಲ ಎಂದು ಬೆದರಿಸಿದ್ದ. ಆದರೆ  ಇದು ಮತ್ತೆ ಮತ್ತೆ ಪುನರಾವರ್ತನೆಯಾದಾಗ ಈ ವಿಚಾರವನ್ನು ಬಾಲಕಿ ತನ್ನ ತಾಯಿಗೆ ತಿಳಿಸಿದ್ದಳು. ಇದು ಬಾಲಕಿಯ ಪೋಷಕರ ಮಧ್ಯೆ ಕಿತ್ತಾಟಕ್ಕೆ ಕಾರಣವಾಗಿತ್ತು. ಮಗಳ ಮೇಲೆ ನಡೆದ ದೌರ್ಜನ್ಯವನ್ನು ಪ್ರಶ್ನಿಸಿದ್ದಕ್ಕೆ ಪಾಪಿ ತಂದೆ ಪತ್ನಿಯ ಮೇಲೂ ಹಲ್ಲೆ ಮಾಡಿದ್ದ. 

ನ್ಯಾಯಾಲಯದ ಮುಂದೆ ತಾಯಿ, ತಾನು ಘಟನೆಯ ನಂತರ ಸಹಾಯಕ್ಕಾಗಿ  2021ರ ಜೂನ್ 5 ರಂದು ಮಗಳನ್ನು ಮಾನಸಿಕ ತಜ್ಞರ ಬಳಿ ಕರೆದೊಯ್ದಿದ್ದೆ. ನಂತರ ಮಾರನೇ ದಿವಸ ಪೊಲೀಸರಿಗೆ ದೂರು ನೀಡಿದೆ, ಇದು ತಂದೆಯ ಬಂಧನಕ್ಕೆ ಕಾರಣವಾಗಿತ್ತು ಎಂದು ಹೇಳಿದ್ದರು. ಇದಾದ ನಂತರ ವಿಚಾರಣಾ ನ್ಯಾಯಾಲಯವೂ ಆತನಿಗೆ ಜಾಮೀನು ನೀಡಿತ್ತು.  ಅಲ್ಲದೇ ಈ ಪಾಪಿ ತಂದೆ ತನ್ನ ಪತ್ನಿಯ ಜೊತೆ ಅನೈಸರ್ಗಿಕವಾದ (unnatural sex) ಲೈಂಗಿಕ ಕ್ರಿಯೆ ನಡೆಸುತ್ತಿದ್ದ, ಅಲ್ಲದೇ ಆತನ ತಾಯಿಯೂ ತನ್ನ ಮೇಲೆ ಹಲ್ಲೆ ಮಾಡಿದ್ದಳು ಎಂದು ಮಹಿಳೆ ಆರೋಪಿಸಿದ್ದಾರೆ. 

Latest Videos
Follow Us:
Download App:
  • android
  • ios