ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ ಸೋಂಕಿತರ ಕುಟುಂಬಕ್ಕೆ 5 ಲಕ್ಷ

  • ದೇಶದ ಹಲವು ಭಾಗಗಗಳಲ್ಲಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ ಸೋಂಕಿತರು
  • ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ನೆರವು
Delhi Govt to Give Rs 5 Lakh to Kin of COVID Patients Who Died Due to Lack of Oxygen dpl

ದೆಹಲಿ(ಮೇ.28): ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ ಕೊರೋನಾ ರೋಗಿಗಳ ರಕ್ತಸಂಬಂಧಿಗಳಿಗೆ 5 ಲಕ್ಷ ರೂ.ವರೆಗೆ ಪರಿಹಾರ ನೀಡುವುದಾಗಿ ದೆಹಲಿ ಸರ್ಕಾರ ಪ್ರಕಟಿಸಿದೆ. ಪರಿಹಾರ ನೀಡುವ ಕೆಲಸಕ್ಕಾಗಿ ಪೂರ್ವ ಸಿದ್ಧತೆ ಮಾಡಲು ಸರ್ಕಾರ ಆರು ವೈದ್ಯರ ಸಮಿತಿಯನ್ನು ರಚಿಸಿದೆ.

ಗರಿಷ್ಠ 5 ಲಕ್ಷ ರೂ.ಗಳ ಪರಿಹಾರವನ್ನು ಯಾವ ಮಾನದಂಡಗಳ ಮೇಲೆ ನೀಡಬೇಕೆಂಬುದನ್ನು ಸಮಿತಿ ನಿರ್ಧರಿಸುತ್ತದೆ. ಸಂಬಂಧಪಟ್ಟ ಆಸ್ಪತ್ರೆಯಿಂದ ಆಮ್ಲಜನಕ ಪೂರೈಕೆ, ಸ್ಟಾಕ್ ಮತ್ತು ಶೇಖರಣೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಪರೀಕ್ಷಿಸುವ ಹಕ್ಕನ್ನು ಈ ಸಮಿತಿ ಹೊಂದಿರುತ್ತದೆ.

12-18 ವರ್ಷ​ದ​ವ​ರಿ​ಗೂ ದೇಶೀ ಕೋವಿಡ್‌ ಲಸಿಕೆ ಸುರಕ್ಷಿತ

ಈ ಸಮಿತಿಯು ತನ್ನ ವರದಿಯನ್ನು ದೆಹಲಿಯ ಪ್ರಧಾನ ಆರೋಗ್ಯ ಕಾರ್ಯದರ್ಶಿಗೆ ವಾರಕ್ಕೊಮ್ಮೆ ಕಳುಹಿಸಲಿದೆ. COVID-19 ನಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಈಗಾಗಲೇ ಘೋಷಿಸಲಾದ 50,000 ರೂ.ಗಳ ಪರಿಹಾರಕ್ಕೆ ಈ ಮೊತ್ತವು ಆಡ್-ಆನ್ ಆಗಿರುತ್ತದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios