'ಎಣ್ಣೆ'  ಹೋಂ ಡಿಲಿವರಿಗೆ ಸರ್ಕಾರ ಅಸ್ತು, ಮದ್ಯಪ್ರಿಯರ ದಿಲ್ ಖುಷ್!

* ದೆಹಲಿಯ ಸರ್ಕಾರದಿಂದ ಮದ್ಯಪ್ರಿಯರಿಗೆ ಸಿಹಿ ಸುದ್ದಿ
* ಮದ್ಯ ಹೋಂ ಡೆಲಿವರಿ ಸರ್ಕಾರ ಅನುಮತಿ 
* ಆಪ್ ಮೂಲಕ ಅಥವಾ ಆನ್ ಲೈನ್ ಮೂಲಕ ಆರ್ಡರ್ ಮಾಡಿ ಮದ್ಯ ಪಡೆಯಬಹುದು
*  ಲಾಕ್ ಡೌನ್ ತರವು ಹಿನ್ನೆಲೆಯಲ್ಲಿ ಈ ಕ್ರಮ

Delhi govt allows home delivery of liquor through an app online mah

ನವದೆಹಲಿ (ಜೂ. 01) ಕೊರೋನಾ ಲಾಕ್ ನಡುವೆಯೂ ಮದ್ಯದಂಗಡಿಗಳನ್ನು ಸರ್ಕಾರ ತೆರೆದೆ ಇತ್ತು.  ಸರ್ಕಾರಕ್ಕೆ ಒಂದು ಮಟ್ಟದ ಆದಾಯ ಇದರಿಂದ ಬರಲಿದ್ದು ಆರ್ಥಿಕ ಚಟುವಟಿಕೆ ಸರಿದೂಗಿಸಲು ಅನಿವಾರ್ಯ ಎಂಬ ಮಾತುಗಳು ಇದ್ದವು.

ಈ ನಡುವೆ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಲು ಸರ್ಕಾರ ತೀರ್ಮಾನ ಮಾಡಿದೆ. ತೀರ್ಮಾನ ಮಾಡಿರುವುದು ನವದೆಹಲಿ ಸರ್ಕಾರ!  ಮದ್ಯಪ್ರಿಯರು ಈ ಸುದ್ದಿ ಕೇಳಿ ಫುಲ್ ಖುಷ್ ಆಗಿದ್ದಾರೆ.

ಮದ್ಯ ಖರೀದಿಗೆ ಕೋವಿಡ್ ಸರ್ಟಿಫಿಕೇಟ್ ಕಡ್ಡಾಯ

ಮೊಬೈಲ್ ಅಪ್ಲಿಕೇಷನ್ ಮತ್ತು ಆನ್ ಲೈನ್ ಮೂಲಕ ಬುಕ್ ಮಾಡಿದರೆ  ಮನೆ ಬಾಗಿಲಿಗೆ ನೀವು ಬಯಸಿದ ದೇಶೀಯ ಅಥವಾ ವಿದೇಶಿ ಮದ್ಯವನ್ನು ಪೂರೈಸುವುದಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಅನುಮತಿ ನೀಡಿದೆ. ಮದ್ಯದ ಆನ್ ಲೈನ್ ಬುಕ್ಕಿಂಗ್ ನಿಂದಾಗಿ ಕೊವಿಡ್-19 ಸೋಂಕು ಹರಡುವಿಕೆ ಅಪಾಯಕ್ಕೆ ನಿಯಂತ್ರಣ ಹೇರುವುದರ ಜೊತೆಗೆ ಆದಾಯ ಹೆಚ್ಚಿಸಿಕೊಳ್ಳಬಹುದು ಎನ್ನುವುದು  ಲೆಕ್ಕಾಚಾರ.

ಕೊರೋನಾ ಲಸಿಕೆ ತೆಗೆದುಕೊಂಡವರು ಮದ್ಯಪಾನ ಮಾಡಬಹುದಾ? 

ಆನ್ ಲೈನ್ ಮೂಲಕ ಮದ್ಯ ಸರಬರಾಜಿಗೆ ಅವಕಾಶ ಕೊಡಿ ಎನ್ನುವುದು ಕೊರೋನಾ ಆರಂಭವಾದ ದಿನದಿಂದಲೂ ಕೇಳಿಬರುತ್ತಿದ್ದ ಬೇಡಿಕೆ. ದೆಹಲಿ, ಮಹಾರಾಷ್ಟ್ರ. ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ಎರಡನೇ ಅಲೆಯಲ್ಲಿ ಬಸವಳಿದಿವೆ. ದೆಹಲಿ ಸರ್ಕಾರ ಇದೀಗ ಆನ್ ಲೈನ್ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿದ್ದು ಮುಂದೆ ಜನ ಯಾವ ರೀತಿ ಪ್ರತಿಕ್ರಿಯಸಲಿದ್ದಾರೆ ಎನ್ನುವುದನ್ನು ನೋಡಬೇಕಿದೆ.

"

Latest Videos
Follow Us:
Download App:
  • android
  • ios