ನವದೆಹಲಿ (ಫೆ.21): ಪೌರತ್ವ ಕಾಯ್ದೆ ವಿರೋಧಿ ಹೋರಾಟದ ಕೇಂದ್ರಬಿಂದು ಆಗಿರುವ ದೆಹಲಿಯ ಶಾಹೀನ್ ಬಾಗ್‌ನಲ್ಲಿ ಸುಪ್ರೀಂ ಕೋರ್ಟ್ ಸಂಧಾನಕಾರರಿಗೆ ಭಾಗಶ: ಯಶಸ್ಸು ಸಿಕ್ಕಿದ್ದು, ಒಂದು ಪ್ರಮುಖ ರಸ್ತೆ ಈಗ ಸಂಚಾರಕ್ಕೆ ಮುಕ್ತವಾಗಿದೆ.

ಈ ಮೂಲಕ ಕಳೆದ 69 ದಿನಗಳಿಂದ ಬ್ಲಾಕ್ ಆಗಿದ್ದ ಫರೀದಾಬಾದ್- ದೆಹಲಿ ಸಂಪರ್ಕಿಸುವ ರಸ್ತೆಯು ಸಂಚಾರಕ್ಕೆ ಮುಕ್ತವಾಗಿದೆ. ಆದರೆ ದೆಹಲಿ -ನೋಯ್ಡಾ ಸಂಪರ್ಕಿಸುವ ರಸ್ತೆ ಈಗಲೂ ಬ್ಲಾಕ್ ಆಗಿಯೇ ಇದೆ. 

ಇದನ್ನೂ ಓದಿ | ಮೋದಿ, ಅಮಿತ್‌ ಎಲ್ಲಾ ಎಲೆಕ್ಷನ್‌ ಗೆಲ್ಲಿಸಲಾಗದು,ನೀವೂ ಸಜ್ಜಾಗಿ: RSS

ಪ್ರತಿಭಟನೆಯಿಂದ ಈ ಪ್ರದೇಶದಲ್ಲಿ ಸಂಚಾರ ವ್ಯವಸ್ಥೆಯು ಹದಗೆಟ್ಟಿದ್ದು ಪರಿಹಾರ ಕಂಡುಹುಡುಕುವ ನಿಟ್ಟಿನಲ್ಲಿ ಈ ಪ್ರಯತ್ನ ನಡೆದಿದೆ. ಪೊಲೀಸರ ಸಹಕಾರದಿಂದ ಕೆಲವು ಪರ್ಯಾಯ ಮಾರ್ಗಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತಿದೆ. 

ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ-2019 ಮತ್ತು ಉದ್ದೇಶಿತ ಎನ್‌ಪಿಆರ್ & ಎನ್‌ಆರ್‌ಸಿ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಕಳೆದ 69 ದಿನಗಳಿಂದ  ಮಹಿಳೆಯರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | ಮಂಗಳೂರು: CAA ವಿರೋಧಿ ಪ್ರತಿಭಟನೆಯಿಂದ ಅಮೂಲ್ಯ ಔಟ್..!

ಈ ಪ್ರಕರಣ ಸುಪ್ರೀಂ ಮೆಟ್ಟಿಲೇರಿದ್ದು, ಪ್ರತಿಭಟನಾಕಾರರ ಮನವೊಲಿಸಲು ನಡೆಸಲು ಇಬ್ಬರು ಹಿರಿಯ ವಕೀಲರನ್ನು ಸಂಧಾನಕಾರರಾಗಿ ನೇಮಿಸಿತ್ತು. ಸಂಜಯ್ ಹೆಗ್ಡೆ ಮತ್ತು ಸಾಧನ ರಾಮಚಂದ್ರನ್ ಕಳೆದ ಮೂರುದಿನಗಳಿಂದ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ಸಿಎಎ ಹಿಂಪಡೆಯುವವರೆಗೂ ಚಳುವಳಿ ಮುಂದುವರೆಸುತ್ತೇವೆ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದಿದ್ದಾರೆ.