ಕರೋನಾ ಆಟಾಟೋಪ ನಿಲ್ಲುವುದು ಇರಲಿ, ಸೋಂಕಿನ ಪ್ರಕರಣಗಳೂ ದ್ವಿಗುಣ ಗೊಳ್ಳುವುದು ಕಡಿಮೆಯಾಗುತ್ತಿಲ್ಲ. ಸಿಎಂ ಕೇಜ್ರಿವಾಲ್ ಅವರ ತಂಡದ ಹಿಡಿತಕ್ಕೂ ಸಿಗದಂತೆ ರೇಸಿಗೆ ನಿಂತ ಕುದುರೆಯಂತೆ ದಣಿವಿಗೂ ನಿಲ್ಲದೆ ಓಡುತ್ತಲೇ ಇದೆ ಈ ವೈರಸ್. 

ಮಾರ್ಚ್ 3ರಂದು ಮೊದಲ ಪ್ರಕರಣ ಸದ್ದು ಮಾಡಿತ್ತು. ಆಗಿನ್ನೂ ಲಾಕ್ ಡೌನ್, ಜನತಾ ಕರ್ಫ್ಯೂ ಮಾತುಗಳು ಕೂಡ ಕೇಳಿ ಬಂದಿರದ ಹೊತ್ತು. ಒಂದು ತಿಂಗಳು ಕ್ಯಾಲೆಂಡರ್ ಬದಲಾಯಿಸುವ ವೇಳೆ ಆ ಒಂದು, ಒಂದು ಸಾವಿರ ದಾಟಿತ್ತು. ಅಂದ್ರೆ ಏಪ್ರಿಲ್‌ 12 ರ ಹೊತ್ತಿಗೆ 1063, ಏಪ್ರಿಲ್ 20 ಕ್ಕೆ 2081 ಪ್ರಕರಣಗಳು. ಮೇ 15ರ ಹೊತ್ತಿಗೆ ಎಂಟು ಸಾವಿರ ಪ್ರಕರಣಗಳು ದಾಟಿ ಕೇಕೆ ಹಾಕುತ್ತಿದೆ. ಕೊರೋನಾ ಸೋಂಕಿನ ರಾಜ್ಯಗಳ ಪಟ್ಟಿಯಲ್ಲಿ ಡೆಲ್ಲಿ ನಾಲ್ಕನೇ ಸ್ಥಾನವನ್ನು ಭದ್ರ ಮಾಡಿಕೊಂಡಿದೆ.

ಸೋಂಕಿತರ ಸಾವಿನ ಅಂಕಿಗಳಲ್ಲೂ ಅಷ್ಟೆ ಶತಕ ದಾಟಿ ಇನ್ನೂ ಆರು (106) ಹೆಚ್ಚಾಗಿದೆ. ಒಂದೇ ವಾರಕ್ಕೆ 2300 ಪ್ರಕರಣಗಳು ದಾಖಲಾದವು. 5 ಸಾವಿರದ ಹತ್ತಿರವಿದ್ದ ಸೋಂಕಿತರು ಮೇ ಮೊದಲ ವಾರಕ್ಕೆ ಬರೀ ಏಳು ದಿನಗಳ ಅಂತರದಲ್ಲಿ 2,335 ಪ್ರಕರಣಗಳು ಹೆಚ್ಚಾದರು.

ಕರ್ನಾಟಕದಲ್ಲಿ ಸಾವಿರದ ಗಡಿ ದಾಟಿದ ಕೊರೋನಾ

ರಾಜಧಾನಿಯಲ್ಲೇಕೆ ಹಿಡಿತಕ್ಕೆ ಸಿಕ್ತಿಲ್ಲ ವೈರಸ್?
ಅಣುವಿನ ಗಾತ್ರದ ಈ ವೈರಸ್ ಮಾನವ ದೇಹ ಹೊಕ್ಕಿ, ಕೆಮ್ಮು, ಸೀನಿನ ಹನಿಗಳ ಮೂಲಕ ಹನಿ ಜ್ವರವಾಗಿ ಕಾಣಿಸಿಕೊಳ್ಳುತ್ತದೆ. ಈ ಹನಿಗಳು ಒಬ್ಬರಿಗೆ ತಾಕಿದ್ರೂ ಸಾಕು ಜ್ವರ ಬಂತು ಅಂತಲೇ ಲೆಕ್ಕ. ಇದೇ ಇದರ ಮೊಡಸ್. ಸೋ ಈಗ ಆ ಸೋಂಕಿನ ಹನಿಗಳ ಮೂಲಕ ಇಂಡಿಯಾದಲ್ಲಿ 82 ಸಾವಿರ ಮಂದಿ ಮುಟ್ಟಿದೆ. ಜಾತಿ, ಧರ್ಮ, ವರ್ಗ, ಧನಿಕ, ಬಡವ ಈ ವೈರಸ್ ಮುಂದೆ ತೃಣಮಾತ್ರ ಅನ್ನೋದು ಈಗ ಹಳೇ ಮಾತು.

ಈ ಮಾತು ಹಳೇದಾದ್ರು ಸೋಂಕಿತರು ಸೋಂಕಿಸುತ್ತಿರುವ ಲೆಕ್ಕ ಮಾತ್ರ ನಿತ್ಯ ಹೊಸದು. ಆರಂಭದಲ್ಲಿ ಕಾಣಿಸಿಕೊಂಡವರು ಈಗ ಡಿಸ್ಚಾಜ್೯ ಆಗಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದು, ಸ್ಟೇ ಹೋಂ ಮಂತ್ರ ಪಠಿಸುತ್ತಿದ್ದಾರೆ.

ಕೇರಳ ಆರೋಗ್ಯ ಸಚಿವೆಗೆ ವಿದೇಶಿ ಪತ್ರಿಕೆ ಬಹು ಪರಾಕ್

ಆದ್ರೆ ಸೋಂಕಿತರು ಸೋಂಕಿಸಿದ ಸಂಪರ್ಕಗಳು ಈಗ ಈ ಲೆಕ್ಕ ಜಾಸ್ತಿ ಮಾಡುತ್ತಿದ್ದಾರೆ. ಪ್ರೈಮರಿ, ಸೆಕೆಂಡರಿ ಎನ್ನುತ್ತಿದ್ದ ಸಂಪರ್ಕಗಳು ಈಗ ಹೆಚ್ಚುಹೆಚ್ಚಾಗಿ ಪತ್ತೆಯಾಗುತ್ತಿರುವುದು ಆತಂಕ ಹೆಚ್ಚಿಸಿದೆ. ಮತ್ತೊಂದು ಕಡೆ ಈಗ ಹೆಚ್ಚಾದರೂ ಪರವಾಗಿಲ್ಲ ಮುಂದೆ ಸೇಫ್ ಅನ್ನೋದು ಡೆಲ್ಲಿ ಗವರ್ನಮೆಂಟ್ ಮಾತು. ನಿಜಾಮುದ್ದೀನ್ ಮರ್ಕಜ್‌ನ ನಂಟು ಡೆಲ್ಲಿ ಮೀರಿ ಇಂಡಿಯಾಕ್ಕೆ ಹರಡಿತು ಅನ್ನೋದೆ ಬಹುದೊಡ್ಡ ಉದಾಹರಣೆ. 

ಅಲ್ಲದೇ ದಕ್ಷಿಣ ಕೊರಿಯಾ ಮಾದರಿಯಲ್ಲಿ ಸೀಲ್ ಡೌನ್, ರೆಡ್ ಜೋನ್ ಪ್ರದೇಶಗಳಲ್ಲಿ random ಚೆಕ್ ಮಾಡುತ್ತಿರುವುದು ಹೆಚ್ಚಾಗಿ ಪತ್ತೆಯಾಗಲು ಕಾರಣ ಎನ್ನುತ್ತಿದೆ ಕೇಜ್ರಿವಾಲ್ ಸಾಹೇಬರ ಬಳಗ.

ಕೊರೋನಾದಿಂದ ಚೇತರಿಸಿಕೊಂಡ ಎಷ್ಟು ದಿನಗಳ ನಂತರ ಲೈಂಗಿಕ ಕ್ರಿಯೆ ಓಕೆ?

Asymptotic ನಿದ್ದೆ ಗೆಡಿಸುತ್ತಿದೆ:
ಸೋಂಕಿನ ಗುಣಲಕ್ಷಣಗಳೇ ಇರುವುದಿಲ್ಲ. ಸ್ವ್ಯಾಬ್ ಪರೀಕ್ಷೆಗೆ ಒಳಪಡಿಸಿದ್ರೆ, ಕೊರೊನಾ ಸೋಂಕು ಪತ್ತೆಯಾಗುತ್ತಿದೆ. ಈಗ ಇದರ ಹಿಂದೆ ಬಿದ್ದಿರುವ ಡೆಲ್ಲಿ ಸರ್ಕಾರ, ಸೀಲ್ ಡೌನ್ ಮಾಡಿದ 97 ಪ್ರದೇಶಗಳಲ್ಲೂ random ಚೆಕ್ ಮಾಡಲಾಗುತ್ತಿದೆ. ನಂತರ ಚಿಕಿತ್ಸೆ, ಅವರ ಮೇಲೆ ನಿಗಾ, ಪದೇ ಪದೇ ಎಚ್ಚರಿಸೋದು ಈಗ  ಕಾಲಗಳು ಬದಲಾದ ಹೊತ್ತಲ್ಲಿ ಜ್ವರ ಸಾಮಾನ್ಯ. ಅದು ವಿಕೋಪಕ್ಕೆ ಹೋಗದಂತೆ  ನೋಡಿಕೊಳ್ಳಬೇಕಿದೆ, ಅನ್ನೋ ಮಾತುಗಳು ಕೂಡ ಕೇಳಿಬರುತ್ತಿವೆ.

ಮಲೇರಿಯಾ, ಡೇಂಗ್ಯೂ ಕಾಟವೂ ಇದೆ.
ಕೊರೋನಾ ಜೊತೆಗೆ ಚಿಕುನ್ ಗುನ್ಯಾ, ಮಲೇರಿಯಾ, ಡೇಂಗ್ಯೂ ಕೂಡ ಡೆಲ್ಲಿಯ ಜನತೆಯನ್ನು ಕಾಡುತ್ತಿವೆ. ಮಲೇರಿಯಾ ಪ್ರಕರಣಗಳೂ ಹೆಚ್ಚಾಗಿವೆ. ಕಳೆದ ವರ್ಷ ನಾಲ್ಕು ಪ್ರಕರಣಗಳು ದಾಖಲಾಗಿದ್ವು. ಈ ವರ್ಷ 18 ಪ್ರಕರಣಗಳು ದಾಖಲಾಗಿವೆ. 14 ಪ್ರಕರಣಗಳು ಡೇಂಘಿ, 10 ಪ್ರಕರಣಗಳು ಚಿಕುನ್ ಗುನ್ಯ ವರದಿಯಾಗಿವೆ. 

ಲಾಕ್ ಡೌನ್ ಮುಂದುವರೆಸಬೇಕಾ? ತೆರವು ಮಾಡಬೇಕಾ? ಅನ್ನೋದರ ಬಗ್ಗೆ ಅಭಿಪ್ರಾಯ ತಿಳಿಸಿ ಅಂಥ ಕೇಜ್ರಿವಾಲ್ ಸಾಹೇಬ್ರು ಅಂದಿದ್ದೇ ತಡ, ಡೆಲ್ಲಿ ಮಂದಿ ಲಕ್ಷ ಗಟ್ಲೆ ಸಲಹೆಗಳನ್ನು ನೀಡಿದ್ದಾರೆ. ಆದ್ರೆ ಡೆಲ್ಲಿಗೆ ಡೆಲ್ಲಿಯೇ ಅಂದ್ರೆ 11 ಜಿಲ್ಲೆಗಳೂ ರೆಡ್ ಜೋನ್ ನಲ್ಲಿವೆ.  ಮುಂದೇಗೆ ಅನ್ನೋದಕ್ಕೆ ಮನೆಯಿಂದ ಹೊರಬರಬೇಕಾದ್ರೆ ಮುಖಕ್ಕೊಂದು ಮಾಸ್ಕ್, ಕೈಯಲ್ಲೊಂದು ಸ್ಯಾನಿಟೇಜರ್ ಬಾಟಲ್ ಜೊತೆ ಸಾಮಾಜಿಕ ಅಂತ ಕಾಯ್ದುಕೊಳ್ಳುವ ಮೂಲಕ ಜನತೆಯೇ ಉತ್ತರಿಸಬೇಕಿದೆ. 

(ಇಂಡಿಯಾ ರೌಂಡ್ಸ್ ವಿತ್ ಡೆಲ್ಲಿ ಮಂಜು)