Asianet Suvarna News Asianet Suvarna News

ಮಾನನಷ್ಟ ಪ್ರಕರಣ: ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ದೋಷಿ

ಸಾಮಾಜಿಕ ಕಾರ್ಯಕರ್ತೆ ಹಾಗೂ ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಅವರನ್ನು ಮಾನಹಾನಿ ಪ್ರಕರಣದಲ್ಲಿ ದಿಲ್ಲಿ ನ್ಯಾಯಾಲಯ ದೋಷಿ ಎಂದು ಘೋಷಿಸಿದೆ.

Delhi court convicts Medha Patkar in defamation case filed by VK Saxena rav
Author
First Published May 25, 2024, 8:02 AM IST

ನವದೆಹಲಿ: ಸಾಮಾಜಿಕ ಕಾರ್ಯಕರ್ತೆ ಹಾಗೂ ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಅವರನ್ನು ಮಾನಹಾನಿ ಪ್ರಕರಣದಲ್ಲಿ ದಿಲ್ಲಿ ನ್ಯಾಯಾಲಯ ದೋಷಿ ಎಂದು ಘೋಷಿಸಿದೆ.

2000ನೇ ಇಸವಿಯಲ್ಲಿ ಎನ್‌ಜಿಒ ಒಂದರ ಮುಖ್ಯಸ್ಥರಾಗಿದ್ದ ಈಗಿನ ದೆಹಲಿ ಲೆಫ್ಟಿನೆಂಟ್‌ ಗೌರ್ನರ್‌ (ಉಪರಾಜ್ಯಪಾಲ) ವಿ.ಕೆ. ಸಕ್ಸೇನಾ ಅವರು ಹಾಕಿದ್ದ ಮಾನಹಾನಿ ದಾವೆ ಇದಾಗಿತ್ತು. ಆದೇಶ ಪ್ರಕಟಿಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಾಘವ್ ಶರ್ಮಾ, ಮೇಧಾಗೆ ಶಿಕ್ಷೆಯನ್ನು ಇನ್ನೂ ಪ್ರಕಟಿಸಿಲ್ಲ. 2 ವರ್ಷ ಜೈಲು ಶಿಕ್ಷೆ ಹಾಗೂ ದಂಡಕ್ಕೆ ಅವರು ಗುರಿಯಾಗುವ ಸಾಧ್ಯತೆ ಇದೆ.

‘2047ರವರೆಗೂ ದೇವರು ನನ್ನನ್ನು ಕರೆಸಿಕೊಳ್ಳಲ್ಲ’ : ಪ್ರಧಾನಿ ಮೋದಿ

ಏನಿದು ಪ್ರಕರಣ?:

2000 ಇಸವಿಯಲ್ಲಿ ಸಕ್ಸೇನಾ ಅವರ ಸಂಸ್ಥೆಯು ಟೀವಿ ಚಾನೆಲ್‌ ಹಾಗೂ ಪತ್ರಿಕೆಗಳಿಗೆ ಸಕ್ಸೇನಾ ಅವರ ನರ್ಮದಾ ಬಚಾವೋ ಆಂದೋಲನದ ವಿರುದ್ಧ ಜಾಹೀರಾತು ಪ್ರಕಟಿಸಿತ್ತು. ಆಗ ಪಾಟ್ಕರ್‌ ಅವರು ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದರು ಎಂದು ಆಪಾದಿಸಿ ಸಕ್ಸೇನಾ ಮೊಕದ್ದಮೆ ದಾಖಲಿಸಿದ್ದರು

Latest Videos
Follow Us:
Download App:
  • android
  • ios