* ಕೊರೋನಾ  ಲಾಕ್ ಡೌನ್ ಡ್ಯೂಟಿಯಲ್ಲಿ ಇದ್ದಾಗಲೇ ಡ್ಯೂಯೆಟ್ * ಹದಿನೈದು ದಿನದ ಒಳಗೆ ಉತ್ತರಿಸಲು ನೋಟಿಸ್ * ವಿಡಿಯೋ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿದ ಸಿಬ್ಬಂದಿ

ನವದೆಹಲಿ(ಜೂ.  09)  ಟಿಕ್ ಟಾಕ್ ಮರೆಯಾದ ಮೇಲೆ ಅದೇ ರೀತಿಯ ಅದೆಷ್ಟೋ ಅಪ್ಲಿಕೇಶನ್ ಗಳು ಹುಟ್ಟಿಕೊಂಡಿವೆ. ಇಸ್ಟಾ ರಿಲೇ ಏನೂ ಕಡಿಮೆ ಇಲ್ಲ. ಚಿಕ್ಕ ವಿಡಿಯೋ ಮಾಡಿ ಅಪ್ ಮಾಡಿಕೊಂಡು ಲಕ್ಷಾಂತರ ಫಾಲೋವರ್ಸ್ ಗಳನ್ನು ಸಂಪಾದನೆ ಮಾಡಿಕೊಂಡವರಿಗೂ ಕಡಿಮೆ ಇಲ್ಲ.

ಆದರೆ ಕರ್ತವ್ಯದಲ್ಲಿ ಇದ್ಧಾಗಲೇ ವಿಡಿಯೋ ಮಾಡಿ ಹರಿಯಬಿಟ್ಟ ಪೊಲೀಸ್ ಜೋಡಿ ಈಗ ನೋಟಿಸ್ ಗೆ ಉತ್ತರಿಸಬೇಕಾದ ಸ್ಥಿತಿ ಬಂದಿದೆ.  ಇಬ್ಬರ ಮೇಲೂ ದೆಹಲಿ ಪೊಲೀಸರು ಶೋಕಾಸ್ ನೋಟಿಸ್  ನೀಡಿದ್ದಾರೆ.

ಮತ್ತೆ ಬೀದಿ ಬದಿಗೆ ಬಂದ ಬಾಬಾ ಕಾ ಡಾಬಾ

ಮಾಡೆಲ್ ಟೌನ್ ಪೊಲೀಸ್ ಸಿಬ್ಬಂದಿ ಶಶಿ ಮತ್ತು ವಿವೇಕ್ ಮಥೂರ್ ಕರ್ತವ್ಯದಲ್ಲಿ ಇದ್ದಾಗಲೆ ಇಂಥ ಕೆಲಸ ಮಾಡಿದ್ದು ಇದು ಅಪರಾಧ ಎಂದು ಡಿಸಿಪಿ ಉಷಾ ಹೇಳಿದ್ದಾರೆ.

ಕೊರೋನಾ ಲಾಕ್ ಡೌನ್  ಸಂದರ್ಭದಲ್ಲಿ ಈ ವಿಡಿಯೋ ಮಾಡಲಾಗಿದೆ. ಕರ್ತವ್ಯದಲ್ಲಿ ಇದ್ದಾಗ ಇಂಥ ಕೆಲಸ ಮಾಡಿದ್ದಾರೆ ಎಂದು ಇಲಾಖೆ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಕೊರೋನಾ ನಿಯಮವನ್ನು ಇವರುನ ಉಲ್ಲಂಘಿಸಿದ್ದು ಹದಿನೈದು ದಿನದ ಒಳಗೆ ಉತ್ತರ ಕೊಡಬೇಕು ಎಂದು ತಿಳಿಸಲಾಗಿದೆ. 

 

Scroll to load tweet…