ಮಂಗಳವಾರ, ದೆಹಲಿ ಎಲ್ಲಾ 70 ಶಾಸಕರಿಗೆ ಟ್ಯಾಬ್ಲೆಟ್‌ಗಳನ್ನು ನೀಡಲಾಗಿದ್ದು ಅದರಲ್ಲಿ ಅವರು ಆನ್‌ಲೈನ್‌ನಲ್ಲಿ ಅಸೆಂಬ್ಲಿ ನಡಾವಳಿಗಳ ಕುರಿತು ಎಲ್ಲಾ ಅಗತ್ಯ ಮಾಹಿತಿಯನ್ನು ಸ್ವೀಕರಿಸಿದ್ದಾರೆ. ಈ ಮೂಲಕ ವಿಧಾನಸಭೇ ಪೇಪರ್‌ಲೆಸ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. 

ನವದೆಹಲಿ (ಮಾ. 30): ದೆಹಲಿ ವಿಧಾನಸಭೆಯಲ್ಲಿ ಕಾಗದರಹಿತ ಮಾದರಿಯಲ್ಲಿ ಕಾರ್ಯನಿರ್ವಹಿಸಲು ನಿರ್ಧರಿಸಲಾಗಿದ್ದು ಎಲ್ಲಾ 70 ಶಾಸಕರು ಐಪ್ಯಾಡ್ ಅಥವಾ ಟ್ಯಾಬ್ಲೆಟ್‌ಗಳ ಮೂಲಕ ಡಿಜಿಟಲ್ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗಿದೆ. ದೆಹಲಿ ವಿಧಾನಸಭೆಯಲ್ಲಿ ಎಲ್ಲ ಚುಟವಟಿಕೆಗಳನ್ನು ಪೇಪರ್‌ಲೆಸ್ ಮಾಡಲು ಮಂಗಳವಾರ ನಿರ್ಧರಿಸಲಾಗಿದೆ. ಹೀಗಾಗಿ ದೆಹಲಿ ವಿಧಾನಸಭೆಯು ಕಾಗದರಹಿತವಾಗಿದೆ ಮತ್ತು ಇನ್ನು ಮುಂದೆ ಇ-ದಾಖಲೆಗಳನ್ನು ಮಾತ್ರ ಸದನದಲ್ಲಿ ಮಂಡಿಸಲಾಗುವುದು ಎಂದು ಅಧಿಕೃತ ಹೇಳಿಕೆ ತಿಳಿಸಿದೆ. 

ವಿಧಾನಸಭೆಯಲ್ಲಿ ಪ್ರಶ್ನೆಗಳನ್ನು ಸಲ್ಲಿಸುವುದರಿಂದ ಹಿಡಿದು ವಿಧೇಯಕಗಳನ್ನು ಮಂಡಿಸುವವರೆಗೆ ಎಲ್ಲಾ ಕೆಲಸಗಳು ಆನ್‌ಲೈನ್‌ನಲ್ಲಿ ನಡೆಯಲಿವೆ. ಮಂಗಳವಾರ ನಡೆದ ಬಜೆಟ್ ಅಧಿವೇಶನದಲ್ಲಿ, ಪೇಪರ್‌ಗಳನ್ನು ಪಿಡಿಎಫ್ ಹಾಗೂ ಡಿಜಿಟಲ್ ರೂಪದಲ್ಲಿ ಮಂಡಿಸಲಾಯಿತು.

ಇದನ್ನೂ ಓದಿ:Rozgar Budget 2022: 75800 ಕೋಟಿ ರೂ. ಬಜೆಟ್ ಮಂಡಿಸಿದ ಕೇಜ್ರಿವಾಲ್ ಸರ್ಕಾರ!

ಸಾಫ್ಟ್ ಕಾಪಿ ಬಳಕೆ: "ದೆಹಲಿ ವಿಧಾನಸಭೆಯು ಈಗ ಸಂಪೂರ್ಣವಾಗಿ ಕಾಗದರಹಿತವಾಗಿರುತ್ತದೆ. ಎಲ್ಲಾ ದಾಖಲೆಗಳು ಮತ್ತು ಬಿಲ್‌ಗಳನ್ನು ಇ-ಪೇಪರ್ ರೂಪದಲ್ಲಿ ಮಂಡಿಸಲಾಗುತ್ತದೆ. ವಿಧಾನಸಭೆಯ ಕಲಾಪದಲ್ಲಿ ಬಳಸಲಾದ ಲಕ್ಷಾಂತರ ಪುಟಗಳನ್ನು ಈಗ ಸಾಫ್ಟ್ ಕಾಪಿಯಾಗಿ ಪ್ರಸ್ತುತಪಡಿಸಲಾಗುತ್ತದೆ." ದೆಹಲಿಯ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.

"ಇದು ಅಸೆಂಬ್ಲಿಯನ್ನು ಸ್ಮಾರ್ಟ್ ಮತ್ತು ಪರಿಣಾಮಕಾರಿಯಾಗಿ ಮಾಡುವತ್ತ ಒಂದು ಹೆಜ್ಜೆಯಾಗಿದೆ. ಈ ವೆಬ್ ಆಧಾರಿತ ಪರಿಹಾರವು ಅಧಿಕೃತ ಪ್ರಕ್ರಿಯೆಗಳನ್ನು ವೇಗಗೊಳಿಸಲು ನಮಗೆ ಸಹಾಯ ಮಾಡುತ್ತದೆ, ಅಲ್ಲದೆ ಪ್ರತಿ ಪ್ರಕ್ರಿಯೆಗೆ ಇಲ್ಲಿ ಬಳಸಲಾಗುವ ಟನ್‌ಗಳಷ್ಟು ಕಾಗದವನ್ನು ಉಳಿಸುತ್ತದೆ." ಎಂದು ಸಿಸೋಡಿಯಾ ಹೇಳಿದ್ದಾರೆ.

ಅಲ್ಲದೇ ಯಾಂತ್ರೀಕೃತಗೊಂಡ ಯೋಜನೆಯಡಿ ವಿಧಾನಸಭೆಗೆ ಉತ್ತಮ ವೈ-ಫೈ ಸಂಪರ್ಕ ಕಲ್ಪಿಸಲಾಗಿದ್ದು, ವಿಧಾನಸಭೆಯ ಸದಸ್ಯರು ಅಡೆತಡೆಯಿಲ್ಲದೆ ಕಲಾಪಕ್ಕೆ ಹಾಜರಾಗಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ದೆಹಲಿಯ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರ ತನ್ನ ಎಂಟನೇ ಬಜೆಟನ್ನು ಮಾರ್ಚ್ 26 ರಂದು ಮಂಡಿಸಿತು.

ಇದನ್ನೂ ಓದಿ:ಸಣ್ಣ ಪಕ್ಷವಾಗಿದ್ದರೂ ನಮ್ಮನ್ನು ನೋಡಿ ಬಿಜೆಪಿ ಹೆದರುತ್ತಿದೆ: ಕೇಜ್ರಿವಾಲ್

ದೆಹಲಿ ಬಜೆಟ್‌ ಮಂಡನೆ: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಶುಕ್ರವಾರ 8ನೇ ವಾರ್ಷಿಕ ಬಜೆಟnfnu ಮಂಡಿಸಿದ್ದು, ಉದ್ಯೋಗದ ಮೇಲೆ ಕೇಂದ್ರೀಕರಿಸಿದ್ದಾರೆ. ಇದನ್ನು 'ರೋಜ್‌ಗಾರ್ ಬಜೆಟ್' ಎಂದು ಕರೆದ ಸಿಸೋಡಿಯಾ, ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಜೀವನೋಪಾಯವನ್ನು ಕಳೆದುಕೊಂಡವರಿಗೆ ಉದ್ಯೋಗ, ಆಹಾರ ಮತ್ತು ವ್ಯಾಪಾರದಲ್ಲಿ ಹೆಚ್ಚಿನ ಅವಕಾಶಗಳನ್ನು ಒದಗಿಸುವ ಯೋಜನೆಗಳನ್ನು ದೆಹಲಿ ಸರ್ಕಾರವು ತಂದಿದೆ ಎಂದು ಹೇಳಿದರು.

"ಈ ಅವಧಿಯಲ್ಲಿ ಗೌರವಾನ್ವಿತ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಾರ್ಗದರ್ಶನ ಮತ್ತು ನಾಯಕತ್ವದಲ್ಲಿ ಸಿದ್ಧಪಡಿಸಲಾದ ಕಳೆದ ಏಳು ಬಜೆಟ್‌ಗಳು ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಐತಿಹಾಸಿಕ ಕೆಲಸಗಳನ್ನು ಮಾಡಿರುವುದು ಮಾತ್ರವಲ್ಲದೆ ಇತರ ಹಲವು ರಾಜ್ಯ ಸರ್ಕಾರಗಳಿಗೆ ಸ್ಫೂರ್ತಿ ನೀಡಿವೆ ಎಂದು ಬಜೆಟ್ ಭಾಷಣದಲ್ಲಿ ಸಿಸೋಡಿಯಾ ಹೇಳಿದರು.