ಡೀಸೆಲ್ ವಾಹನ ನಿಷೇಧ ಸೇರಿ ರಾಷ್ಟ್ರ ರಾಜಧಾನಿಯಲ್ಲಿ ಹಲವು ನಿರ್ಬಂಧ ಜಾರಿ!
ದೆಹಲಿಯಲ್ಲಿ ವಾಯಗುಣ ಮಟ್ಟ ಕುಸಿತ ಕಂಡಿದೆ. ದೀಪಾವಳಿ ಹಬ್ಬಕ್ಕೂ ಮುನ್ನವೇ ಈ ಮಾಲಿನ್ಯ ಪ್ರಮಾಣ ಏರಿಕೆಯಾಗಿರುವುದು ಆತಂಕ ಹೆಚ್ಚಿಸಿದೆ. ಇದರ ಪರಿಣಾಮ ದೆಹಲಿಯಲ್ಲಿ ಡೀಸೆಲ್ ಬಸ್ ನಿಷೇಧ ಸೇರಿದಂತೆ ಹಲವು ನಿರ್ಬಂಧಗಳು ಜಾರಿಯಾಗುತ್ತಿದೆ.
ನವದೆಹಲಿ(ಅ.21) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ದೆಹಲಿ ಹಾಗೂ ರಾಷ್ಟ್ರರಾಜಧಾನಿ ವ್ಯಾಪ್ತಿಯೊಳಗೆ ಹಲವು ನಿರ್ಬಂಧಗಳು ಜಾರಿಯಾಗುತ್ತಿದೆ. ವಾಯು ಮಾಲಿನ್ಯ ತಗ್ಗಿಸಿ ಗುಣಮಟ್ಟ ಹೆಚ್ಚಿಸಲು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಪ್ರಮುಖವಾಗಿ ನವೆಂಬರ್ 1 ರಿಂದ ಡೀಸೆಲ್ ಬಸ್‌ಗಳಿಗೆ ನಿರ್ಬಂಧ ಹೇರಲಾಗುತ್ತಿದೆ. ಇನ್ನು ಕಲ್ಲಿದ್ದಲು ಸ್ಟೌ, ಮರದ ಒಲೆಗಳನ್ನು ನಿರ್ಬಂಧಿಸಲಾಗುತ್ತಿದೆ. ಹೊಗೆ ಉಗುಳುವ ಕಾರ್ಖಾನೆಗಳಿಗೆ ಹೊಸ ನೀತಿ ಜಾರಿಗೊಳಿಸಲಾಗುತ್ತಿದೆ.
ದೆಹಲಿಯಲ್ಲಿ ವಾಯುಗುಣಮಟ್ಟ ಕುಸಿದಿದೆ. ಇಂದು ಏರ್ ಕ್ವಾಲಿಟಿ ಇಂಡೆಕ್ಸ್ ಪ್ರಕಾರ ದೆಹಲಿಯಲ್ಲಿನ ವಾಯುಗುಣಮಟ್ಟ ಗಂಭೀರ ಮಟ್ಟಕ್ಕೆ ಕುಸಿದಿದೆ. ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಫೆಬ್ರವರಿ ವರೆಗೆ ದೆಹಲಿಯ ವಾಯುಗುಣಮಟ್ಟ ಸಂಪೂರ್ಣ ಕುಸಿತ ಕಾಣಲಿದೆ. ಆದರೆ ಈ ಬಾರಿ ಅಕ್ಟೋಬರ್ ತಿಂಗಳಲ್ಲೇ ಗಂಭೀರ ಸ್ಥಿತಿಗೆ ತಲುಪಿರುವುದು ಆತಂಕ ಹೆಚ್ಚಿಸಿದೆ. ದೆಹಲಿಯಲ್ಲಿ ವಾಯುಗುಣಮಟ್ಟ ಕುಸಿತದಿಂದ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಹೀಗಾಗಿ ದೆಹಲಿಯಲ್ಲಿ ಕಠಿಣ ನಿರ್ಬಂಧ ಜಾರಿಗೊಳಿಸಲಾಗುತ್ತದೆ.
ನವೆಂಬರ್ 1 ರಿಂದ ಎಲೆಕ್ಟ್ರಿಕ್ ಬಸ್, ಸಿಎನ್‌ಜಿ ಬಸ್ ಹಾಗೂ ಬಿಎಸ್6 ಡೀಸೆಲ್ ಎಂಜಿನ್ ಬಸ್‌ಗಳಿಗೆ ಮಾತ್ರ ಪ್ರವೇಶ ನೀಡಲು ನಿರ್ಧರಿಸಲಾಗಿದೆ. ಡೀಸೆಲ್ ವಾಹನಗಳಿಂದ ದೆಹಲಿಯಲ್ಲಿ ವಾಯು ಮಾಲಿನ್ಯ ಏರಿಕೆಯಾಗುತ್ತಿದೆ. ಇನ್ನು ರಸ್ತೆಯಲ್ಲಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇತ್ತ ವಾಹನ ಸಂಚಾರದಿಂದ ಧೂಳಿನ ಸಮಸ್ಸೆಯೂ ವಾಯುಗುಣಮಟ್ಟವನ್ನೂ ತಗ್ಗಿಸುತ್ತಿದೆ. ಹೀಗಾಗಿ ರಸ್ತೆಗಳಿಗೆ ನೀರು ಸಿಂಪಡಿಸುವ ಮೂಲಕ ಧೂಳು ಕಡಿಮೆ ಮಾಡಲು ನಿರ್ಧರಿಸಲಾಗಿದೆ.
ವಾಯುಗುಣಮಟ್ಟಸೂಚ್ಯಂಕ 401ರಿಂದ 500 ಇದ್ದರೆ ಅತಿ ಗಂಭೀರ ಎನ್ನಿಸಿಕೊಳ್ಳುತ್ತದೆ. ಏರ್ ಕ್ವಾಲಿಟಿ ಇಂಡೆಕ್ಸ್ ಪ್ರಕಾರ ಪ್ರಮಾಣವೂ 0-50 ಇದ್ದರೆ ಉತ್ತಮ, 51-100 ಸಮಾಧಾನಕರ, 101-200 ಅತಿರೇಕವಲ್ಲದ್ದು, 201-300 ಕಳಪೆ, 301-400 ತೀರಾ ಕಳಪೆ, 401-500 ಅತಿ ಗಂಭೀರ ಮಾಲಿನ್ಯ ಎಂದು ಪರಿಗಣಿಸಲಾಗುತ್ತದೆ. ದೆಹಲಿಯಲ್ಲಿ 462 ರಿಂದ 500 ದಾಖಲಾದ ಉದಾಹರಣೆಗಳಿವೆ.
Batla House Encounter: ಗಲ್ಲು ಶಿಕ್ಷೆಯಿಂದ ಪಾರಾದ ಭಯೋತ್ಪಾದಕ ಆರೀಜ್ ಖಾನ್!