Asianet Suvarna News Asianet Suvarna News

ಕೊರೋನಾಕ್ಕೆ ಮತ್ತೊಬ್ಬ ಯುವ ವೈದ್ಯ ಬಲಿ; ಮಹಾಮಾರಿ ಅಟ್ಟಹಾಸಕ್ಕೆ ಕೊನೆ ಎಂದು?

ಕೊರೋನಾಕ್ಕೆ ಬಲಿಯಾದ ವೈದ್ಯ/   ಯುವ ವೈದ್ಯನ ಬಲಿಪಡೆದ ಚೀನಾ ವೈರಸ್/ ಚಿಕಿತ್ಸೆ ಫಲಕಾರಿಯಾಗದೆ ದೆಹಲಿ ಏಮ್ಸ್ ನಲ್ಲಿ ನಿಧನ/ ಬಡ ಮಕ್ಕಳ ಶಾಲಾ ಶುಲ್ಕ ಭರಿಸುತ್ತಿದ್ದ ವೈದ್ಯ

Delhi 25-year-old doctor Vikas Solanki dies after month-long battle with Covid-19 mh
Author
Bengaluru, First Published Sep 15, 2020, 9:28 PM IST

ನವದೆಹಲಿ( ಸೆ. 15) ಕೊರೋನಾ  ವಿರುದ್ಧ ತಿಂಗಳು ಕಾಲ ಹೋರಾಟ ಮಾಡಿದ ವೈದ್ಯ ಕೊನೆಗೂ ಸೋಲು ಕಂಡಿದ್ದಾರೆ.  ದೆಹಲಿಯ ಏಮ್ಸ್ ನಲ್ಲಿ ಎಂಬಿಬಿಎಸ್ ಓದಿದ್ದ ಹರಿಯಾಣದ ಹಿಸ್ಸಾರ್ ಜಿಲ್ಲೆಯ ಡಾ. ವಿಕಾಸ್ ಸೋಲಂಕಿ(25)  ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಝಜ್ಜರ್ ಆಸ್ಪತ್ರೆಯಲ್ಲಿದ್ದ ಅವರ ಆರೋಗ್ಯ ಏರುಪೇರಾದಾಗ ಏಮ್ಸ್ ಗೆ ದಾಖಲು ಮಾಡಲಾಗಿತ್ತು.   ಚಿಕಿತ್ಸೆ ಫಲಕಾರಿಯಾಗದೆ ಸೋಲಂಕಿ ಸೋಮವಾರ ಮುಂಜಾನೆ ಮೃತಪ್ಪಟ್ಟರು ಎಂದು  ಡಾ. ಅಜಯ್ ಮೋಹನ್  ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕೊರೋನಾಕ್ಕೆ ಬಲಿಯಾದ ವೈದ್ಯರು ಎಷ್ಟು?

ಆಸ್ತಮಾದ ಗುಣ ಲಕ್ಷಣ ಹೊಂದಿದ್ದ ವೈದ್ಯ ಸೋಲಂಕಿಗೆ ಕೊರೋನಾ ಅಟ್ಯಾಕ್ ಮಾಡಿತ್ತು.  ಅವರ ಒಂದೊಂದೆ ಅಂಗಾಂಗಗಳು ಕೆಲಸ ಮಾಡುವುದನ್ನು ನಿಲ್ಲಿಸಿದವು. ಡಯಾಲೀಸಿಸ್ ಮಾಡಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು.  ಅಂತಿಮವಾಗಿ ಶ್ವಾಸಕೋಶಗಳು ತಮ್ಮ ಶಕ್ತಿ ಕಳೆದುಕೊಂಡ ಕಾರಣ ಯುವ ವೈದ್ಯರೊಬ್ಬರನ್ನು ಕಳೆದುಕೊಳ್ಳಬೇಕಾಯಿತು ಎಂದು ಅಜಯ್ ಮೋಹನ್ ತಿಳಿಸುತ್ತಾರೆ.

ವೈದ್ಯ ಅಧ್ಯಯನ ಮಾಡುವಾಗ ಟಾಪರ್ ಆಗಿದ್ದ ಸೋಲಂಕಿ ಕಳೆದುಕೊಂಡಿದ್ದಕ್ಕೆ ಸಹೋದ್ಯೋಗಿಗಳು ಮತ್ತು ಸ್ನೇಹಿತರು ವಿಷಾದ ವ್ಯಕ್ತಪಡಿಸಿದ್ದಾರೆ.  ಬಡ ಶಾಲಾ ಮಕ್ಕಳ ಶುಲ್ಕ ಭರಿಸುವ ಕೆಲಸವನ್ನು ಸೋಲಂಕಿ ಮಾಡಿದ್ದರು. ಸರ್ಕಾರ ಶಿಕ್ಷಣ ನೀತಿಯಲ್ಲಿ ಮಹತ್ವದ ಬದಲಾವಣೆ ತರಬೇಕು, ಶುಲ್ಕ ನೀತಿ ಬದಲಾಗಬೇಕು ಎಂದು ಅವರು ಬಯಸುತ್ತಿದ್ದರು.

Follow Us:
Download App:
  • android
  • ios