Asianet Suvarna News Asianet Suvarna News

ಕೊರೋನಾಗೆ ಸೋಂಕಿಗೆ ಇಬ್ಬರು ವೈದ್ಯರು ಬಲಿ

ರಾಜ್ಯದ ಇಬ್ಬರು ವೈದ್ಯರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ತೀವ್ರ ಉಸಿರಾಟದ ತೊಮದರೆಯಿಂದ ಸಾವಿಗೀಡಾಗಿದ್ದಾರೆ. 

2 Doctors Of Karnataka Dies From COVID 19
Author
Bengaluru, First Published Sep 9, 2020, 7:44 AM IST

ಕುಣಿಗಲ್‌/ಗಂಗಾವತಿ (ಸೆ.09) : ಕೊರೋನಾ ಸೋಂಕಿಗೆ ವೈದ್ಯರಿಬ್ಬರು ಮಂಗಳವಾರ ಬಲಿಯಾಗಿರುವ ಘಟನೆ ತುಮಕೂರಿನ ಕುಣಿಗಲ್‌ ಹಾಗೂ ಕೊಪ್ಪಳದ ಗಂಗಾವತಿಯಲ್ಲಿ ನಡೆದಿದೆ.

ಕುಣಿಗಲ್‌ನ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ದೇವರಾಜ್‌(37) ಅವರಿಗೆ 5 ದಿನಗಳ ಹಿಂದೆ ಕೊರೋನಾ ಸೋಂಕು ಕಾಣಿಸಿಕೊಂಡು ತಾಲೂಕಿನ ಚಿನ್ನತಿಮ್ಮನಪಾಳ್ಯದ ತಮ್ಮ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಕರ್ನಾಟಕದಲ್ಲಿ ಮಂಗಳವಾರ ಕೂಡ ಕೊರೋನಾ ಅಬ್ಬರ: ಗುಣಮುಖ ಸಂಖ್ಯೆಯಲ್ಲೂ ಹೆಚ್ಚಳ .

ಗಂಗಾವತಿಯ ಖ್ಯಾತ ಕಿವಿ ಮತ್ತು ಮೂಗು ಚಿಕಿತ್ಸೆ ತಜ್ಞ ಡಾ.ಅಮರೇಶ ಪಾಟೀಲ್‌(43) ಕೊರೋನಾ ಬಂದು ಹುಬ್ಬಳ್ಳಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾದರಿಂದ ಅವರನ್ನು ಹೆಲಿಕಾಪ್ಟರ್‌ ಮೂಲಕ ಹೈದರಾಬಾದ್‌ಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಈಗಾಗಲೇ ದೇಶದಲ್ಲಿ ಕೊರೋನಾ ಸೋಂಕಿತರ ಸಮಖ್ಯೆ ಅರ್ಧ ಕೋಟಿಗೂ ಮೀರಿದ್ದು, ಸಾವಿನ ಸಂಖ್ಯೆಯೂ ಕೂಡ ದಿನ ದಿನಕ್ಕೂ ಹೆಚ್ಚಳವಾಗುತ್ತಲೇ ಇದೆ. ಇನ್ನು ರಾಜ್ಯದಲ್ಲಿಯೂ ಕೂಡ ಸೋಂಕಿತರ ಸಂಖ್ಯೆ ಲಕ್ಷದ ಗಡಿ ದಾಟಿದೆ. ಇನ್ನು ಸಾವಿನ ಸಂಖ್ಯೆಯೂ ಕೂಡ ಹೆಚ್ಚಳವಾಗುತ್ತಲೇ ಇದೆ. ಇದೀಗ ಇಬ್ಬರು ವೈದ್ಯರು ಕೊರೋನಾದಿಂದ ಮೃತಪಟ್ಟಿದ್ದಾರೆ. 

Follow Us:
Download App:
  • android
  • ios