ಜಡ್ಜ್‌ ನೇಮಕ ವಿಳಂಬ: ಕೇಂದ್ರದ ವಿರುದ್ಧ ಮತ್ತೆ ಸುಪ್ರೀಂಕೋರ್ಟ್‌ ಗರಂ

ಹೈಕೋರ್ಟ್‌ಗಳಿಗೆ ನ್ಯಾಯಾಧೀಶರ ನೇಮಕ ಸೇರಿದಂತೆ ಕೊಲಿಜಿಯಂ ಮಾಡಿದ್ದ 70 ಶಿಫಾರಸುಗಳನ್ನು 10 ತಿಂಗಳಿಂದ ಇತ್ಯರ್ಥ ಮಾಡದೇ ಹಾಗೆ ಉಳಿಸಿಕೊಂಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿರುವ ಸುಪ್ರೀಂಕೋರ್ಟ್‌(Supreme Court), ಈ ಧೋರಣೆ ನೋಡಿಕೊಂಡು ಸುಮ್ಮನೆ ಇರಲಾಗದು ಎಂದು ಎಚ್ಚರಿಕೆ ನೀಡಿದೆ.

Delay in appointment of judges Supreme Court again warned central govt akb

ನವದೆಹಲಿ: ಹೈಕೋರ್ಟ್‌ಗಳಿಗೆ ನ್ಯಾಯಾಧೀಶರ ನೇಮಕ ಸೇರಿದಂತೆ ಕೊಲಿಜಿಯಂ ಮಾಡಿದ್ದ 70 ಶಿಫಾರಸುಗಳನ್ನು 10 ತಿಂಗಳಿಂದ ಇತ್ಯರ್ಥ ಮಾಡದೇ ಹಾಗೆ ಉಳಿಸಿಕೊಂಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿರುವ ಸುಪ್ರೀಂಕೋರ್ಟ್‌(Supreme Court), ಈ ಧೋರಣೆ ನೋಡಿಕೊಂಡು ಸುಮ್ಮನೆ ಇರಲಾಗದು ಎಂದು ಎಚ್ಚರಿಕೆ ನೀಡಿದೆ.

ಈ ಕುರಿತು ಮಂಗಳವಾರ ಪ್ರಸ್ತಾಪಿಸಿದ ನ್ಯಾ. ಸಂಜಯ್‌ ಕಿಶನ್‌ ಕೌಲ್‌ (Sanjay Kishan Kaul) ಮತ್ತು ನ್ಯಾ. ಸುಧಾನ್ಷು ಧುಲಿಯಾ (Sudhanshu Dhulia)  ಅವರನ್ನೊಳಗೊಂಡ ಪೀಠ, ‘ಕಳೆದ ವಾರ 80 ಶಿಫಾರಸುಗಳು ಬಾಕಿ ಇದ್ದವು. ಈ ವಾರ ಅದು 70ಕ್ಕೆ ಇಳಿದಿದೆ. ಈ ಪೈಕಿ 26 ನ್ಯಾಯಾಧೀಶರ ವರ್ಗ, 7 ಪುನರಾವರ್ತಿತ ಶಿಫಾರಸು, 9 ಕೊಲಿಜಿಯಂಗೆ ಮರಳಿ ಕಳುಹಿಸದೇ ಬಾಕಿ ಉಳಿಸಿಕೊಂಡಿರುವುದು, ಒಂದು ಶಿಫಾರಸು ಅತ್ಯಂತ ಸೂಕ್ಷ್ಮ ಹೈಕೋರ್ಟ್‌ ಪೀಠಕ್ಕೆ (High Court bench) ನೇಮಕಕ್ಕೆ ಸಂಬಂಧಿಸಿದ್ದು. ಇವೆಲ್ಲಾ ಕಳೆದ ನವೆಂಬರ್‌ನಿಂದ ಹಾಗೆಯೇ ಬಾಕಿ ಉಳಿದಿದೆ’.

ಭಾರತ ಸರ್ಕಾರ ವಿರುದ್ಧ ಕೆನಡಾದಲ್ಲಿ ಖಲಿಸ್ತಾನಿಗಳ ಪ್ರತಿಭಟನೆ: ಭಾರತದ ಧ್ವಜ, ಮೋದಿ ಫೋಟೋಕ್ಕೆ ಬೆಂಕಿ

‘ಈ ವಿಷಯವನ್ನು ನಾವು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿ, ಪ್ರತಿ 10 ದಿನಕ್ಕೊಮ್ಮೆ ಮುಂದಿನ ಕ್ರಮಕ್ಕೆ ಒತ್ತಾಯಿಸುತ್ತಿದ್ದೇವೆ. ಆದರೂ ಸರ್ಕಾರ ಈ ಬಗ್ಗೆ ವಿಳಂಬ ಧೋರಣೆ ತೋರಿಸುತ್ತಿದೆ. ಸರ್ಕಾರದ ಧೋರಣೆಯಿಂದ, ನ್ಯಾಯಾಧೀಶರಾಗಿ ನೇಮಕವಾಗಲು ಸಮ್ಮತಿ ಸೂಚಿಸಿದ ಕೆಲವು ಒಳ್ಳೆಯ ವ್ಯಕ್ತಿಗಳು ಬೇಸರದಿಂದ ತಾವು ನೀಡಿದ್ದ ಅನುಮತಿ ಹಿಂದಕ್ಕೆ ಪಡೆದಿದ್ದಾರೆ. ಇದು ನಿಜಕ್ಕೂ ಆತಂಕದ ವಿಷಯ. ಈ ವಿಷಯದ ಕುರಿತಂತೆ ನಿಮ್ಮ ಕಚೇರಿಯನ್ನು ಬಳಸಿಕೊಂಡು ಮುಂದಿನ ಕ್ರಮ ಕೈಗೊಳ್ಳಿ’ ಎಂದು ಅಟಾರ್ನಿ ಜನರಲ್‌ ವೆಂಕಟರಮಣಿ (Attorney General Venkataramani) ಅವರಿಗೆ ಸೂಚಿಸಿತು.

ಈ ವೇಳೆ ಅಟಾರ್ನಿ ಜನರಲ್‌ ಅವರು ಒಂದು ವಾರ ಸಮಯ ಕೇಳಿದರು. ಇದಕ್ಕೆ ಸಮ್ಮತಿಸಿದ ನ್ಯಾಯಪೀಠ, ಈ ಬಾರಿ ನೀವು ಅಲ್ಪಾವಧಿ ಸಮಯ ಕೇಳಿದ್ದೀರಿ. ಹೀಗಾಗಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಆದರೆ ಮುಂದಿನ ಬಾರಿ ನಾವು ಸುಮ್ಮನಿರಲ್ಲ ಎಂದು ನ್ಯಾಯಪೀಠ ಎಚ್ಚರಿಸಿತು.

ಫ್ಯಾಷನ್‌ ಲೋಕದಲ್ಲಿ ಹವಾ ಸೃಷ್ಟಿಸಿದ ಪುಟಾಣಿ ಮಾಡೆಲ್‌ಗಳ ಸುಂದರ ಫೋಟೋಗಳು

ಗಿಲ್ಗಿಟ್‌ ಬಾಲ್ಟಿಸ್ತಾನ್‌ಗೆ ಪಾಕ್‌ನ ಅಮೆರಿಕ ರಾಯಭಾರಿ ಭೇಟಿ, ವಿವಾದ

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ವಿವಾದಿತ ಪ್ರದೇಶವಾದ ಗಿಲ್ಗಿಟ್‌ ಬಾಲ್ಟಿಸ್ತಾನ್‌ ಪ್ರದೇಶಕ್ಕೆ ಪಾಕಿಸ್ತಾನದ ಅಮೆರಿಕ ರಾಯಭಾರಿ ಡೊನಾಲ್ಡ್‌ ಬ್ಲೋಮ್‌ ಭೇಟಿ ಕೊಟ್ಟಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ಪ್ರದೇಶವನ್ನು ಪಾಕಿಸ್ತಾನ ತನ್ನದೆಂದು ವಾದಿಸುತ್ತಿದೆ. ಇಂತಹ ಪ್ರದೇಶಕ್ಕೆ ಅಮೆರಿಕ ಭೇಟಿ ನೀಡುವುದು ಈ ವಾದಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗುತ್ತದೆ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಭಾರತದ ಅಮೆರಿಕ ರಾಯಭಾರಿ ಎರಿಕ್‌ ಗಾರ್ಸೆಟ್ಟಿ, ‘ಗಿಲ್ಗಿಟ್‌ ಬಾಲ್ಟಿಸ್ತಾನಗೆ ಭೇಟಿ ನೀಡಬಾರದು ಎಂದು ಬ್ಲೋಮ್‌ಗೆ ಹೇಳಲಾಗುದು. ಇದಕ್ಕೂ ಮೊದಲು ಕಾಶ್ಮೀರದಲ್ಲಿ ನಡೆದ ಜಿ20 ಸಭೆಯಲ್ಲಿ ನಮ್ಮ ನಿಯೋಗದಲ್ಲಿ ಅವರು ಜೊತೆಗಿದ್ದರು’ ಎಂದು ಹೇಳಿದ್ದಾರೆ.

ಮಹಿಳಾ ಮೀಸಲು ಬಿಲ್‌ ರಕ್ಷಾ ಬಂಧನಕ್ಕೆ ನನ್ನ ಗಿಫ್ಟ್‌: ಪ್ರಧಾನಿ ಮೋದಿ

Latest Videos
Follow Us:
Download App:
  • android
  • ios