ನವದೆಹಲಿ(ಸೆ.29): ಫ್ರಾನ್ಸ್‌ನಿಂದ 59000 ಕೋಟಿ ರು. ವೆಚ್ಚದಲ್ಲಿ 36 ರಫೇಲ್‌ ಯುದ್ಧ ವಿಮಾನ ಖರೀದಿಯಾಗಿ, 5 ವಿಮಾನ ಭಾರತಕ್ಕೆ ಬಂದರೂ, ಡಸಾಲ್ಟ್‌ ಕಂಪನಿ ತನ್ನ ಆಫ್‌ಸೆಟ್‌ ನಿಯಮ ಪೂರೈಸಿಲ್ಲ ಎಂಬ ಸಿಎಜಿ ವರದಿ ಬೆನ್ನಲ್ಲೇ, ರಫೇಲ್‌ನಂಥ ರಕ್ಷಣಾ ವ್ಯವಹಾರಗಳಿಂದ ಆಫ್‌ಸೆಟ್‌ ನಿಯಮವನ್ನೇ ಕೈಬಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಅದು ರಕ್ಷಣಾ ಖರೀದಿ ನಿಯಮಗಳಿಗೇ ಬದಲಾವಣೆ ತಂದಿದೆ.

ರಾಫೆಲ್ ಯುದ್ಧ ವಿಮಾನದ ತಂತ್ರಜ್ಞಾನ, ಎಂಜಿನ್ ನೆರವಿಗೆ HAL ಜೊತೆ ಫ್ರಾನ್ಸ್ ಒಪ್ಪಂದ!

ಮುಂದಿನ ದಿನಗಳಲ್ಲಿ ಸರ್ಕಾರ- ಸರ್ಕಾರಗಳ ನಡುವೆ, ಅಂತರ್‌ ಸರ್ಕಾರದ ನಡುವೆ ಮತ್ತು ಒಂದೇ ಕಂಪನಿಯಿಂದ ರಕ್ಷಣಾ ಉಪಕರಣ ಖರೀದಿ ವೇಳೆ ಆಫ್‌ಸೆಟ್‌ ನಿಯಮ ಇರುವುದಿಲ್ಲ. ಉಳಿದ ಖರೀದಿಗಳಿಗೆ ಹಳೆ ನಿಯಮ ಮುಂದುವರೆಯುತ್ತದೆ ಎಂದು ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಸೋಮವಾರ ಪ್ರಕಟಿಸಿದ್ದಾರೆ. ಈ ನಿಯಮಗಳು ಯಾವುದೇ ಉದ್ದೇಶವನ್ನು ಸಾಧಿಸುತ್ತಿಲ್ಲ. ಜೊತೆಗೆ ಖರೀದಿಗೆ ಅಡ್ಡಿಯಾಗಿವೆ ಎಂದು ಬದಲಾವಣೆಗೆ ಸರ್ಕಾರ ಕಾರಣ ನೀಡಿದೆ. ಸರ್ಕಾರದ ಈ ನಿರ್ಧಾರ ಮತ್ತೊಮ್ಮೆ ವಿಪಕ್ಷಗಳ ಕಟು ಟೀಕೆಗೆ ಗುರಿಯಾಗುವ ಎಲ್ಲಾ ಸಾಧ್ಯತೆಗಳಿವೆ.

ವಾರಾಣಸಿಯ ಶಿವಾಂಗಿ ರಫೇಲ್‌ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್‌!

ಭಾರತದ ತನ್ನ ರಕ್ಷಣಾ ಖರೀದಿ ವೇಳೆ ವಿದೇಶಿ ಕಂಪನಿಗಳೊಂದಿಗೆ ಆಫ್‌ಸೆಟ್‌ ನಿಯಮಗಳನ್ನು ಅಡಕ ಮಾಡಿರುತ್ತದೆ. ಅದರನ್ವಯ, ಒಟ್ಟು ರಕ್ಷಣಾ ಒಪ್ಪಂದದ ಶೇ.30 ಅಥವಾ ಶೇ.50ರಷ್ಟುಹಣವನ್ನು ವಿದೇಶಿ ಕಂಪನಿಗಳು ಭಾರತದಲ್ಲೇ ಹೂಡಿಕೆ ಮಾಡುವ ಮೂಲಕ ದೇಶೀಯವಾಗಿ ರಕ್ಷಣಾ ಸಲಕರಣೆಗೆ ಉತ್ಪಾದನೆಗೆ ಉತ್ತೇಜನ ನೀಡಬೇಕಾಗುತ್ತದೆ. ಜೊತೆಗೆ ತಂತ್ರಜ್ಞಾನ ವರ್ಗಾವಣೆ ಮಾಡಬೇಕಾಗುತ್ತದೆ. ರಫೇಲ್‌ ಖರೀದಿಯಲ್ಲಿ ಆಫ್‌ಸೆಟ್‌ ನಿಯಮವನ್ನು ಶೇ.50ರಷ್ಟುಎಂದು ನಿಗದಿ ಮಾಡಲಾಗಿತ್ತು.