ನವದೆಹಲಿ(ಸೆ.24): ಇತ್ತೀಚೆಗಷ್ಟೇ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದ ಅತ್ಯಾಧುನಿಕ ರಫೇಲ್‌ ಯುದ್ಧ ವಿಮಾನವನ್ನು ಚಲಾಯಿಸುವ ಮೊದಲ ಮಹಿಳಾ ಪೈಲಟ್‌ ಹೆಸರು ಬಹಿರಂಗವಾಗಿದ್ದು, ವಾರಣಾಸಿಯ ಫ್ಲೈಟ್‌ ಲೆ| ಶಿವಾಂಗಿ ಸಿಂಗ್‌ ಅವರಿಗೆ ಅವಕಾಶ ಒದಗಿ ಬಂದಿದೆ.

ಭಾರತೀಯ ವಾಯುಪಡೆ ಬತ್ತಳಿಕೆಗೆ ರಫೇಲ್‌ ಎಂಟ್ರಿ!

ಸದ್ಯ ವಾಯುಪಡೆಯ ಹಳೆಯ ಯುದ್ಧ ವಿಮಾನಗಳಲ್ಲಿ ಒಂದಾಗಿ ಮಿಗ್‌-21 ಬೈಸನ್‌ ಅನ್ನು ಚಲಾಯಿಸುತ್ತಿರುವ ಶಿವಾಂಗಿ, ಇನ್ನು ಮುಂದೆ ಅಂಬಾಲದ ‘ಗೋಲ್ಡನ್‌ ಆ್ಯರೋಸ್‌’ ವಾಯುನೆಲೆಯಲ್ಲಿರುವ ವಾಯುಸೇನೆಯ 17ನೇ ಸ್ಕ್ವಾಡ್ರನ್‌ನ ರಫೇಲ್‌ ಯುದ್ಧ ವಿಮಾನಗಳನ್ನು ಚಲಾಯಿಸಲಿದ್ದಾರೆ.

ಭಾರತದ ಮನವಿಗೆ ಸ್ಪಂದಿಸಿದ ರಷ್ಯಾ; ಪಾಕಿಸ್ತಾನಕ್ಕಿಲ್ಲ ಶಸ್ತ್ರಾಸ್ರ್ರ!

2016ರಲ್ಲಿ ವಾಯುಸೇನೆಗೆ ಸೇರಿದ್ದ ಶಿವಾಂಗಿ, ಅಭಿನಂದನ್‌ ವರ್ತಮಾನ್‌ ಜತೆಯೂ ಕಾರ್ಯ ನಿರ್ವಹಿಸಿದ್ದರು.