ನವದೆಹಲಿ(ಸೆ.25): ರಾಫೆಲ್ ಯುದ್ಧ ವಿಮಾನ ಭಾರತಕ್ಕೆ ಆಗಮನವನ್ನು ಎಲ್ಲರೂ ಸಂಭ್ರಮಿಸಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನದ ಯುದ್ಧ ವಿಮಾನ, ಭಾರತ-ಚೀನಾ ಗಡಿ ಬಿಕ್ಕಟ್ಟಿನ ಬೆನ್ನಲ್ಲೇ ಸೇನೆ ಸೇರಿಕೊಂಡಿರುವುದು ಭಾರತದ ಆತ್ಮವಿಶ್ವಾಸ ಹೆಚ್ಚಿಸಿದೆ. ಇದೀಗ ಕೇಂದ್ರದ ಆಡಿಟರ್ ಎತ್ತಿದ ಕೆಲ ಪ್ರಶ್ನಗಳಿಗೂ ರಾಫೆಲ್ ಡೀಲ್‌ನಲ್ಲೇ ಉತ್ತರ ಸಿಕ್ಕಿದೆ.

ವಾರಾಣಸಿಯ ಶಿವಾಂಗಿ ರಫೇಲ್‌ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್‌!.

ರಾಫೆಲ್ ಅತ್ಯಾಧುನಿಕ ತಂತ್ರಜ್ಞಾನದ ಯುದ್ಧ ವಿಮಾನ, ಇದರ ಎಂಜಿನ್ ಹಾಗೂ ತಂತ್ರಜ್ಞಾನಕ್ಕೆ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾದರೆ ನಮ್ಮ ಮುಂದಿರುವ ಮಾರ್ಗಗಳೇನು ಅನ್ನೋ ಪ್ರಶ್ನೆ ಎದ್ದಿತ್ತು. ಆದರೆ ರಾಫೆಲ್ ಡೀಲ್‌ನಲ್ಲೇ ಈ ಕುರಿತು ಸ್ಪಷ್ಟವಾಗಿ ಹೇಳಲಾಗಿದೆ. ಫ್ರಾನ್ಸ್ ರಾಫೆಲ್ ಉತ್ಪಾದನಾ ಸಂಸ್ಥೆಯಾದ ಸಫ್ರನ್ ಜೊತೆ ಭಾರತದ DRDO ಮಾತುಕತೆ ನಡೆಸಿದೆ. ಇಷ್ಟೇ ಅಲ್ಲ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(HAL) ಜೊತೆ ಕೈಜೋಡಿಸಿದೆ.

ಭಾರತೀಯ ವಾಯುಪಡೆ ಬತ್ತಳಿಕೆಗೆ ರಫೇಲ್‌ ಎಂಟ್ರಿ!

ರಾಫೆಲ್ ಯುದ್ಧ ವಿಮಾನದಲ್ಲಿ ಎದುರಾಗುವ ತಾಂತ್ರಿಕ ದೋಷ, ಎಂಜಿನ್ ಸಮಸ್ಯೆಗಳಿಗೆ ಫ್ರಾನ್ಸ್ ಸದಾ ನೆರವು ನೀಡಲಿದೆ. ಇಷ್ಟೇ ಅಲ್ಲ ಈ ಕುರಿತು ತಂತ್ರಜ್ಞಾನ ಹಾಗೂ ಎಂಜಿನ್ ಮಾಹಿತಿಯನ್ನು ಭಾರತದ HAL ಸಂಸ್ಥೆಗೆ ನೀಡಲಿದೆ. ಸದ್ಯ HAL ಸಂಸ್ಥೆಯಲ್ಲಿ ಲೋ ಲೆವಲ್ ಥ್ರಸ್ಟ್ ಎಂಜಿನ್, ಫೈಟರ್ ಜೆಟ್, ಹೆಲಿಕಾಪ್ಟರ್,   ಲಘು ಯುದ್ಧವಿಮಾನ ನಿರ್ಮಾಣ ಮಾಡುತ್ತಿದೆ.

ಮಾತುಕತೆಗೂ ಮುನ್ನ ಭಾರತ ವಶಪಡಿಸಿಕೊಂಡ ಪ್ರದೇಶದಿಂದ ಹಿಂದೆ ಸರಿಯಲಿ: ಚೀನಾ!

ರಾಫೆಲ್ ಹೈ ಎಂಡ್ ಫೈಟರ್ ಜೆಟ್ ಎಂಜಿನ್ ಆಗಿರುವುದರಿಂದ ಇದರ ಎಂಜಿನ್ ವಿಶೇಷತೆ, ತಾಂತ್ರಿಕತೆಗಳು ಭಿನ್ನವಾಗಿದೆ. ಈ ಕುರಿತು ಫ್ರಾನ್ಸ್ HALಗೆ ನೆರವು ನೀಡಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ HAL ಹಾಗೂ DRDO ಜಂಟಿಯಾಗಿ ರಾಫೆಲ್ ಎಂಜಿನ್ ಹಾಗೂ ತಂತ್ರಜ್ಞಾನವನ್ನು ನಿರ್ವಹಣೆ ಮಾಡಲಿದೆ.