ಭಾರತ ವಾಯುಸೇನೆಗೆ ನೂತನ ಮುಖ್ಯಸ್ಥರ ಆಯ್ಕೆ IAF ಮುಖ್ಯಸ್ಥ RKS ಬದೌರಿಯಾ ಸೆಪ್ಟೆಂಬರ್ 20ಕ್ಕೆ ನಿವೃತ್ತಿ ನೂತನ ಮುಖ್ಯಸ್ಥರಾಗಿ ಏರ್ ಮಾರ್ಶಲ್  ವಿಆರ್ ಚೌಧರಿ ಆಯ್ಕೆ   

ನವದೆಹಲಿ(ಸೆ.30); ಭಾರತೀಯ ವಾಯುಸೇನೆ(IAF) ಮುಂದಿನ ಮುಖ್ಯಸ್ಥರಾಗಿ ಏರ್ ಮಾರ್ಶಲ್ ವಿಆರ್ ಚೌಧರಿ ಆಯ್ಕೆಯಾಗಿದ್ದಾರೆ. ಇದೇ ತಿಂಗಳ ಅಂತ್ಯದಲ್ಲಿ ವಾಯುಸೇನೆ ಮುಖ್ಯಸ್ಥರ ಆರ್‌ಕೆಎಸ್ ಬದೌರಿಯಾ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಹೀಗಾಗಿ ರಕ್ಷಣಾ ಇಲಾಖೆ ನೂತನ ಮುಖ್ಯಸ್ಥರ ಆಯ್ಕೆ ಮಾಡಿದೆ.

Scroll to load tweet…

ರಾಷ್ಟ್ರೀಯ ಹೆದ್ದಾರಿಯಲ್ಲೇ IAF ತುರ್ತು ಭೂಸ್ವರ್ಶ ಏರ್‌ಸ್ಟ್ರಿಪ್‌ ಉದ್ಘಾಟನೆ; ಭಾರತದ ಪ್ರಯತ್ನಕ್ಕೆ ಮೆಚ್ಚುಗೆ!

ಸೆಪ್ಟೆಂಬರ್ 30 ರಂದು ಆರ್‌ಕೆಎಸ್ ಬದೌರಿಯಾ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಅದೇ ದಿನ ಭಾರತೀಯ ವಾಯುಸೇನೆ ನೂತನ ಮುಖ್ಯಸ್ಥರಾಗಿ ವಿಆರ್ ಚೌಧರಿ ಅಧಿಕಾರ ಸ್ವೀಕರಿಸಲಿದ್ದಾರೆ. ವಾಯುಪಡೆಯ 27ನೇ ಮುಖ್ಯಸ್ಥರಾಗಿ ಚೌಧರಿ ಅಧಿಕಾರ ಸ್ವೀಕರಿಸಲಿದ್ದಾರೆ.

ಬೆಂಗಳೂರಿನ ಆಗಸದಲ್ಲಿ ತೇಜಸ್‌ Mk1 ಯುದ್ಧ ವಿಮಾನ ಹಾರಿಸಿದ IAF ಮುಖ್ಯಸ್ಥ!

ಭಾರತೀಯ ವಾಯುಸೇನೆ ನೂತನ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ವಿಆರ್ ಚೌಧರಿ ಡಿಸೆಂಬರ್ 29, 1982ರಲ್ಲಿ ವಾಯುಪಡೆಯಲ ಫೈಟರ್ ಸ್ಟ್ರೀಮ್‌ಗೆ ನಿಯೋಜನೆಗೊಂಡರು. ಸದ್ಯ ಎರ್ ಮಾರ್ಶಲ್ ವಿಆರ್ ಚೌಧರಿ ವಾಯುಪಡೆಯ ವೈಸ್ ಚೀಫ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಸಿಂಗಾಪುರದಿದ ಆಕ್ಸಿಜನ್ ಟ್ಯಾಂಕ್ ಏರ್‌ಲಿಫ್ಟ್ ಮಾಡಿದ IAF ಏರ್‌ಕ್ರಾಫ್ಟ್!

ಏರ್ ಮಾರ್ಶಲ್ ವಿಆರ್ ಚೌಧರಿ ವಾಯುಪಡೆಯ ಪರಮ ವಿಶಿಷ್ಟ ಸೇವಾ ಪದಕ(PVSM), ಅತಿ ವಿಶಿಷ್ಠ ಸೇವಾ ಪದಕ (AVSM) ಹಾಗೂ ವಾಯುಸೇನಾ ಪದಕ(VM)ಕ್ಕೆ ಭಾಜನರಾಗಿದ್ದಾರೆ.

ಚೌಧರಿ ಸಂಪೂರ್ಣ ಹೆಸರು ವಿವೇಕ್ ರಾಮ್ ಚೌಧರಿ. ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹಳೆ ವಿದ್ಯಾರ್ಥಿಯಾಗಿರುವ ಚೌಧರಿ, ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿನಿಂದ ಪದವಿ ಪಡೆದಿದ್ದಾರೆ.