ನಾನೂ ಖಿನ್ನತೆಗೆ ಜಾರಿದ್ದೆ... ಮಕ್ಕಳಿಗೆ ಪರೀಕ್ಷೆಯ ಟಿಪ್ಸ್ ಕೊಟ್ಟ ದೀಪಿಕಾ ಪಡುಕೋಣೆ: ಪಿಎಂ ಮೋದಿ ಶ್ಲಾಘನೆ
ಪರೀಕ್ಷೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪರೀಕ್ಷೆ ಪೇ ಚರ್ಚಾ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ ಮಾತನಾಡಿದ್ದು, ಅದರಲ್ಲಿ ಅವರು ಏನು ಹೇಳಿದ್ದಾರೆ ನೋಡಿ..

ಪರೀಕ್ಷೆ ಎಂದರೆ ಹಲವು ಮಕ್ಕಳಲ್ಲಿ ಸಹಜ ಭಯ ಕಾಡುತ್ತದೆ. ಎಷ್ಟೋ ಮಕ್ಕಳು ಖಿನ್ನತೆಗೂ ಒಳಗಾಗುವುದು ಇದೆ. ಇದೇ ಕಾರಣಕ್ಕೆ ಪರೀಕ್ಷೆ ಎಂದರೆ ಭಯವಲ್ಲ, ಅದು ಖುಷಿಯ ಒಂದು ಘಟ್ಟ ಎಂದು ಮಕ್ಕಳಿಗೆ ತಿಳಿಹೇಳುವ ನಿಮಿತ್ತ, ಪ್ರತಿ ವರ್ಷ ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಪರೀಕ್ಷಾ ಪೆ ಚರ್ಚಾ’ ನಡೆಸುತ್ತಾರೆ. ಕಳೆದ ಎಂಟು ವರ್ಷಗಳಿಂದ ಇದನ್ನು ನಡೆಸುತ್ತಿದ್ದು, ಇದರ ಎಂಟನೇ ಆವೃತ್ತಿ ನಿನ್ನೆ ಭಾನುವಾರ ನಡೆಯಿತು. ಈ ಕಾರ್ಯಕ್ರಮದಲ್ಲಿ ನಟಿ ದೀಪಿಕಾ ಪಡುಕೋಣೆಯವರ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ ಅವರ ವಿಡಿಯೋ ಕೂಡ ಈಗ ವೈರಲ್ ಆಗಿದೆ. ಇದರಲ್ಲಿ ದೀಪಿಕಾ ಅವರು ತಾವು ಪರೀಕ್ಷೆಯ ಒತ್ತಡದಿಂದ ಹೇಗೆ ಖಿನ್ನತೆ ಎದುರಿಸಿದ್ದೆ, ಕೊನೆಗೆ ಹೇಗೆ ಯಶಸ್ಸು ಕಂಡೆ ಎನ್ನುವುದನ್ನು ಹೇಳುವ ಮೂಲಕ, ಪರೀಕ್ಷೆ ಎನ್ನುವುದು ಒತ್ತಡವಲ್ಲ ಎಂಬ ಬಗ್ಗೆ ತಿಳಿಸಿದ್ದಾರೆ.
ಈ ವಿಡಿಯೋದಲ್ಲಿ ದೀಪಿಕಾ ಅವರು, “ನಾನು ಶಾಲೆಗೆ ಹೋಗುವ ಸಂದರ್ಭದಲ್ಲಿ ತುಂಬಾ ತುಂಟಿಯಾಗಿದ್ದೆ. ಸೋಫಾ , ಮೇಜು, ಕುರ್ಚಿಗಳ ಮೇಲೆಲ್ಲಾ ಜಿಗಿದಾಡುತ್ತಿದ್ದೆ. ಆದರೆ ಪರೀಕ್ಷೆಯ ಸಮಯದಲ್ಲಿ ತುಂಬಾ ಒತ್ತಡಕ್ಕೆ ಒಳಗಾಗುತ್ತಿದ್ದೆ. ಗಣಿತದಲ್ಲಿ ತುಂಬಾ ವೀಕ್ ಇದ್ದೆ. ಒಮ್ಮೆ ತಲೆ ತಿರುಗಿ ಕೂಡ ಬಿದ್ದುಬಿಟ್ಟಿದ್ದೆ“ ಎಂದಿರುವ ದೀಪಿಕಾ ಪಡುಕೋಣೆ, ಭಾವನೆಗಳನ್ನು ಹತ್ತಿಕ್ಕುವ ಬದಲು ವ್ಯಕ್ತಪಡಿಸುವುದು ಹೇಗೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. 'ಪ್ರಧಾನಿ ನರೇಂದ್ರ ಮೋದಿ ಕೂಡಾ ಭಾವನೆಗಳನ್ನು ಹತ್ತಿಕ್ಕಬೇಡಿ ಎಂದು ಇದಾಗಲೇ ಹೇಳಿದ್ದಾರೆ. ಈ ಬಗ್ಗೆ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಆದ್ದರಿಂದ ಏನೇ ಸಂದರ್ಭ ಬಂದರೂ ಒತ್ತಡಕ್ಕೆ ಒಳಗಾಗಬಾರದು. ನಿಮ್ಮ ಸ್ನೇಹಿತರು, ಕುಟುಂಬ, ಪೋಷಕರು, ಶಿಕ್ಷಕರು ಅಥವಾ ಯಾರೇ ಆಗಿರಲಿ, ಅವರ ಬಳಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಬೇಕು. ನಿಮ್ಮನ್ನು ನೀವು ವ್ಯಕ್ತಪಡಿಸಿಕೊಳ್ಳ,ಲು ಬರವಣಿಗೆ ಅದ್ಭುತ ಮಾರ್ಗವಾಗಿದೆ' ಎಂದಿದ್ದಾರೆ.
ಸೈಫ್ ಅಲಿ ಖಾನ್ ಕುಟುಂಬದಿಂದ ಪ್ರಧಾನಿ ಭೇಟಿ: ಮಕ್ಕಳಿಗಾಗಿ ಆಟೋಗ್ರಾಫ್, ಅಸಲಿ ಉದ್ದೇಶ ಇಲ್ಲಿದೆ...
ಈ ವಿಡಿಯೋ ಹಂಚಿಕೊಂಡಿರುವ ಪ್ರಧಾನಿಯವರು ಖಿನ್ನತೆಯ ಬಗ್ಗೆ ಮಕ್ಕಳಿಗೆ ಪಾಠ ಮಾಡುತ್ತಿರುವ ನಟಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ನಟಿ ದೀಪಿಕಾ ಪಡುಕೋಣೆ ಕೂಡ ಧನ್ಯವಾದ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕಾರ್ಯವನ್ನು ಶ್ಲಾಘಿಸಿರುವುದಕ್ಕೆ ಅವರು ಸಂತೋಷ ಹಂಚಿಕೊಂಡಿದ್ದಾರೆ. ಅಂದಹಾಗೆ, ಪರೀಕ್ಷೆ ಪೆ ಚರ್ಚಾದ ಎಪಿಸೋಡ್ ಫೆಬ್ರವರಿ 12ರ ಬೆಳಿಗ್ಗೆ 10 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಚಾನೆಲ್ ಹಾಗೂ ಡಿಡಿಯಲ್ಲಿ ಪ್ರಸಾರ ಕಾಣಲಿದೆ.
ಈ ಬಾರಿ ನಡೆಯುತ್ತಿರುವ 8ನೇ ವರ್ಷದ ಪರೀಕ್ಷಾ ಪೇ ಚರ್ಚಾ 8 ಸಂಚಿಕೆಗಳಲ್ಲಿ ಪ್ರಸಾರವಾಗುತ್ತಿದೆ. ಈ ಎಂಟು ಸಂಚಿಕೆಗಳಲ್ಲಿ ಕ್ರೀಡೆ, ಸಿನಿಮಾ, ತಂತ್ರಜ್ಞಾನ, ಶಿಕ್ಷಣ ಹೀಗೆ ನಾನಾ ಕ್ಷೇತ್ರಗಳ ಸಾಧಕರು ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ ವಿಷಯದಲ್ಲಿ ಮಾಹಿತಿ ಹಂಚಿಕೊಳ್ಳಲಿದ್ದಾರೆ. ದೀಪಿಕಾ ಪಡುಕೋಣೆ ಸೇರಿದಂತೆ ಮೇರಿ ಕೋಮ್, ಸದ್ಗುರು ಜಗ್ಗಿ ವಾಸುದೇವ್ ಮುಂತಾದ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಈ ಎಪಿಸೋಡ್ಗಳನ್ನು ಮಿಸ್ ಮಾಡದೆ ನೋಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ವರ್ಷದ ಕಾರ್ಯಕ್ರಮಕ್ಕೆ 5 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲು ಅರ್ಜಿ ಸಲ್ಲಿಸಿರುವುದು ವಿಶೇಷ.
450 ವರ್ಷಗಳ ಹಿಂದೆಯೇ ಮೋದಿ ಭವಿಷ್ಯ ನುಡಿದಿದ್ದ ನಾಸ್ಟ್ರಾಡಾಮಸ್ 2025ರ ಬಗ್ಗೆ ಶಾಕಿಂಗ್ ಭವಿಷ್ಯ!